Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಕ್ಕಳಿಗೆ ಭಯದ ವಾತಾವರಣ: 979 ಪೋಕ್ಸೋ ಪ್ರಕರಣಗಳಿಂದ ತಲ್ಲಣಿಸಿದ ರಾಜ್ಯ

Spread the love

ಬಾಗಲಕೋಟೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿಗೊಳಿಸಿದರೂ ಕಾಮುಕರ ಅಟ್ಟಹಾಸ ನಿಲ್ಲುತ್ತಿಲ್ಲ. ಮುಗ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು, ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 979 ಅಪ್ರಾಪ್ತ ವಯ ಸ್ಸಿನವರ ಮೇಲೆ ಅತ್ಯಾ ಚಾ ರ ನಡೆದಿದೆ!

ಪೊಲೀಸ್‌ ಇಲಾಖೆಯ ನಾಲ್ಕು ತಿಂಗಳ ಅಂಕಿ-ಸಂಖ್ಯೆಗಳು ಅಚ್ಚರಿ ಜತೆಗೆ ಭಯವೂ ಹುಟ್ಟಿಸುತ್ತಿದೆ. ಕರ್ನಾಟಕ ಮತ್ತೂಂದು ಬಿಹಾರ ಆಗುತ್ತಿದೆಯಾ ಎಂಬ ಆತಂಕವೂ ಮೂಡಿದೆ.

ಜನವರಿಯಿಂದ ಎಪ್ರಿಲ್‌ ಅಂತ್ಯದವರೆಗೆ ರಾಜ್ಯದಲ್ಲಿ ನಡೆದ ಪ್ರಮುಖ ಅಪರಾಧ ಪ್ರಕರಣಗಳ ಅಂಕಿ-ಸಂಖ್ಯೆಗಳು ಲಭ್ಯವಾಗಿದ್ದು, ಬೆಂಗಳೂರು ನಗರದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ 114 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಪೋಕ್ಸೋ ಪ್ರಕರಣದಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಕೆಜಿಎಫ್‌ (7 ಕೇಸ್‌) ಕೊನೆ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕಳೆದ ವರ್ಷ 2,960 ಪ್ರಕರಣ
2024ರ 12 ತಿಂಗಳಲ್ಲಿ 2,960 ಅಪ್ರಾಪ್ತ ವಯಸ್ಕ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದವು. ಆಗ ಒಟ್ಟಾರೆ 3,954 ಪೋಕ್ಸೋ ಪ್ರಕರಣಗಳು ನಡೆದಿದ್ದರೆ, ಅದರಲ್ಲಿ 2,960 ಅತ್ಯಾಚಾರ ಪ್ರಕರಣಗಳಿದ್ದವು. ಈ ವರ್ಷ ಎಪ್ರಿಲ್‌ ಅಂತ್ಯದವರೆಗೆ ಒಟ್ಟು 979 ಅತ್ಯಾಚಾರ ಪ್ರಕರಣ ಆಗಿದ್ದರೆ, 390 ಪೋಕೊà ಸಹಿತ ಇತರ ಪ್ರಕರಣ ದಾಖಲಾಗಿವೆ.

ಗಲಭೆಯೂ ಹೆಚ್ಚಳ
ರಾಜ್ಯದಲ್ಲಿ ಗಲಭೆ ಪ್ರಕರಣಗಳೂ ಹೆಚ್ಚುತ್ತಿದ್ದು, ನಾಲ್ಕು ತಿಂಗಳಲ್ಲಿ ಒಟ್ಟು 1,126 ಗಲಭೆ ನಡೆದಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ತಿಂಗಳಲ್ಲಿ ಕೊಲೆ-426, ಕೊಲೆಯತ್ನ-1,165, ಅತ್ಯಾಚಾರ-317 (ಪೋಕೊà ಹೊರತುಪಡಿಸಿ), ಕಳ್ಳತನ-47, ದರೋಡೆ-192, ಹಗಲು ಕಳ್ಳತನ-339, ರಾತ್ರಿ ಕಳ್ಳತನ-1,233, ಮೋಸ-207, ದೌರ್ಜನ್ಯ-5,612, ಕಿರುಕುಳ-1,940, ಜೂಜಾಟ-5,236, ಸೈಬರ್‌ ವಂಚನೆ-4,846 ಪ್ರಕರಣಗಳು ದಾಖಲಾಗಿವೆ.

ಮಕ್ಕಳ ಮೇಲಿನ ದೌರ್ಜನ್ಯ ಹೇಯ ಕೃತ್ಯ. ಇಂತಹ ಘಟನೆಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರ ಮೇಲೆ ತ್ವರಿತ ಮತ್ತು ಕಠಿನ ಕ್ರಮ ಆಗಬೇಕು. ಆಗ ಮಾತ್ರ ಇಂತಹ ಪೈಶಾಚಿಕ ಕೃತ್ಯದಲ್ಲಿ ತೊಡಗುವವರಿಗೆ ತಕ್ಕ ಉತ್ತರ ನೀಡಿದಂತಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *