Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿಯಲ್ಲಿ ಮುಂಜಾನೆ ತೀವ್ರ ಭೂಕಂಪನ – ಜನರಲ್ಲಿ ಭೀತಿ

Spread the love

ದೆಹಲಿ-ಎನ್‌ಸಿಆರ್‌ನಲ್ಲಿ (Delhi NCR) ಇಂದು ಮುಂಜಾನೆ ತೀವ್ರ ಭೂಕಂಪನ ಸಂಭವಿಸಿದೆ. ಈ ಭೂಕಂಪ ಎಷ್ಟು ಪ್ರಬಲವಾಗಿತ್ತದರೆ ಹಾಸಿಗೆಯಿಂದ ಕಿಟಕಿಯವರೆಗೆ ಎಲ್ಲವೂ ಅಲುಗಾಡಲು ಪ್ರಾರಂಭಿಸಿತು. ಹಲವು ವರ್ಷಗಳ ನಂತರ, ಸೋಮವಾರ ಬೆಳಿಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಇಂತಹ ಬಲವಾದ ಭೂಕಂಪನದ ಅನುಭವವಾಗಿದೆ.

ಭೂಕಂಪದ ಪರಿಣಾಮವಾಗಿ ಭೂಮಿಯು ಕೆಲವು ಸೆಕೆಂಡುಗಳ ಕಾಲ ನಡುಗಿತು . ಗಾಢ ನಿದ್ರೆಯಲ್ಲಿದ್ದ ಜನರು ಸಹ ಭಯದಿಂದ ಮನೆಗಳಿಂದ ಹೊರಗೆ ಓಡಲು ಪ್ರಾರಂಭಿಸಿದರು.
ಈ ಭೂಕಂಪದಲ್ಲಿ ಯಾವುದೇ ಹಾನಿಯಾದ ಬಗ್ಗೆ ಇದುವರೆಗೆ ಮಾಹಿತಿ ಬಂದಿಲ್ಲ. ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಬೆಳಿಗ್ಗೆ 5:30 ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ.


Spread the love
Share:

administrator

Leave a Reply

Your email address will not be published. Required fields are marked *