Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿರ್ಮಾಣ ಕಾಮಗಾರಿಗೆ ಕಲ್ಲು-ಮರಳು ಕೊರತೆ: ಮಂಗಳೂರಿನಲ್ಲಿ ಸಾವಿರಾರು ಮಂದಿಗೆ ಸಂಕಷ್ಟ

Spread the love

ಮಂಗಳೂರು: ನಗರ ಹೊರವಲಯದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಲು ಅಡಿಗಲ್ಲು ಹಾಕಿದ್ದು ಕಳೆದ ವರ್ಷ ಮಾರ್ಚ್‌ನಲ್ಲಿ. ಹಳೆಯ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುವ ಉದ್ದೇಶ. ತುರ್ತು ಏನೂ ಇರಲಿಲ್ಲ. ಆದ್ದರಿಂದ ಅಳೆದು- ತೂಗಿ ಒಂದೊಂದೇ ಹಂತದ ಕೆಲಸಗಳನ್ನು ಮುಗಿಸುತ್ತಿದ್ದರು.

ಮುಂದಿನ ವರ್ಷ ಜನವರಿಯಲ್ಲಿ ಗೃಹಪ್ರವೇಶ ಮಾಡಲು ದಿನವೂ ನಿಗದಿ ಆಗಿದೆ. ಜೂನ್ ಅರಂಭದ ವರೆಗೂ ಎಲ್ಲವೂ ಅಂದುಕೊಂಡಂತೆಯೇ ನಡೆದಿತ್ತು. ನಂತರ ಯೋಜನೆ ತಲೆಕಳೆಗಾಯಿತು. ಕಲ್ಲು ಮತ್ತು ಮರಳು ಸಾಕಷ್ಟು ಪ್ರಮಾಣದಲ್ಲಿ ಸಿಗದೇ ಇದ್ದ ಕಾರಣ ಕೆಲಸ ನಿಧಾನವಾಯಿತು. ಅಲ್ಲಿಲ್ಲಿ ಬಿದ್ದದ್ದ 20ರಷ್ಟು ಕಲ್ಲುಗಳನ್ನು ತಂದು ಅರ್ಧ ದಿನದ ಕೆಲಸ ಮಾಡಿಸಲಾಯಿತು. ನಂತರ ಕಲ್ಲುಗಳಿಗೆ ಕಾದಿದ್ದೇ ಬಂತು.

ಉಳ್ಳಾಲ ತಾಲ್ಲೂಕಿನ ಕುಂಪಲದಲ್ಲಿ ಮನೆಯೊಂದರ ನಿರ್ಮಾಣ ಅರಂಭವಾಗಿತ್ತು. ಎರಡು ತಿಂಗಳಿಂದ ಕೆಲಸ ಸಂಪೂರ್ಣ ನಿಂತಿದೆ. ಬಂಟ್ವಾಳ ತಾಲ್ಲೂಕಿನ ಫರಿಂಗಿಪೇಟೆಯಲ್ಲಿ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭವಾದ ಎರಡು ಮಹಡಿಯ ಮನೆಯ ಕೆಲಸ ಒಂದೂವರೆ ತಿಂಗಳಿಂದ ಮುಂದುವರಿಯುತ್ತಿಲ್ಲ. ಉಳ್ಳಾಲ ತಾಲ್ಲೂಕಿನ ನಾಟೆಕಲ್ಲಿನಲ್ಲಿ 5 ಸಾವಿರ ಚದರ ಅಡಿಯ ಕಟ್ಟದ ನಿರ್ಮಾಣ ಆರಂಭಿಸುವಾಗಲೇ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ನೆಲಮಹಡಿಯ ಸೆಂಟ್ರಿಂಗ್ ಕೆಲಸ ಮುಗಿದ ನಂತರ ಕಲ್ಲು- ಮರಳು ಸಿಗದ್ದರಿಂದ ಅದರ ಮಾಲೀಕರ ಯೋಜನೆಗಳೆಲ್ಲ ಉಲ್ಟಾ- ಪಲ್ಟ ಆಗಿವೆ.

ಇವು ಕೆಲವೇ ಉದಾಹರಣೆಗಳು. ಕಲ್ಲು ಮತ್ತು ಮರಳು ಸಿಗದ ಕಾರಣ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಬಹುತೇಕ ನಿಂತೇ ಹೋಗಿವೆ. ಇದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಎದುರಿಸುತ್ತಿರುವವರ ಸಂಖ್ಯೆ ಸಾವಿರಾರು. ಗುತ್ತಿಗೆದಾರರಿಂದ ಹಿಡಿದು ಕೆಲಸಗಾರರವರೆಗೆ, ನಿರ್ಮಾಣ ಸಾಮಗ್ರಿ ಮಾರಾಟಗಾರರಿಂದ ಹಿಡಿದು ಸಣ್ಣ ಹೋಟೆಲ್, ಬೀಡಿ ಅಂಗಡಿಯವರ ವರೆಗೆ, ಸಾಮಗ್ರಿಗಳನ್ನು ಸಾಗಿಸುವ ಟೆಂಪೊದವರಿಂದ ಹಿಡಿದು ಫರ್ನಿಚರ್ ಅಂಗಡಿಯವರ ವರೆಗೆ ವ್ಯವಹಾರ, ಕೆಲಸ, ವ್ಯಾಪಾರ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವವರು ಇಂದು- ನಾಳೆ ಎಂದು ಕಾಯುತ್ತ ದಿನದೂಡುತ್ತಿದ್ದಾರೆ. ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬಂದಿದ್ದ ಕೂಲಿಕಾರ್ಮಿಕರ ಪೈಕಿ ಬಹುತೇಕರು ಮಂಗಳೂರು ಬಿಟ್ಟು ಹೋಗಿದ್ದಾರೆ ಎಂದು ಗುತ್ತಿಗೆದಾರರನೇಕರು ತಿಳಿಸಿದರು.

ಅಕ್ರಮವಾಗಿ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆ ತಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ಎಲ್ಲರಿಗೂ ಸಹಮತವಿದೆ. ಆದರೆ ಅದರಿಂದಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು, ಬದಲಿ ವ್ಯವಸ್ಥೆ ಮಾಡಬೇಕಿತ್ತು ಎಂಬುದು ಬಹುತೇಕರ ಅನಿಸಿಕೆ. ಮರಳು ಗಣಿಗಾರಿಕೆಗೆ ನಿಷೇಧ ಇರುವುದು ನಿಜ. ಆದರೆ ಈಗಾಗಲೇ ಸಂಗ್ರಹಿಸಿರುವ ಮರಳನ್ನು ವ್ಯವಸ್ಥಿತವಾಗಿ ವಿತರಿಸಬೇಕೆಂದೂ ಪರವಾನಗಿ ಪಡೆದುಕೊಂಡು ಕಲ್ಲು ಗಣಿಗಾರಿಕೆ ನಡೆಸುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದೂ ಅಭಿಪ್ರಾಯಪಡುತ್ತಾರೆ ಹೆಚ್ಚಿನವರು. ಎಂ- ಸ್ಯಾಂಡ್‌ ಇಲ್ಲಿನ ಹವಾಮಾನಕ್ಕೆ ಸೂಕ್ತವಲ್ಲ ಎಂಬ ಅನಿಸಿಕೆಯಿಂದಾಗಿ ಯಾರೂ ಅದನ್ನು ಬಳಸಲು ಮುಂದಾಗುತ್ತಿಲ್ಲ. ಕಲ್ಲಿಗೆ ಬದಲಾಗಿ ಇಟ್ಟಿಗೆ, ಬ್ಲಾಕ್‌ಗಳನ್ನು ಬಳಸುವ ಪದ್ಧತಿ ಇನ್ನೂ ಇಲ್ಲಿ ಶುರುವಾಗಲಿಲ್ಲ. ಹೀಗಿರುವಾಗ ಮರಳಿಗೆ ಮರಳೇ ಬೇಕು, ಕೆಂಪುಕಲ್ಲಿಗೆ ಬದಲು ಕೆಂಪುಕಲ್ಲೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

‘ಎರಡು ತಿಂಗಳಿಂದ ಕೆಲಸ ಇಲ್ಲ. ನನ್ನ ಕೈಕೆಳಗೆ ಏಳೆಂಟು ಜನರು ಕೆಲಸ ಮಾಡುತ್ತಿದ್ದರು. ಕೆಲವರು ಊರಿಗೆ ಹೋದರು. ಇನ್ನು ಕೆಲವರು ಬೇರೆ ಯಾವುದೋ ಕೆಲಸ ಹುಡುಕಿಕೊಂಡು ಹೋಗಿದ್ದಾರೆ. ಕಲ್ಲು ಸಿಗುತ್ತಿದ್ದಾಗ ಕೆಲಸ ಇತ್ತು. ಜೀವನ ಸರಿಯಾಗಿ ನಡೀತಿತ್ತು. ಒಂದಿಷ್ಟು ಉಳಿತಾಯವೂ ಆಗುತ್ತಿತ್ತು. ಹಾಗೆ ಉಳಿಸಿದ ಹಣದಲ್ಲಿ ಈಗ ಜೀವನ ಸಾಗುತ್ತಿದೆ. ಅದು ಮುಗಿದ ನಂತರ ರಾಜಕಾರಣಿಗಳ ಮನೆ ಮುಂದೆ ಹೋಗಿ ಕುಳಿತುಕೊಳ್ಳಬೇಕಾದೀತೇನೋ…’ ಎಂದರು ದಾವಣಗೆರೆಯಿಂದ ಬಂದು ಮಂಗಳೂರಿನಲ್ಲಿ ಗುತ್ತಿಗೆದಾರರಾಗಿರುವ ದುರ್ಗೇಶ್.

‘ಅಕ್ರಮ ತಡೆಯಲೇಬೇಕು. ಅದರಿಂದ ಎಲ್ಲರಿಗೂ ಒಳಿತು. ಆದರೆ ನಿಯಮಗಳನ್ನು ಪಾಲಿಸಿಕೊಂಡು ಮಾಡುವವರಿಗೆ ಪರವಾನಗಿ ಕೊಡಬೇಕು. ಸಮಸ್ಯೆಗೆ ಪರಿಹಾರ ಹುಡುಕುವುದು ಬಿಟ್ಟು ಎಲ್ಲವನ್ನೂ ಒಮ್ಮೆಲೇ ನಿಲ್ಲಿಸಿಬಿಟ್ಟರೆ ಹೇಗೆ’ ಎಂದು ಪ್ರಶ್ನಿಸುವ ದುರ್ಗೇಶ್‌ ‘ಎಂ-ಸ್ಯಾಂಡ್ ಬಳಸಲು 10 ಶೇಕಡ ಮಂದಿ ಒಪ್ಪಬಹುದು, ಅದು ಕೂಡ ಒಲ್ಲದ ಮನಸ್ಸಿನಿಂದ. ಮರಳು ಸಂಗ್ರಹ ಮಾಡಿಟ್ಟುಕೊಳ್ಳಲು ಆಗುವುದರಿಂದ ಸ್ವಲ್ಪ ಹೆಚ್ಚು ಹಣ ಕೊಟ್ಟರೂ ಸಿಗಬಹುದು. ಆದರೆ ಕಲ್ಲು ಸಂಗ್ರಹ ಮಾಡಿ ಇಡಲು ಆಗುವುದಿಲ್ಲ. ಅದಕ್ಕೆ ಜಾಗ ತುಂಬ ಬೇಕು. ಆದ್ದರಿಂದ ಒಂದೆರಡು ಲೋಡ್ ಕಲ್ಲು ತಂದು ಅಷ್ಟು ಕೆಲಸ ಮುಗಿದ ನಂತರವೇ ಮತ್ತೊಮ್ಮೆ ತರುವುದು. ಹೀಗಾಗಿ ಕಲ್ಲು ಇಲ್ಲದೆ ಈಗ ಎಲ್ಲ ಕೆಲಸವೂ ನಿಂತಿದೆ’ ಎನ್ನುತ್ತಾರೆ.

‘ಎಂ-ಸ್ಯಾಂಡ್‌, ಬ್ಲಾಕ್‌, ಇಟ್ಟಿಗೆ ಇತ್ಯಾದಿಗಳನ್ನು ಬಳಸಲು ಇಲ್ಲಿ ಯಾರೂ ಒಪ್ಪುವುದಿಲ್ಲ. ಬ್ಲಾಕ್‌ಗಳನ್ನು ಬಳಸಿ ನಿರ್ಮಿಸಿದ ನಗರದ ಪ್ರಮುಖ ಅಪಾರ್ಟ್‌ಮೆಂಟ್ ಒಂದರಲ್ಲಿ ನೀರು ಜಿನುಗುತ್ತಿರುವುದರಿಂದ ಐದನೇ ಮಹಡಿಯಿಂದ ವಾಟರ್ ಪ್ರೂಫ್ ಹಾಕುತ್ತಿದ್ದಾರೆ. ಇಲ್ಲಿ ಕಟ್ಟಡಗಳಿಗೆ ಕೆಂಪು ಕಲ್ಲು ಬಳಸುವುದೇ ಸಂಪ್ರದಾಯವಾಗಿ ಮುಂದುವರಿದಿದೆ. ಅದು ಬೇಸಿಗೆಗೂ ಮಳೆಗಾಲಕ್ಕೂ ಸೂಕ್ತ ಎಂಬ ಭಾವನೆ ಎಲ್ಲರಲ್ಲೂ ಇದೆ. ಎಷ್ಟು ಭಾರವನ್ನಾದರೂ ತಡೆದುಕೊಳ್ಳುವ ಸಾಮರ್ಥ್ಯ ಇರುವುದರಿಂದ ಗುತ್ತಿಗೆದಾರರು ಕೂಡ ಅದಕ್ಕೇ ಮೊರೆ ಹೋಗುತ್ತಾರೆ. ಕಲ್ಲನ್ನು ಅಕ್ರಮವಾಗಿ ತಂದು ಕಟ್ಟಡ ನಿರ್ಮಿಸಿ ಕೊಡು ಎಂದು ಯಾರೂ ಹೇಳುವುದಿಲ್ಲ. ನಿಯಮಗಳನ್ನು ಪಾಲಿಸಿಕೊಂಡೇ ಗಣಿಗಾರಿಕೆ ಮಾಡಿ ಕಲ್ಲು ಸಿಗುವಂತೆ ಮಾಡಲಿ. ಅದಕ್ಕೆ ವೆಚ್ಚ ಸ್ವಲ್ಪ ಹೆಚ್ಚಾದರೂ ಕೊಡಲು ಜನರು ಹಿಂಜರಿಯುವುದಿಲ್ಲ’ ಎಂಬುದು ಗುತ್ತಿಗೆದಾರ ದಯಾನಂದ ಅವರ ಅಭಿಪ್ರಾಯ.ಅನೇಕ ಮೇಸ್ತ್ರಿಗಳು ಸೆಂಟ್ರಿಂಗ್‌ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ. ಸಚಿನ್ ಟೆಂಪೊ ಚಾಲಕ ಪಾಣೆಮಂಗಳೂರು

ಅಲ್ಪ ಪ್ರಮಾಣದ ಮರಳು ಮತ್ತು ಕೆಲವೇ ಕೆಲವು ಕಲ್ಲುಗಳು ಉಳಿದುಕೊಂಡಿರುವುದರಿಂದ ಕಟ್ಟಡದ ಕೆಲಸ ಸ್ಥಗಿತಗೊಂಡಿರುವುದು ಸ್ಯಾಂಡ್ ಬಜಾರ್ ಅಯಾಪ್‌ ಮೂಲಕ ತರಿಸಿದ ಮರಳನ್ನು ಗಾಳಿಸಿಯೇ ಬಳಸಬೇಕಾದ ಪರಿಸ್ಥಿತಿ ಎಂದು ದೂರಲಾಗಿದೆರಾಜು ಹೆಚ್ಚುವರಿ ಜಿಲ್ಲಾಧಿಕಾರಿಎಲ್ಲವನ್ನೂ ಕಾನೂನುಬದ್ಧಗೊಳಿಸಲು ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲೇ ಇದು ಆಗಬೇಕು. ಹೀಗಾಗಿ ಇನ್ನೂ ಸುಮಾರು ಒಂದು ತಿಂಗಳ ವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.ಲತೀಫ್‌ ಗುತ್ತಿಗೆದಾರ ತುಂಬೆಸ್ಯಾಂಡ್ ಬಜಾರ್‌ನಲ್ಲಿ ಸಿಗುವ ಮರಳಿನ ಗುಣಮಟ್ಟ ಚೆನ್ನಾಗಿಲ್ಲ. ಆದ್ದರಿಂದ ಗಾಳಿಸಿದ ನಂತರ ಸಿಗುವುದು ಅಲ್ಪಪ್ರಮಾಣ. ಗಾಳಿಸಲು ಎರಡು ದಿನ ಇಬ್ಬರಿಗೆ ಕೂಲಿ ಕೊಡಬೇಕು. ನಾವು ಹೇಳಿದ ಸಮಯದಲ್ಲಿ ತಂದು ಹಾಕುವುದೂ ಇಲ್ಲ.ಸಚಿನ್ ಟೆಂಪೊ ಚಾಲಕ ಪಾಣೆಮಂಗಳೂರುಅನೇಕ ಮೇಸ್ತ್ರಿಗಳು ಸೆಂಟ್ರಿಂಗ್‌ ಮತ್ತು ಇತರ ಕೆಲಸದ ಸಾಮಗ್ರಿಗಳನ್ನು ನನ್ನ ವಾಹನದಲ್ಲೇ ಸಾಗಿಸುತ್ತಿದ್ದರು. ಈಗ ಬಾಡಿಗೆಗೆ ಕರೆಯುವುದು ಕಡಿಮೆಯಾಗಿದೆ. ಆದ್ದರಿಂದ ಕೆಲಸವೇ ಇಲ್ಲ. ಬೇರೆ ಕೆಲಸ ಗೊತ್ತೂ ಇಲ್ಲ.ದಯಾನಂದ ಗುತ್ತಿಗೆದಾರ ಮಂಗಳೂರುವಾಸ್ತವದಲ್ಲಿ ಹಣ ಮಾಡಿಕೊಂಡರು ಈಗ ಖುಷಿಯಲ್ಲಿದ್ದಾರೆ. ಹಲವರು ಈಗಾಗಲೇ ಕುಟುಂಬಸಮೇತರಾಗಿ ಪ್ರವಾಸಕ್ಕೆ ಹೋಗಿದ್ದಾರೆ. ನಿತ್ಯ ದುಡಿದು ತಿನ್ನುವವರಿಗೆ ಮತ್ತು ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ.
ಒಂದೆಡೆ ನಿರ್ಬಂಧ ಮತ್ತೊಂದೆಡೆ ನಿಷೇಧ

ಕರಾವಳಿ ನಿರ್ಬಂಧಿತ ಪ್ರದೇಶದಲ್ಲಿ (ಸಿಆರ್‌ಝಡ್‌) 2022ರಿಂದ ಮರಳು ಗಣಿಗಾರಿಕೆಗೆ ನಿಷೇಧವಿದೆ. ನಾನ್‌ ಸಿಆರ್‌ಝಡ್‌ನಲ್ಲಿ ಜೂನ್ 5ರಿಂದ ಅಕ್ಟೋಬರ್‌ 15ರ ವರೆಗೆ ಮರಳು ಗಣಿಗಾರಿಕೆಗೆ ನಿಷೇಧವಿದೆ. ಆದ್ದರಿಂದ ಈಗ ಸಂಗ್ರಹ ಮಾಡಿಟ್ಟಿರುವ ಮರಳನ್ನೇ ಆಶ್ರಯಿಸಬೇಕಾಗಿದೆ. ಅಂಥ ಮರಳು ಪ್ರತಿ ವರ್ಷ ಸಾಕಷ್ಟು ಸಿಗುತ್ತದೆ. ಇದಲ್ಲದೆ ಜಿಲ್ಲಾಡಳಿತದ ಬ್ಲಾಕ್‌ಗಳಲ್ಲಿ ಇರುವ ಮರಳು ಸ್ಯಾಂಡ್ ಬಜಾರ್ ಆಯಪ್‌ನಲ್ಲಿ ಲಭ್ಯವಿದೆ. ಅಕ್ರಮವಾಗಿ ಬ್ಲ್ಯಾಕ್‌ಮಾರ್ಕೆಟ್‌ನಲ್ಲೂ ಮರಳು ಸಿಗತ್ತಿದೆ. ಆದ್ದರಿಂದ ಸಮಸ್ಯೆ ಇರುವುದು ಕಲ್ಲಿನದೇ. ಸಿಆರ್‌ಝಡ್‌ನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಇಲ್ಲ. ಸಾಂಪ್ರದಾಯಿಕ ಸಮುದಾಯಗಳಿಗೆ ಇದರಿಂದ ದೋಣಿ ನಡೆಸಲು ಸಮಸ್ಯೆಯಾಗುತ್ತದೆ ಎಂಬ ದೂರಿನ ನಂತರ 2011ರಲ್ಲಿ ಈ ನಿಷೇಧವನ್ನು ತೆಗೆದು ಹಾಕಲಾಗಿತ್ತು. ಆದರೆ 2022ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯ ನೀಡಿದ ಆದೇಶದಂತೆ ಈಗ ಮೂರು ಜಿಲ್ಲೆಗಳ ಸಿಆರ್‌ಝಡ್‌ನಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಿವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮರಳು ಸಾಕಷ್ಟು ಇದೆ

ನಾನ್ ಸಿಆರ್‌ಝಡ್‌ನಲ್ಲಿ ಸಾಕಷ್ಟು ಮರಳು ಸಂಗ್ರಹ ಇದೆ. ಒಟ್ಟು 29 ಬ್ಲಾಕ್‌ಗಳ ಪೈಕಿ 16 ಕಾರ್ಯನಿರ್ವಹಿಸುತ್ತಿದ್ದು 3 ಲಕ್ಷ 34 ಸಾವಿರ ಟನ್ ಮರಳು ಇದೆ. ಮೀನುಗಳ ವಂಶಾಭಿವೃದ್ಧಿಗಾಗಿ ಈಗ ಮರಳು ಗಣಿಗಾರಿಕೆ ಮೇಲೆ ನಿಷೇಧವಿದೆ. ಮಳೆಗಾಲದಲ್ಲಿ ಹೆಚ್ಚು ನೀರು ಇರುವಾಗ ಮರಳು ತೆಗೆಯಬಾರದು ಎಂಬ ನಿಯಮವೂ ಜಾರಿಯಲ್ಲಿದೆ. ಆದರೆ 11 ಸಾವಿರ ಟನ್ ಮರಳು ದಾಸ್ತಾನು ಇದೆ. ಅದನ್ನು ಸ್ಯಾಂಡ್ ಬಜಾರ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ವಿವಿಧ ಸಂದರ್ಭಗಳಲ್ಲಿ ವಶಪಡಿಸಿಕೊಂಡ ಮರಳೂ ಇದೆ. ಅದನ್ನು ಹರಾಜು ಹಾಕಬೇಕಾದರೆ ತುಂಬ ಸಮಯ ಕಾಯಬೇಕು. ಆದ್ದರಿಂದ ಸುಲಭವಾಗಿ ಜನರಿಗೆ ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳಲು ಮರಳು ನಿರ್ವಹಣಾ ಸಮಿತಿಯ ನಿರ್ಧಾರಕ್ಕೆ ಬಿಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *