Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇಸ್ರೇಲ್-ಇರಾನ್ ಯುದ್ಧ ತೀವ್ರತೆಯಿದ್ದರೂ ಹಿಗ್ಗದ ಷೇರು

Spread the love

ನವದೆಹಲಿ, ಜೂನ್ 19: ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ತೀವ್ರಗೊಳ್ಳುತ್ತಲೇ ಹೋಗಿದೆ. ಒಬ್ಬರಿಗೊಬ್ಬರು ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಪರಸ್ಪರ ದಾಳಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇವತ್ತು ಗುರುವಾರ ಇರಾನ್​​ನ ಹಲವು ಕ್ಷಿಪಣಿಗಳು ಇಸ್ರೇಲ್​​ನ ವಿವಿಧ ಪ್ರದೇಶಗಳ ಮೇಲೆ ಅಪ್ಪಳಿಸಿವೆ. ಇದರಲ್ಲಿ ಆಸ್ಪತ್ರೆ, ಷೇರು ವಿನಿಮಯ ಕೇಂದ್ರ ಇತ್ಯಾದಿ ಸ್ಥಳಗಳೂ ಸೇರಿವೆ. ಮಾಧ್ಯಮ ವರದಿ ಪ್ರಕಾರ ಇಸ್ರೇಲ್​​ನ ಟೆಲ್ ಅವಿವ್ ಸ್ಟಾಕ್ ಎಕ್ಸ್​​ಚೇಂಜ್ (Tel Aviv Stock Exchange) ಕಟ್ಟಡ ಈ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಸಾಕಷ್ಟು ಹಾನಿಗೊಂಡಿದೆ ಎನ್ನಲಾಗಿದೆ.

ಷೇರು ವಿನಿಮಯ ಕೇಂದ್ರದ ಕಟ್ಟಡ ಹಾನಿಯಾದರೂ ಷೇರು ವ್ಯಾಪಾರಿಗಳ ಹುಮ್ಮಸ್ಸು ಅಡಗಿಲ್ಲ.ಇಸ್ರೇಲ್ ಷೇರು ಮಾರುಕಟ್ಟೆಯ ಪ್ರಮುಖ ಇಂಡೆಕ್ಸ್ ಆದ ಟಿಎಎಸ್​​ಇ ಗುರುವಾರ ಶೇ. 4.26ರವರೆಗೂ ಏರಿಕೆ ಆಯಿತು. ಸದ್ಯ ಅದು 121 ಅಂಕಗಳಷ್ಟು ಏರಿಕೆ ಆಗಿ 6,189 ಮಟ್ಟದಲ್ಲಿದೆ. ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್​​ನ ಟಿ-35 ಇತ್ಯಾದಿ ಇತರ ಸೂಚ್ಯಂಕಗಳೂ ಕೂಡ ಏರಿಕೆ ಕಂಡಿವೆ.
ಕುತೂಹಲ ಎಂದರೆ, ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದಾಗಿನಿಂದ ಇಲ್ಲಿಯವರೆಗೆ ಟಿಎಎಸ್​​ಇ ಇಂಡೆಕ್ಸ್ ಶೇ. 14ರಷ್ಟು ಹೆಚ್ಚಿದೆ. ಅಂದರೆ, ಸುಮಾರು 800 ಅಂಕಗಳಷ್ಟು ಏರಿಕೆ ಆಗಿದೆ. ಈ ಇಂಡೆಕ್ಸ್ 52 ವಾರದ ಗರಿಷ್ಠ ಮಟ್ಟದಲ್ಲಿದೆ.

ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್ ಕಟ್ಟಡದ ಮೇಲೆ ಇರಾನೀ ಕ್ಷಿಪಣಿ ಬಡಿದಾಗ ಸ್ವಲ್ಪ ಹೊತ್ತು ಷೇರು ವಹಿವಾಟಿಗೆ ಹಿನ್ನಡೆಯಾದರೂ ನಂತರ ಚೇತರಿಸಿಕೊಂಡಿದೆ. ಟ್ರೇಡರ್​​ಗಳು ಹೊಸ ಹುರುಪಿನೊಂದಿಗೆ ವ್ಯವಹಾರ ಕೈಗೊಂಡಿದ್ದಾರೆ. ಹೂಡಿಕೆದಾರರೂ ಕೂಡ ವಿಶ್ವಾಸ ಮುಂದುವರಿಸಿದ್ದಾರೆ. ಇದು ಗಮನಾರ್ಹ ಸಂಗತಿ.
ಇರಾನ್ ಮತ್ತು ಇಸ್ರೇಲ್ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡೂ ದೇಶಗಳ ಮುಖಂಡರು ಯುದ್ಧ ಮುಂದುವರಿಸುವ ಸಂಕಲ್ಪದಲ್ಲಿದ್ದಾರೆ. ಇಸ್ರೇಲ್​​ಗೆ ಅಮೆರಿಕ ನೇರ ಬೆಂಬಲ ಕೊಡುವ ಬಗ್ಗೆ ಯೋಚಿಸುತ್ತಿದೆ. ಒಂದು ವೇಳೆ ಇಸ್ರೇಲ್​​ಗೆ ಅಮೆರಿಕ ನೇರ ಬೆಂಬಲ ನೀಡಿದರೆ, ಇರಾನ್ ದೇಶಕ್ಕೆ ತಾವು ಬೆಂಬಲ ನೀಡುವುದಾಗಿ ರಷ್ಯಾ ಮತ್ತು ಚೀನಾ ಹೇಳಿವೆ. ಕೆಲವರಂತೂ ಇದು ಮೂರನೇ ವಿಶ್ವ ಮಹಾಯುದ್ಧದ ಆರಂಭ ಎಂದೇ ಬಣ್ಣಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *