ಮಳೆಗೆ ಮಡುಗಟ್ಟಿದ ಸುಳ್ಯ:ವಿದ್ಯುತ್ ಸ್ಥಗಿತ , ಮನೆಗಳಿಗೆ ಹಾನಿ

ಸುಳ್ಯ:ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಅಪರಾಹ್ನ ಬಿರುಗಾಳಿ ಸಹಿತ ಮಳೆಯಾಗಿದೆ.

ಉಬರಡ್ಕ ಮಿತ್ತೂರು ಗ್ರಾಮದ ಕಂದಡ್ಕ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬ ತುಂಡಾಗಿದ್ದು, ರಸ್ತೆ ಬಂದ್ ಆಗಿತ್ತು.
33 ಕೆ.ವಿ.ಲೈನ್‌ನಲ್ಲಿ ಗುಡ್ಡಡ್ಕ ಎಂಬ ಲ್ಲಿ ಮರದ ಗೆಲ್ಲು ಬಿದ್ದು ವಿದ್ಯುತ್ ಸರಬರಾಜು ಕಡಿತಗೊಂಡಿದೆ. 11 ಕೆವಿ ಲೈನ್‌ಗಳಲ್ಲಿ ಅಲ್ಲಲ್ಲಿ ಮರ ಬಿದ್ದು, ಗಾಳಿಗೆ ಕಂಬ ತುಂಡಾಗಿ ಹಾನಿ ಸಂಭವಿಸಿದೆ. ಪರಿಣಾಮ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ತಾಲೂಕಿನಲ್ಲಿ 20ಕ್ಕೂ ಹೆಚ್ಚು ಹೆಚ್‌ಟಿ ಕಂಬಗಳು ಹಾಗೂ 40 ಎಲ್‌ಟಿ ಕಂಬಗಳಿಗೆ ಹಾನಿ ಸಂಭವಿಸಿದೆ. ನಗರದಲ್ಲಿ 4 ಎಚ್‌ಟಿ ಹಾಗೂ 4 ಎಲ್‌ಟಿ ಕಂಬಗಳಿಗೆ ಹಾನಿ ಉಂಟಾಗಿದೆ.
ಪರಿವಾರಕಾನ ಬಳಿ ಮಹಮ್ಮದ್ ಎಂಬವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಸಂಪಾಜೆ ಗ್ರಾಮದ ಕೊಡಗು ಚೆಂಬು ವ್ಯಾಪ್ತಿಯ ಚಟ್ಟೆಕಲ್ಲು ಅಂಗನವಾಡಿ ಮೇಲೆ ಮರ ಬಿದ್ದು ಹಾನಿಯಾಗಿದೆ.
