Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ: 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ಪತ್ನಿ ಸಂಗೀತಾ ನಿರ್ಧಾರ

Spread the love

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ (Sangeetha) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ (Divorce) ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ವಿಜಯ್ ಅವರು ಈಗ ಆಸಕ್ತಿ ಹೊಂದಿದ್ದಾರೆ. ಆದರೆ, ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು ಕಪ್ಪು ಚುಕ್ಕಿ ಆಗಲಿದೆ.
ಚೆಂಗಲ್​ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಫೆಬ್ರವರಿ 27ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ವಿಜಯ್ ಅವರು ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ. ನಟಿಯ ಜೊತೆ ವಿಜಯ್ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಆರೋಪ ಮಾಡಿದ್ದು, ಕೋರ್ಟ್ ವಿಚಾರಣೆ ವೇಳೆ ಆ ನಟಿಯ ಹೆಸರು ಹೊರಬರಲಿದೆ.
ವಿಜಯ್ ಮತ್ತು ಸಂಗೀತಾ ಅವರ ಸಂಸಾರದ ವಿಚಾರಗಳು ಆದಷ್ಟು ಗುಟ್ಟಾಗಿ ಇರುತ್ತಿದ್ದವು. ಅದರ ನಡುವೆ ದಳಪತಿ ವಿಜಯ್ ಅವರ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಈಗ ಸ್ವತಃ ಪತ್ನಿಯೇ ಆರೋಪ ಮಾಡಿರುವುದರಿಂದ ವದಂತಿ ನಿಜವಾದಂತಾಗಿದೆ.ದಳಪತಿ ವಿಜಯ್ ನಟಿಸಿರುವ ಕೊನೇ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗುವುದು ಬಾಕಿ ಇದೆ. ಆ ಚಿತ್ರ ತೆರೆಕಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು, ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *