Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೀನಾದಲ್ಲಿ ಅವಳಿ ಸಹೋದರಿಯರ ವಿಚಿತ್ರ ಕಥೆ: ದತ್ತು ನೀಡಿದ್ದರೂ, ವಿಧಿಯಾಟದಿಂದ ಮತ್ತೆ ಒಂದಾದರು!

Spread the love

Yellow Alley Twins Baby Boys Wall Poster|Twins Baby Sleeping Wall Poster  For Expecting Mothers|1Pc Baby Wall Poster For Hospital, Bedroom, Kids  Room, ...

ಇದೊಂದು ಅವಳಿ ಮಕ್ಕಳ ಕತೆ. ಆದರೆ ಇದು ಯಾವ ಸಿನಿಮಾಗೂ ಕಡಿಮೆ ಏನಿಲ್ಲ, ಈ ಅವಳಿ ಮಕ್ಕಳ ಪೋಷಕರು ಈ ಮಕ್ಕಳನ್ನು ಬೇರೆ ಬೇರೆ ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ನೀಡಿದ್ದರು. ಹೀಗಾಗಿ ಮಕ್ಕಳಿಗೆ ತಮ್ಮ ಪೂರ್ವಪರ ಹಿನ್ನೆಲೆಗಳು ತಿಳಿದಿರಲಿಲ್ಲ, ಆದರೆ ವಿಧಿಯಾಟ ಹೇಗಿದೆ ನೋಡಿ.

ತಮ್ಮ 17ನೇ ಹರೆಯಕ್ಕೆ ಇವರಿಬ್ಬರಿಗೆ ತಾವಿಬ್ಬರು ಒಂದೇ ತಾಯಿಯ ಮಕ್ಕಳು ಎಂಬುದರ ಅರಿವಾಗಿದೆ.

ಕೇವಲ ಮೈಲುಗಳಷ್ಟು ದೂರದಲ್ಲಿ ಅವರಿಬ್ಬರೂ ಬೇರೆಯದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಅವರ ಜೀವನವು ಪರಸ್ಪರ ವಿಲಕ್ಷಣವಾದ ಕಾಕತಾಳೀಯಗಳಿಂದ ತುಂಬಿತ್ತು. ಅವರಿಬ್ಬರ ಗುಣನಡತೆಯಿಂದ ಹಿಡಿದು ಇತರ ವರ್ತನೆಗಳವರೆಗೆ ತಮ್ಮ ಮಕ್ಕಳನ್ನು ಒಂದೇ ಶಾಲೆಗೆ ಸೇರಿಸಿರುವುದು , ಹೀಗೆ ಪ್ರತಿಯೊಂದು ಒಂದೇ ತರಹದ ಗುಣಗಳಿಂದಾಗಿ ಅವರು ಸ್ನೇಹಿತೆಯರಾಗಿದ್ದರು. ಆದರೆ ತಾವು ಸ್ವಂತ ಸೋದರಿಯರು ಒಂದೇ ತಾಯಿಯ ಮಕ್ಕಳು ಎಂಬುದರ ಅರಿವು ಅವರಿಗಿರಲಿಲ್ಲ,

ಈಗ ಇವರಿಬ್ಬರು 37ರ ಹರೆಯದಲ್ಲಿದ್ದು, ತಮ್ಮ ಭಾವುಕ ಪುನರ್ಮಿಲನಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ತಮ್ಮ ಈ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ. ಇವರಿಬ್ಬರು ಜೊತೆಯಾಗಿ ಸೇರಿ ಚೀನಾದಲ್ಲಿ ಸೋಶಿಯಲ್ ಮೀಡಿಯಾ ಪೇಜೊಂದನ್ನು ಮುನ್ನಡೆಸುತ್ತಿದ್ದು, ಇವರ ಕತೆ ಈಗ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ, ಜಾಂಗ್ ಗುವಾಕ್ಸಿನ್ ಮತ್ತು ಹೈ ಚಾವೊ ಅವರನ್ನು ಕೇವಲ 10 ದಿನಗಳಿರುವಾಗ ಪ್ರತ್ಯೇಕ ಪೋಷಕರಿಗೆ ದತ್ತು ನೀಡಲಾಯ್ತು. ಏಕೆಂದರೆ ಅವರ ಜೈವಿಕ ಪೋಷಕರಿಗೆ ಅವರನ್ನು ಸಾಕುವ ಸಾಮರ್ಥ್ಯ ಇರಲಿಲ್ಲ. ಹೀಗಾಗಿ ದತ್ತು ನೀಡಿದ ಕುಟುಂಬವು ದತ್ತು ಪಡೆದ ಪೋಷಕರಿಗೆ ಒಂದು ಷರತ್ತು ವಿಧಿಸಿದ್ದರು. ಈ ಇಬ್ಬರೂ ಮಕ್ಕಳು ಹೆಬೈ ಪ್ರಾಂತ್ಯದ ಒಂದೇ ನಗರದಲ್ಲಿ ಬೆಳೆಯಬೇಕು ಎಂಬುದು ಆ ಷರತ್ತಾಗಿತ್ತು. ಹೀಗಾಗಿ ಪ್ರತ್ಯೇಕವಾಗಿಯೇ ಬೆಳೆದ ಈ ಅವಳಿ ಮಕ್ಕಳಿಗೆ ಪರಸ್ಪರರ ಇರುವಿಕೆಯ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ, ಆದರೆ ವಿಧಿ ಅವರನ್ನು ಕಡೆಗೂ ಒಂದು ಮಾಡಿದೆ.

ಹೈ ಚಾವೋಗೆ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ತನ್ನಂತೆಯೇ ಕಾಣುವ ಅಂಗಡಿ ಸಹಾಯಕಿಯೊಬ್ಬಳು ಇದ್ದಾಳೆ ಎಂಬ ಬಗ್ಗೆ ತನ್ನ ಸಹಪಾಠಿಯೊಬ್ಬಳು ಹೇಳಿದ್ದಳು. ಇದರಿಂ ಕುತೂಹಲದಿಂದ ನೋಡುವುದಕ್ಕೆ ಹೋದಾಗ ಈ ಸೋದರಿಯರ ಪುನರ್ಮಿಲವಾಗಿದೆ. ತಾನು ಮೊದಲ ಬಾರಿ ಜಾಂಗ್ ಗುವಾಕ್ಸಿನ್‌ಳನ್ನು ಭೇಟಿ ಮಾಡಿದಾಗ ಹೈ ಚಾವೋಗೆ ಕೂಡಲೇ ಒಂದು ಅರಿಯದ ಬಂಧವೊಂದು ರೂಪುಗೊಂಡಿತ್ತಂತೆ.

ಇದಾದ ನಂತರ ನಡೆದಿದ್ದು ವಿಚಿತ್ರ ಹೋಲಿಕೆಗಳ ಸರಮಾಲೆ. ಅವರಿಬ್ಬರೂ ಒಂದೇ ಜನ್ಮ ದಿನಾಂಕವನ್ನು ಹೊಂದಿದ್ದರು. ಇಬ್ಬರೂ ಸುಮಾರು ಮೂರು ತಿಂಗಳ ವಯಸ್ಸಿನಲ್ಲಿರುವಾಗ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಬದುಕಿ ಬಂದಿದ್ದರು.ಒಂದೇ ರೀತಿ ಇದ್ದರೂ, ಮ್ಯಾಚಿಂಗ್ ಕೇಶವಿನ್ಯಾಸ ಹೊಂದಿದ್ದರು ಮತ್ತು ಒಂದೇ ರೀತಿಯ ಆಹಾರವನ್ನು ಸಹ ಇಷ್ಟಪಡುತ್ತಿದ್ದರು. ಹೀಗಾಗಿ ನಾವು ಉತ್ತಮ ಸ್ನೇಹಿತರಾದೆವು ಮತ್ತು ಎಲ್ಲದರ ಬಗ್ಗೆ ಮಾತನಾಡಿದೆವು ಎಂದು ಹೈ ಚಾವೊ ನೆನಪಿಸಿಕೊಂಡಿದ್ದಾರೆ.

ಇವರಿಬ್ಬರು ಅವಳಿಗಳು ಎಂಬುದು ದತ್ತು ಪಡೆದ ಎರಡೂ ಕುಟುಂಬಗಳಿಗೂ ತಿಳಿದಿತ್ತು. ಆದರೆ ಅವರು ಮಕ್ಕಳಿಂದ ಈ ರಹಸ್ಯವನ್ನು ಮುಚ್ಚಿಟ್ಟಿದ್ದರು. ಏಕೆಂದರೆ ಜನ್ಮ ನೀಡಿದ ಪೋಷಕರು ಈ ಮಕ್ಕಳನ್ನು ಮರಳಿ ಪಡೆಯಲು ಪ್ರಯತ್ನಿಸಬಹುದು ಎಂಬ ಭಯ ಅವರದಾಗಿತ್ತು. ಹೀಗಾಗಿ ಇವರಿಬ್ಬರು ಪರಿಚಯವಾಗಿ ಸುಮಾರು 14 ತಿಂಗಳ ನಂತರವೇ ಕುಟುಂಬಗಳು ಅಂತಿಮವಾಗಿ ಸತ್ಯವನ್ನು ಇವರ ಮುಂದೆ ಬಹಿರಂಗಪಡಿಸಿದರು. ಹಾಗೆಯೇ ಯಾರು ದೊಡ್ಡವರು ಎಂಬುದನ್ನು ತಿಳಿಯುವುದಕ್ಕೆ ಇಬ್ಬರೂ ರಾಕ್ ಪೇಪರ್ ಸೀಸರ್ ಆಟವನ್ನು ಅವರು ಆಡಿದ್ದರು. ಅಂತಿಮವಾಗಿ ಈ ಆಟದಲ್ಲಿ ಜಾಂಗ್ ಗೆದ್ದರು ಹಾಗೂ ಅವರ ಕುಟುಂಬವೂ ಕೂಡ ಆಕೆಯೇ ದೊಡ್ಡವಳು ಎಂಬುದನ್ನು ಖಚಿತಪಡಿಸಿದರು ಎಂದು ಈ ಸೋದರಿಯರು ಹೇಳಿಕೊಂಡಿದ್ದಾರೆ.

ಇವರ ಬದುಕಿನಲ್ಲಿ ನಡೆದಿರುವ ಕಾಕತಾಳೀಯವೆನಿಸುವ ಒಂದೇ ತರಹದ ಘಟನೆಗಳು ಒಂದೆರಡಲ್ಲ, ಇಬ್ಬರೂ ಒಂದೇ ನೆರೆಹೊರೆಯ ವಸತಿ ಸಂಕೀರ್ಣಗಳಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದರು. ಪ್ರಸ್ತುತ 37 ವರ್ಷ ವಯಸ್ಸಿನ ಇವರಿಬ್ಬರಿಗೂ 13 ವರ್ಷದ ಮಕ್ಕಳಿದ್ದಾರೆ. ಆಕಸ್ಮಿಕ ಹಾಗೂ ಅಚ್ಚರಿ ಎಂಬಂತೆ ಅವರಿಬ್ಬರನ್ನು ಒಂದೇ ಶಾಲೆಯಲ್ಲಿ ಒಂದೇ ತರಗತಿಗೆ ಸೇರಿಸಲಾಗಿದೆ.

ಇನ್ನು ಅವರ ಮಕ್ಕಳು ಕೂಡ ಬಹುತೇಕ ಒಬ್ಬರನ್ನೊಬ್ಬರು ಹೋಲುತ್ತಾರೆ. ಅವರ ಒಂದೇ ತರಹದ ಹೋಲಿಕೆಯಿಂದ ಶಿಕ್ಷಕರು ಕೂಡ ಗೊಂದಲಕ್ಕೊಳಗಾಗುತ್ತಾರೆ. ಕೆಲವೊಮ್ಮೆ ನಮ್ಮಲ್ಲಿ ಒಬ್ಬರು ಮಾತ್ರ ಶಾಲೆಗೆ ಹೋಗುತ್ತಾರೆ, ಮತ್ತು ಶಿಕ್ಷಕರು ಅವರಿಬ್ಬರ ನಡುವಣ ವ್ಯತ್ಯಾಸವನ್ನು ಗಮನಿಸುವುದಿಲ್ಲಎಂದು ಈ ಸೋದರಿಯರು ಹೇಳುತ್ತಾರೆ.

ಪ್ರಸ್ತುತ ಈ ಅವಳಿ ಸೋದರಿಯರು ಜೊತೆಯಾಗಿ ಸಾಮಾಜಿಕ ಜಾಲತಾಣವೊಂದನ್ನು ಮುನ್ನಡೆಸುತ್ತಿದ್ದು, 62 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. ಇತ್ತೀಚೆಗೆ ತಮ್ಮ ಭಾವುಕ ಪುನರ್ಮಿಲನದ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತ ಈ ಸೋದರಿಯರು ಕಳೆದ ಎರಡು ದಶಕಗಳಲ್ಲಿ ಪ್ರತಿ ದಿನವೂ ಸಂತೋಷದಿಂದ ತುಂಬಿತ್ತು. ನಿಮ್ಮನ್ನು ಭೇಟಿಯಾಗಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಮುಂದಿನ ಎರಡು ದಶಕಗಳನ್ನು ಇದೇ ರೀತಿ ಎದುರು ನೋಡೋಣ ಎಂದು ಪೋಸ್ಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *