ಭೂಮಿಯ ಧ್ರುವಗಳ ಅದ್ಭುತ ನೋಟ- ಸ್ಪೇಸ್ ಎಕ್ಸ್ ಫ್ರಾಮ್2 ಮಿಷನ್ ವೈರಲ್

ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಮಿಶನ್ ಸೆರೆ ಹಿಡಿದ ವಿಡಿಯೋ ಇದೀಗ ಹಲವು ಕುತೂಹಲ ಹುಟ್ಟು ಹಾಕಿದೆ. ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಕ್ಯಾಲಿಫೋರ್ನಿಯಾ(ಏ.02) ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಈಗಾಗಲೇ ಫ್ರಾಮ್2 ಮಿಶನ್ ಲಾಂಚ್ ಮಾಡಿದೆ. ಈ ಫ್ರಾಮ್2 ಮಿಷನ್ ಇದೀಗ ಅದ್ಭುತ ವಿಡಿಯೋ ಒಂದನ್ನು ಸೆರೆ ಹಿಡಿದಿದೆ. ವಿಶೇಷ ಅಂದರೆ ಇದು ಭೂಮಿ ಪೋಲ್ಸ್. ಭೂಮಿಯ ಧ್ರುವ ಭಾಗದ ವಿಡಿಯೋವನ್ನು ಸೆರೆ ಹಿಡಿದು ನೀಡಿದೆ. ಹಿಮ ಪ್ರದೇಶ, ಜ್ವಾಲಾಮುಖಿ, ಹಿಮ ನದಿ ಸೇರಿದಂತೆ ಅದ್ಭುತ ದೃಶ್ಯವನ್ನು ನೀಡಿದೆ. ಹಿಂದೆಂದೂ ನೋಡದ, ಈ ದೃಶ್ಯ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಮೇಲೆ ಚರ್ಚೆಗಳು ಶುರುವಾಗಿದೆ ಭೂಮಿ ಮೇಲೆ 90 ಡಿಗ್ರಿಯಿಂದ ವಿಡಿಯೋ ಸೆರೆ
ಸ್ಪೆಸ್ ಎಕ್ಸ್ ಸಂಸ್ಥೆಯ ಖಾಸಗಿ ಗಗನಯಾತ್ರಿಗಳ ತಂಡ ಫ್ರಾಮ್2 ಮಿಷನ್ ಅಡಿಯಲ್ಲಿ ಅಧ್ಯಯನಕ್ಕಾಗಿ ಬಾಹ್ಯಾಕಾಶದಲ್ಲಿದೆ. ಈ ತಂಡ ಅದ್ಭುತ ದೃಶ್ಯ ಸೆರೆ ಹಿಡಿದಿದೆ. ಭೂಮಿಯ ಧ್ರುವ(ಪೋಲ್ಸ್) ಪ್ರದೇಶಗಳ ವಿಡಿಯೋ ಬಿಡುಗಡೆ ಮಾಡಿದೆ. ಹಿಂದೆಂದೂ ನೋಡಿದರ ವಿಡಿಯೋ ಇದಾಗಿದೆ. ಕಾರಣ ಗಗನಯಾತ್ರಿಗಳು ಉತ್ತರ ಹಾಗೂ ಧಕ್ಷಿಣ ಧ್ರುವ ಎರಡನ್ನೂ ದಾಟಿದ್ದಾರೆ. ಈ ವಿಡಿಯೋವನ್ನು ಭೂಮಿಯ ಮೇಲೆ 90 ಡಿಗ್ರಿ ಕೋನದಲ್ಲಿ ನಿಂತು ಸೆರೆ ಹಿಡಿಯಲಾಗಿದೆ. ಹೀಗೆ ಭೂಮಿ ಮೇಲೆ 90 ಡಿಗ್ರಿ ಕೋನದಲ್ಲಿ ನಿಂತಾಗ ಭೂಮಿಯ ಪೋಲ್ಸ್ ಅಂದರೆ ಧ್ರುವಗಳ ಭಾಗ ಗೋಚರಿಸುತ್ತದೆ. ಬಾಹ್ಯಾಕಾಶದಿಂದ ಮಾತ್ರ ಈ ನೋಟ ಸಾಧ್ಯ. ಆದರೆ ಇದುವರಿನ ಅಧ್ಯಯನ ಹಾಗೂ ಬಾಹ್ಯಾಕಾಶ ಪ್ರಯಾಣದಲ್ಲಿ ಭೂಮಿ ಮೇಲೆ 90 ಡಿಗ್ರಿ ಕೋನದಲ್ಲಿ ಯಾರು ತೆರಳಿಲ್ಲ. ಅಥವಾ ಅಲ್ಲಿಂದ ಭೂಮಿಯನ್ನು ನೋಡುವ ಸಾಹಸ ಮಾಡಿಲ್ಲ. ಆದರೆ ಮೊದಲ ಬಾರಿಗೆ ಈ ಪ್ರಯತ್ನವೂ ನಡೆದಿದೆ. ಸ್ಪೇಸ್ ಎಕ್ಸ್ ಫ್ರಾಮ್ 2 ಮಿಷನ್ ನೌಕೆ ಭೂಮಿಯ ಧ್ರುವಗಳ ಅಧ್ಯಯನ ನಡೆಸುತ್ತಿದೆ. ಮಾರ್ಚ್ 30 ರಂದು ಫ್ಲೋರಿಡಾದಿಂದ ಉಡ್ಡಯನಗೊಂಡ ಈ ನೌಕೆ ಇದೀಗ ಭೂಮಿಯ ಮೇಲೆ ಅಂದರೆ ಬಾಹ್ಯಾಕಾಶದಿಂದ ಭೂಮಿ ಪೋಲ್ಸ್ ಅಧ್ಯಯನ ನಡೆಸುತ್ತಿದೆ. 19ನೇ ಶತಮಾನದಲ್ಲಿ ನಾರ್ವೆಯಿಂದ ಹೊರಡ ಹಡುಗು ಭೂಮಿಯ ಭೌಗೋಳಿಕ ಭಾಗದ ಅನ್ವೇಷಣೆ ಮಾಡುವ ಪ್ರಯತ್ನ ಮಾಡಿತ್ತು. ಈ ನೌಕೆಯ ಫ್ರಾಮ್2 ಹೆಸರನ್ನೇ ಇದೀಗ ಸ್ಪೆಸ್ ಎಕ್ಸ್ ಮಿಷನ್ಗೆ ಇಡಲಾಗಿದೆ. ಇದೀಗ ಸ್ಪೇಸ್ ಎಕ್ಸ್ ಮಿಷನ್ ಭೂಮಿಯ ಧ್ರುವಗಳ ಅಧ್ಯಯನ ನಡೆಸಲಿದೆ. ಎಲಾನ್ ಮಸ್ಕ್ ಪ್ರತಿಕ್ರಿಯೆ
ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೀಗ ಎಲಾನ್ ಮಸ್ಕ್ ಕೂಡ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮಾನವರು ಭೂಮಿಯ ಧುರ್ವಗಳ ಸುತ್ತಲಿನ ಕಕ್ಷೆಯಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಾವೆಂದು ನೋಡಿದರ ಭೂಮಿಯ ಭಾಗ
ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣಲಿದೆ ಅನ್ನೋ ಹಲವು ವಿಡಿಯೋಗಳನ್ನು ಇಸ್ರೋ, ನಾಸಾ ಸೇರಿದಂತೆ ಹಲವು ಸಂಸ್ಥೆಗಳು ಬಿಡುಗಡೆ ಮಾಡಿದೆ. ಆದರೆ ಭೂಮಿಯ ಧ್ರುವಗಳ ಭಾಗದ ದೃಶ್ಯ ಇದೆ ಮೊದಲು. ಈ ಮಿಷನ್ ಭೂಮಿಯ ಧ್ರುವಗಳ ಅಧ್ಯಯನದ ಕಾರಣ ಅದ್ಭುತ ವಿಡಿಯೋ ಲಭ್ಯವಾಗಿದೆ. ಈ ಅಧ್ಯಯನದಲ್ಲಿ ಇದೇ ರೀತಿಯ ಮತ್ತಷ್ಟು ಕೌತುಗಳು ಹೊರಬರಲಿದೆ.