ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಸೋನು ನಿಗಮ್

ನವದೆಹಲಿ : ಖ್ಯಾತ ಗಾಯಕ ಸೋನು ನಿಗಮ್ ಹೆಸರಲ್ಲಿ ಮೋಸ ನಡೆಯುತ್ತಿದೆ. ಆನ್ಲೈನ್ನಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋನು ನಿಗಮ್ ಅವರು ಹಲವು ವರ್ಷಗಳಿಂದ ಟ್ವಿಟರ್ನಲ್ಲಿ ಆ್ಯಕ್ಟೀವ್ ಆಗಿಲ್ಲ. ಆದಾಗ್ಯೂ ಅವರ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಸೋನು ನಿಗಮ್ ಅವರ ನಿಜವಾದ ಖಾತೆ ಎಂದು ಬಿಂಬಿಸಿಕೊಳ್ಳುತ್ತಾ, ವಿವಾದಾತ್ಮಕ ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇದು ನಟನ ಗಮನಕ್ಕೆ ಬಂದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ. ಆನ್ಲೈನ್ನಲ್ಲಿ ನನ್ನ ಐಡೆಂಟಿಟಿಯನ್ನು ಯಾರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ತಂಡದವರು ಯಾವುದೇ ಕಾರಣಕ್ಕೂ ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಹೆಸರಲ್ಲಿ ಯಾವುದಾದರೂ ಫೇಕ್ ಖಾತೆ ಕಂಡರೆ ಅದನ್ನು ರಿಪೋರ್ಟ್ ಮಾಡಿ ಮತ್ತು ಬ್ಲಾಕ್ ಮಾಡಿ’ ಎಂದು ಸೋನು ನಿಗಮ್ ಅವರು ಕೋರಿದ್ದಾರೆ. ನಾನು ಟ್ವಿಟರ್ನ ಕಳೆದ 8 ವರ್ಷಗಳಿಂದ ಬಳಸುತ್ತಿಲ್ಲ. ಆದಾಗ್ಯೂ ನನ್ನ ಹೆಸರಲ್ಲಿ ಕೆಲವರು ಖಾತೆ ಮಾಡಿಕೊಂಡಿದ್ದಾರೆ. ವಿವಾದಾತ್ಮಕ ವಿಚಾರಗಳನ್ನು ಅದರಲ್ಲಿ ಪೋಸ್ಟ್ ಮಾಡುವ ಕೆಲಸ ಮಾಡುತ್ತಾ ಇದ್ದಾರೆ’ ಎಂದು ಅವರು ಆತಂಕ ಹೊರಹಾಕಿದ್ದಾರೆ.