Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ – ದಕ್ಷಿಣ ಕನ್ನಡ, ಉಡುಪಿ ಮತ್ತೆ ಟಾಪ್ 2 ಜಿಲ್ಲೆಗಳು

Spread the love

ದಕ್ಷಿಣ ಕನ್ನಡ :2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಬೆಳಗ್ಗೆ 11.45ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾ.21 ರಿಂದ ಏ.4 ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂದೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Karnataka SSLC Results 2025 LIVE: ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಎಷ್ಟು?

625 ಅಂಕಗಳನ್ನು ಪಡೆದ‌ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿಗಳು – 22

624 ಅಂಕಗಳನ್ನು ಪಡೆದ ಸೆಕೆಂಡ್ ರ‍್ಯಾಂಕ್ ವಿದ್ಯಾರ್ಥಿಗಳು – 65

623 ಅಂಕಗಳನ್ನು ಪಡೆದ ಮೂರನೇ ರ‍್ಯಾಂಕ್ ವಿದ್ಯಾರ್ಥಿಗಳು – 108

622 ಅಂಕಗಳನ್ನು ಪಡೆದ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 189

621 ಅಂಕಗಳನ್ನು ಪಡೆದ ಐದನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 289

Karnataka SSLC Results 2025 LIVE: 22 ಟಾಪರ್ ವಿದ್ಯಾರ್ಥಿಗಳು

1. ಅಖಿಲ್ ಅಹ್ಮದ್ ನದಾಫ್ – ವಿಯಪುರ
2. ಭಾವನಾ – ಬೆಂಗಳೂರು ಗ್ರಾಮಾಂತರ
3. ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
4. ಧನುಷ್ – ಮೈಸೂರು
5. ಧೃತಿ – ಮಂಡ್ಯ
6. ಜಾಹ್ನವಿ – ಬೆಂಗಳೂರು ದಕ್ಷಿಣ
7. ಮಧುಸೂದನ್ ರಾಜು – ಬೆಂಗಳೂರು ಉತ್ತರ
8. ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
9. ಮೌಲ್ಯ ಡಿ ರಾಜ್ – ಚಿತ್ರದುರ್ಗ
10. ನಮನ – ಶಿವಮೊಗ್ಗ
11. ನಮಿತಾ – ಬೆಂಗಳೂರು ದಕ್ಷಿಣ
12. ನಂದನ್ – ಚಿತ್ರದುರ್ಗ
13. ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
14. ರಂಜಿತಾ – ಬೆಂಗಳೂರು ಗ್ರಾಮಾಂತರ
15. ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
16. ಶಹಿಷ್ಣು – ಶಿವಮೊಗ್ಗ
17. ಶಗುಫ್ತಾ ಅಂಜುಮ್ – ಸಿರಸಿ
18. ಸ್ವಸ್ತಿ ಕಾಮತ್ – ಉಡುಪಿ
19. ತನ್ಯಾ – ಮೈಸೂರು
20. ಉತ್ಸವ್ ಪಾಟೀಲ್ – ಹಾಸನ
21. ಯಶವಂತ್ ರೆಡ್ಡಿ – ಮಧುಗಿರಿ
22. ಯುಕ್ತಿ – ಬೆಂಗಳೂರು ದಕ್ಷಿಣ

ಟಾಪ್ 5 ಜಿಲ್ಲೆಗಳ ಫಲಿತಾಂಶ

ದಕ್ಷಿಣ ಕನ್ನಡ – 91.12%
ಉಡುಪಿ – 89.96%
ಉತ್ತರ ಕನ್ನಡ – 83.19%
ಶಿವಮೊಗ್ಗ – 82.29%
ಕೊಡಗು – 82.21%


Spread the love
Share:

administrator

Leave a Reply

Your email address will not be published. Required fields are marked *