Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ವಿಚಿತ್ರ ಜಾಹೀರಾತು ವೈರಲ್: ‘ಪತ್ನಿ ಕಾಣೆಯಾಗಿದ್ದಾಳೆ’ ಎಂಬ ಪೋಸ್ಟರ್‌ಗಳು ಸದ್ದು

Spread the love

ಬೆಂಗಳೂರು: ಕಂಪನಿ ತಮ್ಮ ಉತ್ಪನ್ನಗಳು ಹಾಗೂ ಕಂಪನಿಯ ಬಗ್ಗೆ ಪ್ರಚಾರ ಮಾಡಲು, ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಜಾಹೀರಾತನ್ನು (Advertisement) ನೀಡುತ್ತವೆ. ಆದರೆ ಈ ಜಾಹೀರಾತು ನೋಡಿಯೇ ಎಷ್ಟೋ ಜನರು ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಆದರೆ ಇದೀಗ ಬೆಂಗಳೂರಿನ ರಸ್ತೆ ಬದಿ ಹಾಗೂ ಬಸ್ ಸ್ಟ್ಯಾಂಡ್‌ಗಳಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎನ್ನುವ ವಿಶಿಷ್ಟ ಹಾಗೂ ವಿಚಿತ್ರ ಜಾಹೀರಾತೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಜಾಹೀರಾತಿನಲ್ಲಿ ಗಂಡಂಡಿರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

@e4mtweet ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಬೆಂಗಳೂರಿನ ನಗರದಾದಂತ್ಯ ವಿಚಿತ್ರವೆನಿಸುವ ಜಾಹೀರಾತು ವೈರಲ್ ಆಗ್ತಿದೆ. ಈ ಜಾಹೀರಾತಿನಲ್ಲಿ ಅತುಲ್‌ ಪತ್ನಿ ಕಾಣೆಯಾಗಿದ್ದಾಳೆ, ನಿತಿನ್‌ ಪತ್ನಿ ಕಾಣೆಯಾಗಿದ್ದಾಳೆ, ರವಿ ಪತ್ನಿ ಕಾಣೆಯಾಗಿದ್ದಾಳೆ ಈ ರೀತಿಯ ವಿಚಿತ್ರ ಜಾಹೀರಾತುಗಳು ಬಸ್ ಸ್ಟ್ಯಾಂಡ್, ಫ್ಲೆಕ್ಸ್ ಹಾಗೂ ರಸ್ತೆಬದಿಯ ಬಿಲ್‌ ಬೋರ್ಡ್‌ನಲ್ಲಿ ಕಾಣಬಹುದು.

ಆಗಸ್ಟ್ 29 ರಂದು ಶೇರ್ ಮಾಡಲಾದ ವಿಚಿತ್ರ ಜಾಹೀರಾತಿನ ಫೋಟೋವು ನೆಟ್ಟಿಗರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಈ ಜಾಹೀರಾತಿನ ಒಳ ಅರ್ಥ ಏನಿರಬಹುದು ನೀವೇ ಗೆಸ್‌ ಮಾಡಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಗೆ ಬಳಕೆದಾರರು, ಈ ಜಾಹೀರಾತು ನೋಡಲು ಕುತೂಹಲಕರವಾಗಿದೆ, ಆದರೆ ಈ ರೀತಿ ಜಾಹೀರಾತು ನೀಡಿರುವುದು ಯಾಕಾಗಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಮೂವರ ಪತ್ನಿಯರು ಒಂದೇ ಸಲ ನಾಪತ್ತೆಯಾಗಲು ಹೇಗೆ ಸಾಧ್ಯ. ಈ ಜಾಹೀರಾತಿನಲ್ಲಿ ಏನೋ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಕೆಲವು ಜಾಹೀರಾತು ನೋಡಿದಾಗ ಕುತೂಹಲದೊಂದಿಗೆ ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *