Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ರಾಜ್ಯಗಳು: ರಾಜಸ್ಥಾನ ಅಗ್ರಸ್ಥಾನದಲ್ಲಿ

Spread the love

ಕತ್ತೆಗಳನ್ನು ಸಾಮಾನ್ಯವಾಗಿ ಮೂರ್ಖ ಜೀವಿಗಳೆಂದು ಪರಿಗಣಿಸಲಾಗುತ್ತದೆ, ಆದರೆ ಅದು ನಮ್ಮ ತಪ್ಪು ತಿಳುವಳಿಕೆ. ನಮ್ಮ ಸುತ್ತಲೂ ಕಂಡುಬರುವ ಅನೇಕ ಪ್ರಾಣಿಗಳಿಗಿಂತ ಕತ್ತೆಗಳು ಹೆಚ್ಚು ಬುದ್ಧಿವಂತ ಪ್ರಾಣಿಗಳಾಗಿವೆ. ಕತ್ತೆಗಳು ಭಾರತದ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಇವುಗಳನ್ನ ಹೊರೆ ಹೊರಲು ಮತ್ತು ಕೃಷಿಗೆ ಸಹಾಯ ಮಾಡುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ. 2019ರಲ್ಲಿ ದೇಶದಲ್ಲಿ ಕೊನೆಯದಾಗಿ ಗಣತಿ ಮಾಡಿದಾಗ ಅವುಗಳ ಸಂಖ್ಯೆ ಕೇವಲ 1 ಲಕ್ಷ 20 ಸಾವಿರವಾಗಿತ್ತು. ಅದೇ ಎಣಿಕೆಯ ಆಧಾರದ ಮೇಲೆ ಕತ್ತೆಗಳ ಜನಸಂಖ್ಯೆ ಅತಿಹೆಚ್ಚು ಇರುವ 10 ರಾಜ್ಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

ಆಂಧ್ರಪ್ರದೇಶದಲ್ಲಿ ಸುಮಾರು 5 ಸಾವಿರ ಕತ್ತೆಗಳಿವೆ. ಕತ್ತೆಗಳ ಸಂಖ್ಯೆಯಲ್ಲಿ ಈ ರಾಜ್ಯವು ದೇಶದಲ್ಲಿ 10ನೇ ಸ್ಥಾನದಲ್ಲಿದೆ. ಕತ್ತೆಗಳು ಇಲ್ಲಿನ ಗ್ರಾಮೀಣ ಪ್ರದೇಶದ ಸಣ್ಣ ರೈತರ ನಿಷ್ಠಾವಂತ ಒಡನಾಡಿಗಳು. ಈ ಪ್ರಾಣಿಗಳು ಭಾರೀ ಸರಕುಗಳನ್ನ ಸಾಗಿಸಲು ಸಹಾಯ ಮಾಡುತ್ತವೆ, ವಿಶೇಷವಾಗಿ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಇವುಗಳನ್ನ ಬಳಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಕತ್ತೆಗಳ ಸಂಖ್ಯೆ 5 ಸಾವಿರಕ್ಕಿಂತ ಸ್ವಲ್ಪ ಹೆಚ್ಚಿವೆ. ಈ ರಾಜ್ಯವು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ಈ ಪ್ರಾಣಿಗಳು ಕಿರಿದಾದ ಬೀದಿಗಳು ಮತ್ತು ಇಳಿಜಾರುಗಳಲ್ಲಿ ಸರಕುಗಳನ್ನು ಸಾಗಿಸಲು ಬಳಲಾಗುತ್ತಿದೆ. ಇಲ್ಲಿನ ಜನರು ಅವುಗಳನ್ನು ತಮ್ಮ ದೈನಂದಿನ ಜೀವನದ ಒಂದು ಭಾಗವೆಂದು ಪರಿಗಣಿಸುತ್ತಾರೆ. ಕತ್ತೆಗಳ ಶಕ್ತಿ ಮತ್ತು ಅವುಗಳ ಪಾಲನೆಯ ಕಡಿಮೆ ವೆಚ್ಚವು ಈ ಪ್ರದೇಶದಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.

ಮಧ್ಯಪ್ರದೇಶದಲ್ಲಿ ಕತ್ತೆಗಳ ಸಂಖ್ಯೆ ಸುಮಾರು 8 ಸಾವಿರವಾಗಿದ್ದು, ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ರಾಜ್ಯದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕತ್ತೆಗಳನ್ನು ಕೃಷಿ ಮತ್ತು ಸಾಗಣೆಗೆ ಬಳಸಲಾಗುತ್ತದೆ. ಇವುಗಳ ಕಡಿಮೆ ನಿರ್ವಹಣೆಯ ಅವಶ್ಯಕತೆಯು ಬಡ ರೈತರಿಗೆ ಸೂಕ್ತವಾಗಿದೆ. ಕರ್ನಾಟಕದಲ್ಲಿ ಕತ್ತೆಗಳ ಸಂಖ್ಯೆ ಸುಮಾರು 9 ಸಾವಿರ ಇದ್ದು, ಈ ರಾಜ್ಯವು ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಈ ದಕ್ಷಿಣ ಭಾರತದ ರಾಜ್ಯದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಟ್ಟಿಗೆ, ಮರಳು ಮತ್ತು ಬೆಳೆಗಳನ್ನು ಸಾಗಿಸಲು ಕತ್ತೆಗಳು ಬಹಳ ಸಹಾಯಕವಾಗಿವೆ. ಕರ್ನಾಟಕದ ಬರ ಪೀಡಿತ ಪ್ರದೇಶಗಳಲ್ಲಿಯೂ ಸಹ ಈ ಪ್ರಾಣಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಜಮ್ಮು-ಕಾಶ್ಮೀರದಲ್ಲಿ ಕತ್ತೆಗಳ ಸಂಖ್ಯೆ ಸುಮಾರು 10 ಸಾವಿರ ಇವೆ. ಕತ್ತೆಗಳ ಜನಸಂಖ್ಯೆಯ ವಿಷಯದಲ್ಲಿ, ಈ ರಾಜ್ಯವು ದೇಶದಲ್ಲಿ ಆರನೇ ಸ್ಥಾನದಲ್ಲಿದೆ. ಈ ಗುಡ್ಡಗಾಡು ರಾಜ್ಯದಲ್ಲಿ ಕತ್ತೆಗಳು ಕಷ್ಟಕರವಾದ ಹಾದಿಗಳಲ್ಲಿ ಸರಕುಗಳನ್ನು ಸಾಗಿಸಲು ಪ್ರಸಿದ್ಧವಾಗಿವೆ. ಶೀತ ಹವಾಮಾನ ಮತ್ತು ಕಷ್ಟಕರವಾದ ಹಾದಿಗಳಲ್ಲಿಯೂ ಸಹ ಕತ್ತೆಗಳ ಕಠಿಣ ಪರಿಶ್ರಮ ಮತ್ತು ನಿಷ್ಠೆ ಅವುಗಳನ್ನು ವಿಶೇಷವಾಗಿಸುತ್ತದೆ.

ಬಿಹಾರದಲ್ಲಿ ಕತ್ತೆಗಳ ಸಂಖ್ಯೆ ಸುಮಾರು 11 ಸಾವಿರ ಇವೆ. ಈ ರಾಜ್ಯವು ಐದನೇ ಅತಿದೊಡ್ಡ ಕತ್ತೆ ಜನಸಂಖ್ಯೆಯನ್ನು ಹೊಂದಿದೆ. ಈ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕತ್ತೆಗಳು ಕೃಷಿ ಮತ್ತು ಸರಕುಗಳನ್ನು ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಪ್ರಾಣಿಗಳು ಬಡ ರೈತರಿಗೆ ಅಗ್ಗದ ಮತ್ತು ವಿಶ್ವಾಸಾರ್ಹ ಸಾರಿಗೆ ಸಾಧನಗಳಾಗಿವೆ. ಗುಜರಾತ್‌ನಲ್ಲಿ ಕತ್ತೆಗಳ ಸಂಖ್ಯೆ 11 ಸಾವಿರಕ್ಕಿಂತ ಸ್ವಲ್ಪ ಹೆಚ್ಚು. ಕತ್ತೆಗಳ ಜನಸಂಖ್ಯೆಯಲ್ಲಿ ಈ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಕಛ್ ಮತ್ತು ಸೌರಾಷ್ಟ್ರದಂತಹ ಪ್ರದೇಶಗಳಲ್ಲಿ ಕತ್ತೆಗಳನ್ನು ಉಪ್ಪು, ಕೃಷಿ ಸರಕುಗಳು ಮತ್ತು ಇತರ ಹೊರೆಗಳನ್ನು ಸಾಗಿಸಲು ಬಳಸಲಾಗುತ್ತದೆ. ಅವುಗಳ ಕಠಿಣ ಪರಿಶ್ರಮ ಮತ್ತು ಕಡಿಮೆ ಪಾಲನಾ ವೆಚ್ಚವು ಗುಜರಾತ್‌ನ ರೈತರು ಮತ್ತು ಕಾರ್ಮಿಕರಿಗೆ ಅವುಗಳನ್ನು ವಿಶೇಷವಾಗಿಸುತ್ತದೆ.

ಉತ್ತರ ಪ್ರದೇಶದಲ್ಲಿ ಕತ್ತೆಗಳ ಜನಸಂಖ್ಯೆ ಸುಮಾರು 16 ಸಾವಿರ. ಈ ರಾಜ್ಯವು ಭಾರತದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ಹಳ್ಳಿಗಳಲ್ಲಿ ಕತ್ತೆಗಳು ಇಟ್ಟಿಗೆಗಳು, ಧಾನ್ಯಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ಸಹಾಯ ಮಾಡುತ್ತವೆ. ಅವುಗಳ ಕಠಿಣ ಪರಿಶ್ರಮವು ಉತ್ತರ ಪ್ರದೇಶದ ಗ್ರಾಮೀಣ ಜೀವನವನ್ನು ಸುಲಭಗೊಳಿಸುತ್ತದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ, ಅಲ್ಲಿ ಸುಮಾರು 18 ಸಾವಿರ ಕತ್ತೆಗಳಿವೆ. ಈ ರಾಜ್ಯದ ಗ್ರಾಮೀಣ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಕತ್ತೆಗಳು ಕಾರ್ಮಿಕ ಮತ್ತು ಸಾರಿಗೆಯ ಪ್ರಮುಖ ಸಾಧನಗಳಾಗಿವೆ. ಇವುಗಳ ಸಾಕಣೆ ವೆಚ್ಚ ಕಡಿಮೆ ಇರುವುದರಿಂದ ಬಡ ಕುಟುಂಬಗಳಿಗೆ ಅವು ಸೂಕ್ತವಾಗಿವೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಆರ್ಥಿಕತೆಗೆ ಕತ್ತೆಗಳ ಕೊಡುಗೆ ತುಂಬಾ ಹೆಚ್ಚಾಗಿದೆ.

ಭಾರತದಲ್ಲಿ ಅತಿಹೆಚ್ಚು ಕತ್ತೆಗಳನ್ನು ಹೊಂದಿರುವ ರಾಜ್ಯ ರಾಜಸ್ಥಾನವಾಗಿದ್ದು, ಅಲ್ಲಿ ಇವುಗಳ ಸಂಖ್ಯೆ 23 ಸಾವಿರ. ಮರುಭೂಮಿ ಪ್ರದೇಶಗಳಲ್ಲಿ ನೀರು, ಮರ ಮತ್ತು ಇತರ ವಸ್ತುಗಳನ್ನು ಸಾಗಿಸುವಲ್ಲಿ ಕತ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಕಠಿಣ ಪರಿಶ್ರಮ ಮತ್ತು ಬಿಸಿ ವಾತಾವರಣದಲ್ಲಿ ಬದುಕುವ ಸಾಮರ್ಥ್ಯವು ರಾಜಸ್ಥಾನದ ಜನರಿಗೆ ಅವುಗಳನ್ನು ಅಮೂಲ್ಯವಾಗಿಸುತ್ತದೆ. ಈ ರೀತಿ ಕತ್ತೆಗಳು ಭಾರತದ ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿದ್ದು, ಕಠಿಣ ಪರಿಶ್ರಮ ಮತ್ತು ನಿಷ್ಠೆಯಿಂದ ಜನರಿಗೆ ಸಹಾಯ ಮಾಡುತ್ತವೆ. ರಾಜಸ್ಥಾನದಿಂದ ಆಂಧ್ರಪ್ರದೇಶದವರೆಗೆ ಈ ಪ್ರಾಣಿಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಕೆಲಸ ಮಾಡುತ್ತವೆ. ಅವುಗಳ ಸಂಖ್ಯೆ ಮತ್ತು ಕೊಡುಗೆಯನ್ನ ಗಮನಿಸಿದರೆ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಕತ್ತೆಗಳನ್ನು ನೋಡಿಕೊಳ್ಳುವುದು ಮತ್ತು ರಕ್ಷಿಸುವುದು ಮುಖ್ಯವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *