Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫೇರ್‌ವೆಲ್‌ ಪಾರ್ಟಿಯಲ್ಲಿ ಹೆಚ್ಚು ತಿಂದಿದ್ದಕ್ಕೆ ವಿದ್ಯಾರ್ಥಿಗಳು ಸಸ್ಪೆಂಡ್!

Spread the love

ಲಕ್ನೋ: 10ನೇ ತರಗತಿಯ ವಿದ್ಯಾರ್ಥಿಗಳ ಫೇರ್‌ವೆಲ್‌ (Farewell) ಪಾರ್ಟಿಯಲ್ಲಿ 9ನೇ ತರಗತಿಯ ಕೆಲ ವಿದ್ಯಾರ್ಥಿಗಳು (Students) ಅತಿಯಾಗಿ ಚೌಮೈನ್ (Chowmein) ತಿಂದಿದ್ದಕ್ಕಾಗಿ ಅವರನ್ನು ಶಾಲೆಯಿಂದ ಅಮಾನತು (Suspension) ಮಾಡಲಾದ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಶಾಲೆಯೊಂದರಲ್ಲಿ (School) ನಡೆದಿದೆ.

ಈ ಘಟನೆ ಅಚ್ಚರಿ, ಗೊಂದಲಕ್ಕೂ ಕಾರಣವಾಗಿದೆ.

ಚಿನ್ಹಾಟ್ ಪ್ರದೇಶದ ಸೇಂಟ್ ಮೇರಿ ಶಾಲೆಯಲ್ಲಿ 10 ನೇ ತರಗತಿಯ ಬೀಳ್ಕೊಡುಗೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಪ್ರಕಾರ 9 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಆಹಾರ ಕೌಂಟರ್‌ಗೆ ಹೋಗಿ ಮೂರು ನಾಲ್ಕು ಬಾರಿ ಚೌಮಿಯನ್ ಹಾಕಿಸಿಕೊಂಡು ಸೇವಿಸಿದ್ದಾರೆ. ಬಳಿಕ ಇತರ ಕೆಲ ವಿದ್ಯಾರ್ಥಿಗಳು ಈ ಬಗ್ಗೆ ಶಾಲಾ ಪ್ರಾಂಶುಪಾಲರಿಗೆ ತಿಳಿದ್ದಾರೆ. ಆಗ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಎರಡು ದಿನಗಳ ಕಾಲ ಅಮಾನತುಗೊಳಿಸಿದೆ.

ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಬಗ್ಗೆ ಶಾಲೆಯ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ಧ್ವನಿ ಟಿಪ್ಪಣಿ ಮೂಲಕ ತಿಳಿಸಲಾಗಿದೆ. ಚೌಮೈನ್ ಕೌಂಟರ್‌ನಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಈ ಸಂದೇಶ. ಕೈಗಳನ್ನು ಬಳಸಿ 3-4 ಬಾರಿ ಹಾಕಿಸಿಕೊಂಡು ಊಟ ಮಾಡಿದವರನ್ನು ಎರಡು ದಿನಗಳವರೆಗೆ ಅಮಾನತುಗೊಳಿಸಲಾಗುತ್ತದೆ ಎಂದು ಧ್ವನಿ ಟಿಪ್ಪಣಿಯಲ್ಲಿ ಹೇಳಲಾಗಿದೆ. ಅಮಾನತು ಅವಧಿಯ ನಂತರ ವಿದ್ಯಾರ್ಥಿಗಳು ಶಾಲೆಗೆ ಹಿಂತಿರುಗಬೇಕೇ ಅಥವಾ ಬೇಡವೇ ಎಂಬುದನ್ನು ಅದೇ ವಾಟ್ಸಪ್ ಗುಂಪಿನ ಮೂಲಕ ತಿಳಿಸಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ.

ಆದರೆ ಮರುದಿನ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಬಂದಿದ್ದಾರೆ. ಆಗ ಪ್ರಾಂಶುಪಾಲರು ಮಕ್ಕಳನ್ನು ಗೇಟ್ ಬಳಿಯೇ ನಿಲ್ಲಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಕೆಲವರು ತಮ್ಮನ್ನು ಕೋಲಿನಿಂದ ಓಡಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆದ ಘಟನೆಯನ್ನು ತಮ್ಮ ಕುಟುಂಬಗಳಿಗೆ ತಿಳಿಸಿದ್ದಾರೆ. ಶೀಘ್ರವೇ ಈ ಘಟನೆ ಪ್ರತಿಭಟನೆಗೆ ತಿರುಗಿದೆ.

ಈ ಘಟನೆ ಸ್ಥಳೀಯರಲ್ಲಿ ಭಾರೀ ಗಮನ ಸೆಳೆದ ನಂತರ, ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ವಾಪಸ್‌ ಶಾಲೆಗೆ ಮರಳುವಂತೆ ಕೇಳಿಕೊಂಡಿದೆ. ನಂತರ ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಶಾಲೆಯು, ಕಳೆದ 25 ವರ್ಷಗಳಲ್ಲಿ ಇಂತಹ ವರ್ತನೆ ಸಂಸ್ಥೆಯಲ್ಲಿ ಎಂದಿಗೂ ನಡೆದಿಲ್ಲ. ಆಹಾರ ಕೌಂಟರ್‌ನಲ್ಲಿ ವಿದ್ಯಾರ್ಥಿಗಳು ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ ಅವರ ಮೇಲೆ ಶಿಸ್ತು ಕ್ರಮವಾಗಿ ಅವರನ್ನು ಅಮಾನತು ಮಾಡಲಾಗುತ್ತು ಎಂದು ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *