Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು ಕೇಂದ್ರ ಕಾರಾಗೃಹ ಸ್ಥಳಾಂತರಕ್ಕೆ ಕ್ರಮ – ಗೃಹ ಸಚಿವ

Spread the love

ಬೆಂಗಳೂರು: ಮಂಗಳೂರಿನ ಕೇಂದ್ರ ಕಾರಗೃಹವು ಮಂಗಳೂರಿನ ಹೃದಯಭಾಗದಲ್ಲಿದೆ. ಇಲ್ಲಿನ ಕಾಂಪೌಂಡ್ ಕಟ್ಟಡದ ಎತ್ತರವೂ ತೀರಾ ಕಡಿಮೆ ಇದೆ. ಕಾರಾಗೃಹದಲ್ಲಿ ನಡೆಯುವ ಚಟುವಟಿಕೆಗಳು ಸಹ ಹೊರಗಡೆ ಕಾಣುವಂತಾಗಿದೆ. ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅಗಿಂದಾಗ್ಗೆ ಅಕ್ರಮ ಚಟುವಟಿಕೆಗಳು ನಡೆಯುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಈ ಕಾರಾಗೃಹವನ್ನು ಸ್ಥಳಾಂತರ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.


ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿರುವ 5 ಸಂಖ್ಯೆ ಮೊಬೈಲ್ ಜಾಮರ್‍ಗಳನ್ನು ದುರಸ್ಥಿ ಮತ್ತು ಮೇಲ್ಮಜೀಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ಜಾಮರ್‍ಗಳ ದುರಸ್ಥಿ ಮತ್ತು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಟೆಸ್ಟಿಂಗ್ ಅಂಡ್ ರಿಕ್ಯಾಲಿಬ್ರೇಶನ್ ಹಂತದಲ್ಲಿರುತ್ತದೆ. ಕಾರಾಗೃಹದ ಒಳಭಾಗದಲ್ಲಿ ಯಾವುದೇ ನೆಟ್ವರ್ಕ್ ದೊರೆಯದಂತೆ ಹಾಗೂ ಕಾರಾಗೃಹದ ಹೊರಭಾಗದಲ್ಲಿ ಸಾರ್ವಜನಿಕರಿಗೆ ನೆಟ್ವರ್ಕ್ ತೊಂದರೆ ಯಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು.

ಇತ್ತೀಚೆಗೆ ಅನಾರೋಗ್ಯಕ್ಕೊಳಗಾದ ಬಂದಿಗಳನ್ನು ತಕ್ಷಣವೇ ಜಿಲ್ಲಾ ಆರೋಗ್ಯ ಅಧಿಕಾರಿಗಳು / ತಾಲ್ಲೂಕು 4 ಜನ ವೈದ್ಯಾಧಿಕಾರಿಗಳ ತಂಡ ತಕ್ಷಣ ಕಾರಾಗೃಹಕ್ಕೆ ಆಗಮಿಸಿ ಬಂದಿಗಳನ್ನು ಪರೀಕ್ಷಿಸಿರುತ್ತಾರೆ. ಬಂದಿಗಳನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲು ಸೂಚಿಸಿದರನ್ವಯ ಸದರಿ ವಿಷಯವಾಗಿ ಪೆÇಲೀಸ್ ಆಯುಕ್ತರು ಮಂಗಳೂರು ನಗರ ರವರಿಗೆ ಮತ್ತು ಕಾರಾಗೃಹ ವ್ಯಾಪ್ತಿಯ ಬರ್ಕ ಪೆÇಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿ ಲೀಸ್ ಮತ್ತು ಕಾರಾಗೃಹದ ಸಿಬ್ಬಂದಿಗಳ ಬೆಂಗಾವಲಿನಲ್ಲಿ 59 ಜನ ಬಂದಿಗಳನ್ನು ಸರ್ಕಾರಿ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯಾಧಿಕಾರಿಗಳು ಕಾರಾಗೃಹದಲ್ಲಿಯೇ ರಾತ್ರಿ ಸಹ ಕರ್ತವ್ಯ ನಿರ್ವಹಿಸಿರುತ್ತಾರೆ. ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ರವರೊಂದಿಗೆ ಹೆಚ್ಚುವರಿ ಕಾರಾಗೃಹ ಮಹಾನಿರೀಕ್ಷಕರು ಹಾಗೂ ಕಾರಾಗೃಹಗಳ ಉಪಮಹಾನಿರೀಕ್ಷಕರು ದಕ್ಷಿಣ ವಲಯ ಬೆಂಗಳೂರು ರವರು ಮಂಗಳೂರು ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಬಂದಿಗಳ ಯೋಗಕ್ಷೇಮ ವಿಚಾರಿಸಿರುತ್ತಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಬಂದಿಗಳ ಆರೋಗ್ಯದ ಕುರಿತು ವಿಚಾರಿಸಲಾಗಿ, ವೈದ್ಯಾಧಿಕಾರಿಗಳು ಬಂದಿಗಳಿಗೆ ಯಾವುದೇ ಪ್ರಾಣಾಪಾಯ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ನಿಗಾವಣೆ ಅವಧಿ ಮುಕ್ತಾಯದ ನಂತರ ಹಂತ ಹಂತವಾಗಿ ಬಂದಿಗಳನ್ನು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *