ಪೋಷಕರ ಬುದ್ಧಿವಾದಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹ*ತ್ಯೆ ಚಿಕ್ಕಮಗಳೂರಿನಲ್ಲಿ ಶೋಕಸಾಗರ

ಚಿಕ್ಕಮಗಳೂರು: ಕಾಲ ಹೇಗಾಗಿದೆ ಅಂದ್ರೆ ಪೋಷಕರು (Parents) ತಮ್ಮ ಮಕ್ಕಳಿಗೆ ಬುದ್ಧಿ ಮಾತು ಹೇಳುವುದೇ ದೊಡ್ಡ ತಪ್ಪಾಗಿ ಹೋಗಿದೆ. ಯಾಕಂದ್ರೆ ಹೆತ್ತವರು ಬೈದರೆ ಸಾಕು ಮಕ್ಕಳು ಆತ್ಮಹತ್ಯೆ (Suicide) ದಾರಿ ಹಿಡಿಯುತ್ತಿದ್ದಾರೆ. ಅದರಂತೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಟಿವಿ (Television) ನೋಡೋದನ್ನು ಕಮ್ಮಿ ಮಾಡು ಅಂದಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೇಲ್ನಿಂದ ನೇಣು ಬಿಗಿದುಕೊಂಡು ಸುಪ್ರಿತಾ ಎಂಬ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೊಪ್ಪ (Koppa) ತಾಲೂಕಿನ ಬಸರಿಕಟ್ಟೆ ಸಮೀಪದ ಹೊನ್ನಗುಂಡಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.


ತಾಯಿ ಬೈದಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ
12 ವರ್ಷದ ಬಾಲಕಿ ಊಟ ಮಾಡುವಾಗ ಟಿವಿ ನೋಡುತ್ತಿದ್ದಳು. ಈ ವೇಳೆ ಬಾಲಕಿಯ ಕೈಯಿಂದ ಊಟದ ತಟ್ಟೆ ಜಾರಿ ಬಿದ್ದಿದೆ. ಇದಕ್ಕೆ ಕೋಪಗೊಂಡ ತಾಯಿ ಊಟ ಮಾಡುವಾಗಲೂ ಟಿವಿ ನೋಡ್ತೀಯಾ, ಟಿವಿ ನೋಡೋದನ್ನ ಕಡಿಮೆ ಮಾಡು ಎಂದು ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಮನನೊಂದಿದ್ದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೋಷಕರು ಕೆಲಸಕ್ಕೆ ತೆರಳಿ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಮಗಳ ಮೃತದೇಹ ಕಂಡು ಹೆತ್ತವರು ಶಾಕ್ ಆಗಿದ್ದಾರೆ. ಸದ್ಯ ಜಯಪುರ ಸರ್ಕಾರಿ ಆಸ್ಪತ್ರೆಗೆ ಬಾಲಕಿಯ ಮೃತದೇಹವನ್ನು ರವಾನಿಸಲಾಗಿದೆ.
ಇತ್ತೀಚೆಗೆ ಇಂತಹ ಘಟನೆಗಳು ನಡೆಯುತ್ತಿದ್ದು, ಇದರಿಂದ ಪೋಷಕರು ತಮ್ಮ ಮಕ್ಕಳೂ ತಪ್ಪು ಮಾಡಿದರು ಬುದ್ಧಿವಾದ ಹೇಳಲು, ಬೈಯಲು ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯ ಪ್ರಕರಣಗಳಿಂದ ಚಿಕ್ಕ ಚಿಕ್ಕ ಮಕ್ಕಳ ಮಾನಸಿಕ ಸ್ಥಿತಿಯ ಗಂಭೀರವಾದ ಪ್ರಶ್ನೆ ಉದ್ಭವಿಸಿವೆ.