Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೋನು ನಿಗಮ್ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ: ಕ್ಷಮೆ ಹಾಗೂ ಕನ್ನಡ ಚಿತ್ರರಂಗದಿಂದ ನಿಷೇಧ ಕಠಿಣ ಎಚ್ಚರಿಕೆ

Spread the love

ಭಾರತದ ಪ್ರಸಿದ್ಧ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾವೆ. ಸೋನು ನಿಗಮ್ ನೀಡಿದ ಹೇಳಿಕೆಗಳು ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದ್ದು, ಕೂಡಲೇ ಕನ್ನಡಿಗರ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ನೀವು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿ ಬಂದು ನಿಮ್ಮ ಮುಖಕ್ಕೆ ಮಸಿ ಬಳಿಯಲಾಗುವುದು.ಇದರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ರವಾನಿಸಿವೆ.

ಬೆಂಗಳೂರಿನ ಅವಲಹಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸೋನು ನಿಗಮ್, ಕನ್ನಡ ಅಭಿಮಾನವನ್ನು ಪೆಹಲ್ಗಾಮ್ ಉಗ್ರವಾದಿ ದಾಳಿಗೆ ಹೋಲಿಸಿದ್ದಾರೆ (Sonu Nigam Over Anti-Kannada Comments) ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದು, ಕ್ಷಮೆ ಕೇಳುವಂತೆ ಪಟ್ಟುಹಿಡಿದಿವೆ. ಕರ್ನಾಟಕಕ್ಕೆ ಬಂದಾಗ ಕನ್ನಡದ ಹಾಡುಗಳನ್ನು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಕ್ಕೆ ಈ ರೀತಿ ಹೇಳಿಕೆಯನ್ನು ನಿಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ವೇದಿಕೆ, ಖಾಸಗಿ ಕಾಲೇಜು ಹಾಗೂ ಸಂಗೀತ ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ, ಸೋನು ನಿಗಮ್‌ನಿಂದ ಬಹಿರಂಗ ಕ್ಷಮೆ ಕೇಳಿಸುವಂತೆ ಒತ್ತಾಯಿಸಿದೆ. ಕ್ಷಮೆ ಕೇಳದಿದ್ದಲ್ಲಿ, ಎಲ್ಲೆಲ್ಲಿ ಸಿಗ್ತಾರೋ ಅಲ್ಲಿ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅವರ ವಿರುದ್ದ ಪೊಲೀಸರಿಗೆ ದೂರು ನೀಡಲು ರೂಪೇಶ್ ರಾಜಣ್ಣ ಮುಂದಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಸೋನು ನಿಗಮ್ ವಿರುದ್ಧ ಚಲನಚಿತ್ರ ರಂಗದಲ್ಲಿ ಸಂಪೂರ್ಣ ಬಹಿಷ್ಕಾರಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನುಮುಂದೆ ಯಾವುದೇ ಕನ್ನಡ ಚಲನಚಿತ್ರದಲ್ಲಿ ಸೋನು ನಿಗಮ್ ಹಾಡಿದರೆ ಆ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ಮಾಡಲಾಗುತ್ತದೆ. ಅದಕ್ಕೆ ವಾಣಿಜ್ಯ ಮಂಡಳಿಯೇ ನೇರ ಹೊಣೆಗಾರರಾಗುತ್ತದೆ’ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆಯನ್ನು ನೀಡಿವೆ. ಜೊತೆಗೆ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಹರಿಕೃಷ್ಣ, ಅಜನೀಶ್ ಲೋಕನಾಥ್ ಹಾಗೂ ಇತರರಿಗೆ ಸಹ ಎಚ್ಚರಿಕೆ ನೀಡಲಾಗಿದೆ. ಇವರೆಲ್ಲರೂ ಈ ಘಟನೆಯಿಂದ ಕನ್ನಡಿಗರಿಗೆ ಆಗೊರುವ ಅವಮಾನವನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಸೋನು ನಿಗಮ್ ಹೆಸರು ದೇಶದಲ್ಲಿ ಪ್ರಸಿದ್ಧಿಗೆ ಬರಲು ಕರ್ನಾಟಕದ ಕನ್ನಡ ಸಿನಿಮಾಗಳಲ್ಲಿ ಚಾನ್ಸ್ ಕೊಟ್ಟಿರುವುದೇ ಪ್ರಮುಖ ಕಾರಣವಾಗಿದೆ. ಆದರೂ, ಇದನ್ನು ತಿಳಿದುಕೊಳ್ಳದ ಅವಿವೇಕಿ ವ್ಯಕ್ತಿಯನ್ನ ಕನ್ನಡದ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು ಕನ್ನಡಿಗರಿಗೆ ಧಕ್ಕೆ ತರುವ ಸಂಗತಿಯಾಗಿದೆ’ ಎಂಬ ಅಭಿಪ್ರಾಯವನ್ನು ಕನ್ನಡಪರ ಸಂಘಟನೆಗಳು ವ್ಯಕ್ತಪಡಿಸಿವೆ. ಇನ್ನುಮುಂದೆ, ಕರ್ನಾಟಕದಲ್ಲಿ ಸೋನು ನಿಗಮ್‌ಗೆ ಯಾವುದೇ ಬಗೆಯ ಕಾರ್ಯಕ್ರಮಗಳಿಗೆ ಯಾರೊಬ್ಬರೂ ಆಹ್ವಾನ ನೀಡಬಾರದು, ಸೋನು ನಿಗಮ್ ಕರ್ನಾಟಕಕ್ಕೆ ಬರಬಾರದು’ ಎಂದು ಕನ್ನಡಪರ ಸಂಘಟನೆಗಳು ಆಗ್ರಹ ಮಾಡಿವೆ.

ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ:
‘ಈಗಾಗಲೇ ಗಾಯಕ ಸೋನು ನಿಗಮ್ ಹೇಳಿಕೆಯನ್ನು ಎಲ್ಲ ಕನ್ನಡಪರ ಸಂಘಟನೆಗಳಿಂದ ಖಂಡಿಸಲಾಗಿದೆ. ‘ಕನ್ನಡಿಗರಿಂದಲೇ ದೇಶದಾದ್ಯಂತ ಖ್ಯಾತಿ ಮತ್ತು ಹಣವನ್ನು ಗಳಿಸಿದ ಸೋನು ನಿಗಮ್, ಇದೀಗ ಕನ್ನಡಿಗರ ವಿರುದ್ಧವೇ ಮಾತನಾಡಿದ್ದಾರೆ. ಇದೀಗ ಕನ್ನಡಿಗರಿಗೆ ಅವಮಾನ ಮಾಡಿರುವ ಅವರ ಹೇಳಿಕೆಯನ್ನು ಖಂಡನೆ ಮಾಡುವ ಜೊತೆಗೆ ಇನ್ನುಮುಂದೆ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಕನ್ನಡ ಸಿನಿಮಾದ ಎಲ್ಲ ನಿರ್ಮಾಪಕರು ಇನ್ನುಮುಂದೆ ಯಾವುದೇ ಕನ್ನಡ ಚಿತ್ರದಲ್ಲಿ ಇವರಿಂದ ಹಾಡು ಹಾಡಿಸಬಾರದು ಎಂಬ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಟಿ.ಎ. ನಾರಾಯಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ


Spread the love
Share:

administrator

Leave a Reply

Your email address will not be published. Required fields are marked *