Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರಾವಳಿಯ ತಾರೆಯರು: ಮಿಸ್ಟರ್ & ಮಿಸ್ ಕರಾವಳಿ 2025 ವಿಜೇತರು ಪ್ರಕಟ

Spread the love

ಮಂಗಳೂರು : ಯುವ ಪ್ರತಿಭೆಗಳನ್ನೂ ಸಮಾಜದ ಮುಂದೆ ಗುರುತಿಸುವುದು ಒಂದು ಮುಖ್ಯ ಉದ್ದೇಶ ಹಾಗೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಆದ್ಯತೆ ಎಂಬ ದೇವವಾಕ್ಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಸಂದೀಪ್ ಶೆಟ್ಟಿ ಹೇಳಿದ್ದಾರೆ .ಮೂಡುಬಿದಿರೆ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂಡುಬಿದಿರೆಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ನೇತೃತ್ವದಲ್ಲಿ ನಡೆದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ 60 ಮಕ್ಕಳು ಭಾಗವಹಿಸಿದ್ದು, ಒಟ್ಟು 65,555 ರೂ. ಬಹುಮಾನ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧೆಯ ತೀರ್ಪುಗಾರ ಸಂದೀಪ್ ಶೆಟ್ಟಿ ಮಂಗಳೂರು ತಿಳಿಸಿದ್ದಾರೆ. 11ರಿಂದ 17 ವರ್ಷದೊಳಗಿನ ಹುಡುಗರ ವಿಭಾಗದ ಮಿಸ್ಟರ್ ಟೀನ್ ಕರಾವಳಿ 2025 ವಿನ್ನರ್ ಆಗಿ ಕಿನ್ನಿಗೋಳಿ ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ಸಾನ್ವಿತ್ ಕುಲಾಲ್, ಹುಡುಗಿಯರ ವಿಭಾಗದಲ್ಲಿ ಮಿಸ್ ಟೀನ್ ಕರಾವಳಿ 2025 ವಿನ್ನರ್ ಆಗಿ ಮೂಡುಬಿದರೆ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಧನ್ವಿ ಶೆಟ್ಟಿ, ಮಿಸ್ ಕ್ವೀನ್ ಕರಾವಳಿ 2025 ವಿನ್ನರ್ ಆಗಿ ಉಡುಪಿ ಹಿರಿಯಡ್ಕ ಗ್ರೀನ್ ಪಾರ್ಕ್ ಶಾಲೆಯ ಪೂರ್ವಿ ಕುಲಾಲ್, ಪಾಪ್ಯುಲರ್ ಐಕಾನ್ ಕರಾವಳಿ 2025 ವಿನ್ನರ್ ಆಗಿ ಆಲಂಗಾರು ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಾಧ್ವಿ ಶೆಟ್ಟಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ. 7ರಿಂದ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಿನ್ಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಎಸ್‌ಡಿಎಂ ಶಾಲೆಯ ಶೌರ್ಯ ರಾವ್, ಬಾಲಕಿಯರ ವಿಭಾಗದಲ್ಲಿ ಪ್ರಿನ್ಸೆಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಕಾರ್ಮೆಲ್ ಸಿಬಿಎಸ್‌ಇ ಶಾಲೆಯ ವಿಯಾ ಸಾಯಿ, ಸ್ಟಾರ್ ಕಿಡ್ ಕರಾವಳಿ 2025 ವಿನ್ನರ್ ಆಗಿ ಕುಳಾಯಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಐಶಾನಿ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಾಮೀಸ್ ಬೆದ್ರ ಕ್ಲಾಸಿಕ್ 2025 ಮಿ. ದಕ್ಷಿಣ ಕನ್ನಡ ದೇಹದಾರ್ಢ್ಯ ಸ್ಪರ್ಧೆಯಲ್ಲಿ 100 ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ಒಟ್ಟು 3 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ ಎಂದರು. ಪತಿಕಾಗೋಷ್ಠಿಯಲ್ಲಿ ಎಂ.ಜೆ. ಅನೀಶ್, ಸಂಸ್ಥೆಯ ಸ್ವಾಮಿಪ್ರಸಾದ್, ಸ್ಪರ್ಧೆಯಲ್ಲಿ ವಿಜೇತ ಮಕ್ಕಳು ಉಪಸ್ಥಿತರಿದ್ದರು.


Spread the love
Share:

administrator

Leave a Reply

Your email address will not be published. Required fields are marked *