ಶನಿವಾರ-ಭಾನುವಾರದ ವಿಶೇಷ ಧಾರ್ಮಿಕ ಪ್ರವಾಸ: ಕೆಎಸ್‌ಆರ್‌ಟಿಸಿ ಹೊಸ ಟೂರ್ ಪ್ಯಾಕೇಜ್ ಆರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ವಾರಾಂತ್ಯದ ವಿಶೇಷ ಟೂರ್ ಪ್ಯಾಕೇಜ್ ಆರಂಭಿಸಿದ್ದು, ಈ ಪ್ಯಾಕೇಜ್ ಮೂಲಕ ಜನರು 3 ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಟೂರ್ ಪ್ಯಾಕೇಜ್’ನ್ನು ಆರಂಭಿಸಲಾಗಿದ್ದು, 350 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ ಟೂರ್ ಪ್ಯಾಕೇಜ್ ಇದಾಗಿದ್ದು, ಮೇ 31 ರಂದು ಆರಂಭವಾಗುತ್ತಿದೆ. ಪ್ರತಿ ವಾರಾಂತ್ಯ ಅಂದರೆ, ಶನಿವಾರ ಮತ್ತು ಭಾನುವಾರ ಈ ಟೂರ್ ಪ್ಯಾಕೇಜ್ ಲಭ್ಯವಿರಲಿದೆ.
ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್ ಟೂರ್ ಪ್ಯಾಕೇಜ್ ಟಿಕೆಟ್ ಪಡೆಯಲು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ದೂರವಾಣಿ ಸಂಖ್ಯೆ 080 – 26252625 / 7760990100 / 7760990560 / 7760990287 ಸಂಪರ್ಕಿಸಬಹುದಾಗಿದೆ.
ಟಿಕೆಟ್ ದರ ಇಂತಿದೆ…
ವಯಸ್ಕರಿಗೆ 670 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, 6 ವರ್ಷದಿಂದ 12 ವರ್ಷ ವಯಸ್ಸಿನ ಮಕ್ಕಳು ಪ್ರಯಾಣಿಸುತ್ತಿದ್ದರೆ ಒಬ್ಬರಿಗೆ 500 ರೂಪಾಯಿ ಕೊಟ್ಟು ಬುಕ್ಕಿಂಗ್ ಮಾಡಬಹುದಾಗಿದೆ.
670 ರೂಪಾಯಿಗಳಲ್ಲಿ ಪ್ರವಾಸಿ ಸ್ಥಳಗಳ ಪ್ರವೇಶ ಶುಲ್ಕ, ಆಹಾರವನ್ನು ಹೊರತುಪಡಿಸಲಾಗಿದೆ. ಕೇವಲ ಪ್ರವಾಸಿಗರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯಲು ಮಾತ್ರ ದರ ನಿಗದಿ ಮಾಡಲಾಗಿದೆ.
ಪ್ಯಾಕೇಜ್ ನಲ್ಲಿರುವ ದೇವಾಲಯಗಳು ಇಂತಿದೆ…
ಪ್ಯಾಕೇಜ್ ಬೆಂಗಳೂರಿನಿಂದ ಶ್ರೀರಂಗಪಟ್ಟಣ- ಕಲ್ಲಹಳ್ಳಿ- ಮೇಲುಕೋಟೆಯಂತಹ ಸ್ಥಳಗಳನ್ನು ಒಳಗೊಂಡಿದ್ದು, ಪ್ರವಾಸವು ಬೆಂಗಳೂರಿನಿಂದ ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗುತ್ತದೆ. ಅಲ್ಲಿಂದ ನಿಮಿಷಾಂಬ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ ದೇವಾಲಯ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಾಲಯ, ತಂಗಿ ಕೊಳ, ಅಕ್ಕ ಕೊಳ, ರಾಯ ಗೋಪುರಂ ಸ್ಥಳಗಳನ್ನು ಸಂದರ್ಶಿಸಿ, ರಾತ್ರಿ ಬೆಂಗಳೂರಿಗೆ ವಾಪಸ್ಸಾಗಬಹುದಾಗಿದೆ.
