Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಎಎಸ್ ಮಗಳ ಅಪಹರಣ ಆರೋಪದಲ್ಲಿದ್ದ ಬಿಜೆಪಿ ಸಂಸದ ಪುತ್ರ ಗೆ ಈಗ ಎಎಜಿ ಹುದ್ದೆ

Spread the love

ಚಂಡಿಘಡ:ಐಎಎಸ್‌ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ, ಆಕೆಯ ಅಪಹರಣಕ್ಕೆ ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಲವು ತಿಂಗಳು ಜೈಲುವಾಸ ಅನುಭವಿಸಿದ್ದ ವಿಕಾಸ್‌ ಬರಾಲಾ ಅವರೀಗ ಹರಿಯಾಣದ ಸಹಾಯಕ ಅಡ್ವೊಕೇಟ್‌ ಜನರಲ್‌ (ಎಎಜಿ) ಆಗಿ ನೇಮಕಗೊಂಡಿದ್ದಾರೆ.

ವಿಕಾಸ್‌ ಅವರು ಬಿಜೆಪಿ ಸಂಸದ ಸುಭಾಷ್‌ ಬರಾಲಾ ಅವರ ಮಗ. ಅಧಿಕಾರಿಗಳು ಈ ಬಗ್ಗೆ ಬುಧವಾರ ಮಾಹಿತಿ ನೀಡಿದರು. ವಿಕಾಸ್‌ ಅವರು ದೆಹಲಿಯ ನ್ಯಾಯಾಲಯಗಳಲ್ಲಿ ಈಗ ಹರಿಯಾಣ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಕಾನೂನು ಇಲಾಖೆಗಾಗಿ ಹರಿಯಾಣ ಸರ್ಕಾರವು ಜುಲೈ 18ರಂದು 100 ನೇಮಕಾತಿಗಳನ್ನು ಮಾಡಿತ್ತು. ಇದರಲ್ಲಿ ವಿಕಾಸ್‌ ಅವರದ್ದೂ ಒಂದು.

ಸುಭಾಷ್‌ ಅವರು ಹರಿಯಾಣದ ಬಿಜೆ‍ಪಿ ಅಧ್ಯಕ್ಷರಾಗಿದ್ದಾಗ 2017ರಲ್ಲಿ ಈ ಘಟನೆ ನಡೆದಿತ್ತು. ಐಎಎಸ್‌ ಅಧಿಕಾರಿಯ ಮಗಳು ಪೊಲೀಸರಿಗೆ ದೂರು ನೀಡಿದ್ದರು. ಚಂಡೀಗಢ ನ್ಯಾಯಾಲಯದಲ್ಲಿ ಈಗಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜಾಮೀನಿನ ಮೇಲೆ ವಿಕಾಸ್‌ ಅವರು ಹೊರಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *