ಕುತ್ತಿಗೆ ಹಿಸುಕಿ ಪತ್ನಿಯ ಕೊಲೆ; ಮಲಗಿದ್ದ ಮಗಳಿಗೆ ಕೊಲೆ ನಡೆದ ಬಗ್ಗೆ ಸುಳಿವೇ ಇಲ್ಲ

ನವದೆಹಲಿ: ವ್ಯಕ್ತಿಯೊಬ್ಬ ಮಗಳಿಗೆ ತಿಳಿಯದಂತೆ ಆಕೆಯ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನು ಕೊಲೆ(Murder) ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರಿಗೆ ಕರೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ಕೇಶವ ಪುರಂನಲ್ಲಿ ನಡೆದಿದೆ. ದಿನೇಶ್ ಶರ್ಮಾ ಎಂಬ ವ್ಯಕ್ತಿ ತನ್ನ ಪತ್ನಿ ಸುಷ್ಮಾ ಶರ್ಮಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.ನಂತರ ಆಕೆ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಲಾಗಿದೆ.

ಪೊಲೀಸರು ಮನೆಗೆ ತಲುಪಿದಾಗ, 40 ವರ್ಷದ ಮಹಿಳೆಯ ಶವ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ ಮತ್ತು ದಂಪತಿಯ 11 ವರ್ಷದ ಮಗಳು ಕೂಡ ಅದೇ ಕೋಣೆಯಲ್ಲಿದ್ದಳು. ಆದರೆ ಆಕೆ ಹಾಸಿಗೆಯ ಮೇಲೆ ಮಲಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ತನ್ನ ಹೆಂಡತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ಪತಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಬದಲಾಗಿ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.
ರಾತ್ರಿ 12 ಅಥವಾ 1 ಗಂಟೆ ಸುಮಾರಿಗೆ ಆಕೆಯ ಕೊಲೆಯಾಗಿದೆ. ಆದರೆ ಪೊಲೀಸರು ಇಂದು ಬೆಳಗ್ಗೆ 6 ಗಂಟೆಗೆ ನಮಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೃತ ಮಹಿಳೆಯ ಸಹೋದರ ಅಶೋಕ್ ಕುಮಾರ್ ಹೇಳಿದ್ದಾರೆ.
ಆರೋಪಿ ಪತಿಗೆ ವಿವಾಹೇತರ ಸಂಬಂಧವಿತ್ತು ಎಂದು ಕುಟುಂಬದವರು ಆರೋಪಿಸಿದ್ದು, ಅದೇ ಕೊಲೆಗೆ ಕಾರಣ ಎಂದು ಹೇಳಿದ್ದಾರೆ.
ಊಟದ ವಿಷಯಕ್ಕೆ ದಂಪತಿ ನಡುವೆ ಮನೆಯಲ್ಲಿ ಜಗಳವಾಗಿತ್ತು ಮತ್ತು ನಮ್ಮ ಬಾವ ನಮ್ಮ ಸಹೋದರಿಯನ್ನು ಕೊಂದ್ದಾರೆ ಎಂದು ಮೃತಳ ಸಹೋದರ ಹೇಳಿದ್ದಾಗಿ ಪೊಲೀಸರು ಹೇಳುತ್ತಾರೆ. ಆದರೆ ನಿಜವಾದ ಕಾರಣ ಬಾವನ ವಿವಾಹೇತರ ಸಂಬಂಧ. ಅಕ್ಕ ವರ್ಷಗಳಿಂದ ಈ ಬಗ್ಗೆ ಕುಟುಂಬದವರ ಬಳಿ ಅಳಲುತೋಡಿಕೊಂಡಿದ್ದಾಗಿ ತಿಳಿಸಿದ್ದಾರೆ.