ಬೆಂಚ್ ಇಲ್ಲದೆ ನಿಂತು ತೀರ್ಥ ಸೇವೆ- ಮತ್ತೆ ವಿವಾದಕ್ಕೆ ಕಾರಣವಾದ ರಾಮೇಶ್ವರಂ ಕೆಫೆ

ಬೆಂಗಳೂರಿನಲ್ಲಿ ಪ್ರಸಿದ್ಧ ಕೆಫೆಗಳಲ್ಲಿ ರಾಮೇಶ್ವರಂ ಕೂಡ ಒಂದಾಗಿದ್ದು, ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೆಫೆಯಲ್ಲಿ ಹೆಚ್ಚುವರಿ ಹಣ ಪಡೆದು ಜಿರಳೆ ಬಿದ್ದ ಪೊಂಗಲ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಜಿರಲೆ ಬಿದ್ದ ಪೊಂಗಲ್ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೆ, ಇದೇ ವೇಳೆ ಕಾಫಿ, ಆಹಾರ ಬೆಲೆಯನ್ನು ಸಹ ತಿಳಸಿದ್ದು, ಈ ಬಿಲ್ ಎಲ್ಲೆಡೆ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಮಹಿಳೆಯೊಬ್ಬರು ಕೆಫೆಯಲ್ಲಿನ ನ್ಯೂನ್ಯತೆಗಳನ್ನು ಬಿಚ್ಚಿಟ್ಟಿದ್ದಾರೆ.

ಮಹಿಳೆ ಹೇಳಿಕೆ ಭಾರೀ ವೈರಲ್?: ಇದೀಗ ರಾಮೇಶ್ವರಂ ಕೆಫೆಯವರು ತೀರ್ಥ ಎಂದು ಮೂರು ಕಡೆಗಳಲ್ಲಿ ಔಟ್‌ಲೆಟ್‌ಗಳನ್ನು ಓಪನ್ ಮಾಡುತ್ತಿದ್ದಾರೆ. ಎಲ್ಲೋದ್ರೂ ಪ್ರಸಾದನೂ ನಿಂತುಕೊಂಡೇ ತಗೊಬೇಕು.. ತೀರ್ಥನೂ ನಿಂತುಕೊಂಡೇ ತಗೊಬೇಕು. ಬೆಂಚ್ ಹಾಕ್ರೋ ಕುಳಿತುಕೊಲ್ಲೋಕೆ. ಅಷ್ಟೆಲ್ಲ ಹಣ ಕೊಟ್ಟರೂ ಏನುಕ್ಕೆ ನಿಲ್ಲಿಸಿಬಿಟ್ಟು ಊಟ ಮಾಡಿಸುತ್ತೀರಾ? ಅದರಲ್ಲೂ ಇಲ್ಲಿನ ಆಹಾರವಂತೂ ಗುಣಮಟ್ಟದಿಂದ ಇರುವುದಿಲ್ಲ ಅಷ್ಟಕಷ್ಟೇ ಎಂದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಶಾಂತಸಾಗರ ಸೇರಿದಂತೆ ಬೇರೆ ಕಡೆಗಳಲ್ಲಿ ಅಲ್ಲೆಲ್ಲ ಬೆಂಚ್ ಹಾಕಿರುತ್ತಾರೆ. ಇಲ್ಲಿ ಕಡಿಮೆ ದರ ಇದ್ದರೂ ಕೂಡ ಆಹಾರ ಅಷ್ಟೇ ರುಚಿಯಾಗಿ ಕೊಡುತ್ತಾರೆ. ಕೊಡುವ ಹಣಕ್ಕೆ ಬೆಂಚ್ ಇಲ್ಲದಿದ್ದರೂ ನಡೆಯುತ್ತದೆ. ಆದರೆ, ರಾಮೇಶ್ವರಂ ಕೆಫೆಯಲ್ಲಿ ಹೆಚ್ಚು ಹಣ ಕೊಟ್ಟರೂ ಆಹಾರ ಗುಣಮಟ್ಟ ಕಳಪೆಯಾಗಿರುತ್ತದೆ. ಅದರಲ್ಲೂ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಜಿರಲೆ ಪತ್ತೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ ಪೊಂಗಲ್‌ನಲ್ಲಿ ಜಿರಲೆ ಪತ್ತೆಯಾಗಿದ್ದು, ಇದರಿಂದ ಕೆಫೆ ವಿರುದ್ಧ ಗ್ರಾಹಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಜುಲೈ 24ರ ಬೆಳಗ್ಗೆ ಲೋಕನಾಥ್ ಎಂಬುವವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂಪಾಯಿಗೆ ಫಿಲ್ಟರ್ ಕಾಫಿ ಖರೀದಿ ಮಾಡಿದ್ದರು. ಒಟ್ಟು ಬಿಲ್ 504 ರೂಪಾಯಿ ಆಗಿತ್ತು ಎಂದು ವರದಿ ಆಗಿತ್ತು.
ಪೊಂಗಲ್ ತಿನ್ನುವ ವೇಳೆ ಅದರಲ್ಲಿ ಜಿರಳೆ ಪತ್ತೆ ಆಗಿದ್ದು, ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ನಮ್ಮಿಂದ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿರುವ ವಿಡಿಯೋ ಸಹ ವೈರಲ್ ಆಗಿತ್ತು.
ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ದಿವ್ಯಾ, ಈಗಾಗಲೇ ಈ ವಿಚಾರದ ಬಗ್ಗೆ ದೂರು ದಾಖಲಿಸಿದ್ದೇವೆ. ಘಟನೆ ನಡೆದ ತಕ್ಷಣವೇ ಏರ್‌ಪೋರ್ಟ್‌ನಲ್ಲಿ ಇರುವ ಎಫ್‌ಎಸ್‌ಎಸ್‌ಐ ತಂಡ ಆಗಮಿಸಿ, ಸಂಪೂರ್ಣ ತಪಾಸಣೆ ನಡೆಸಿದರು. ಆ ಕೀಟವನ್ನು ಪರಿಶೀಲನೇ ಮಾಡಿದ್ದಾರೆ. ಅವರು ಸ್ಪಷ್ಟನೆ ನೀಡುತ್ತಿರುವ ಪ್ರಕಾರ, ಆ ರೀತಿಯ ಕೀಟ ಏರ್‌ಪೋರ್ಟ್‌ನಲ್ಲಿಯೇ ಇಲ್ಲ ಎಂದು ಹೇಳುತ್ತಿದ್ದಾರೆ ಅಂತಾ ಹೇಳಿದ್ದಾರೆ. ಅಲ್ಲದೆ, ಹಣಕ್ಕಾಗಿ ಈ ಕೆಲಸ ಮಾಡಿದ್ದಾರೆ ಅಂತಲೂ ದೂರು ದಾಖಲಿಸಿದ್ದು, ಇದು ಇನ್ನೂ ತನಿಖೆ ಹಂತದಲ್ಲಿದೆ.
ದೂರಿನಲ್ಲಿ ಏನಿದೆ?: ಜಿರಲೆ ಪತ್ತೆ ಬೆನ್ನಲ್ಲೇ ಕೆಲವು ಅಪರಿಚಿತರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕಳಿಬಂದಿದೆ. ಊಟ ಕೆಟ್ಟದಾಗಿದೆ ಎಂದು ಆರೋಪಿಸಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ವಿಭಾಗದ ರಾಮೇಶ್ವರಂ ಕೆಫೆ ಹೆಡ್ ಸುಮಂತ್ ದೂರು ನೀಡಿದ್ದರು. ಇದನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು.
ರಾಮೇಶ್ವರಂ ‘ತೀರ್ಥ’ ಆರಂಭದ ಉದ್ದೇಶವೇನು?
ದಕ್ಷಿಣ ಭಾರತ ಪಾಕಪದ್ಧತಿಗೆ ಹೆಸರುವಾಸಿ ಆಗಿರುವ ದಿ ರಾಮೇಶ್ವರಂ ಕೆಫೆ ಇದೀಗ ಉತ್ತರ ಭಾರತದ ಶೈಲಿ ಆಹಾರಪದ್ಧತಿ ಪರಿಚಯಿಸುತ್ತಿದ್ದು, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನೂತನವಾಗಿ ತೀರ್ಥ ಶೀರ್ಷಿಕೆಯಡಿಯಲ್ಲಿ ಶಾಖೆಯನ್ನು ತೆರೆದಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ ಸಹ-ಸಂಸ್ಥಾಪಕ, ಸಿಇಒ ರಾಘವೇಂದ್ರ ರಾವ್, ದಕ್ಷಿಣ ಭಾರತದ ಸಾಂಪ್ರದಾಯಿಕ ಭೋಜನವನ್ನು ಜನಸಾಮಾನ್ಯರಿಗೆ ಉಣ ಬಡಿಸಿದ ನಂತೆ ಉತ್ತರ ಭಾರತದ ಆಹಾರ ಪದ್ಧತಿಯನ್ನೂ ಕೂಡ ಜನರಿಗೆ ಪರಿಚಯಿಸಬೇಕು ಎಂ ಉದ್ದೇಶದಿಂದ ನೂತನವಾಗಿ ಮೊದಲ ತೀರ್ಥ ಶೀರ್ಷಿಕೆಯಡಿ ಶಾಖೆ ಆರಂಭಿಸಲಾಗಿದ್ದು, ಆಗಸ್ಟ್ 1ರಿಂದ ಜನಸಾಮಾನ್ಯರಿಗೆ ಲಭ್ಯ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
