Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇಶದ ಕೆಲವು ಕೊಳಕು ರೈಲುಗಳು: ಸ್ವಚ್ಛತೆ ಕಾಪಾಡಲು ನಿರ್ಲಕ್ಷ್ಯವೇ ಕಾರಣ!

Spread the love

ದೇಶದ ಕೆಲವು ರೈಲುಗಳು ತೀರಾ ಕೊಳಕಾಗಿವೆ. ಪ್ರಯಾಣಿಕರ ನಿರ್ಲಕ್ಷ್ಯ ಮತ್ತು ರೈಲ್ವೆ ನಿರ್ವಹಣೆಯ ಕೊರತೆಯಿಂದಾಗಿ ಈ ಸಮಸ್ಯೆ ಉಲ್ಬಣಗೊಂಡಿದೆ. ಕರ್ನಾಟಕದಲ್ಲೂ ಕೆಲವು ರೈಲುಗಳು ಕೊಳಕಾಗಿವೆ.

ಪ್ರಯಾಣ ಸುಖವಾಗಿರಬೇಕು ಅಂದರೆ ವಾಹನ ಸ್ವಚ್ಛವಾಗಿರಬೇಕು. ಆದರೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ನಲ್ಲಿ ಜನ ತಮ್ಮದಲ್ಲವೆಂದು ಸ್ವಚ್ಛತೆ ಬಗ್ಗೆ ಕೇರ್ ಮಾಡುವುದಿಲ್ಲ

ಬಸ್‌ಗಳಲ್ಲಿ ‘ಸ್ವಚ್ಛತೆ ಕಾಪಾಡಿ’ ಎಂದು ಬರೆದಿರುತ್ತದೆ. ಆದರೆ ರೈಲುಗಳಲ್ಲಿ ಏನು ಮಾಡೋದು? ನೂರಾರು ಅಥವಾ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ, ಹೀಗಾಗಿ ಕ್ಲೀನ್ ಮಾಡೋಕೆ ಆಗಲ್ಲ.

ಕೆಲವು ರೈಲುಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಜನ ಮೂಗು ಮುಚ್ಚಿಕೊಂಡು ಪ್ರಯಾಣ ಮಾಡಬೇಕು. ಯಾರ ತಪ್ಪು ಅಂತ ಗೊತ್ತಿಲ್ಲ. ಆದರೆ ಕೆಲವು ರೈಲುಗಳು ಮಾತ್ರ ತುಂಬಾ ಕೊಳಕಾಗಿವೆ. ಒಮ್ಮೆ ಪ್ರಯಾಣ ಮಾಡಿದರೆ ಮತ್ತೆ ಆ ರೈಲಲ್ಲಿ ಹೋಗೋಕೆ ಹೆದರುತ್ತಾರೆ. ಜನರ ಅನುಭವ, ದೂರುಗಳ ಆಧಾರದ ಮೇಲೆ ಕೊಳಕಾದ ರೈಲುಗಳ ಪಟ್ಟಿಯನ್ನು ಮಾಡಲಾಗಿದೆ.

ಬಿಹಾರದ ಸಹರ್ಸಾದಿಂದ ಪಂಜಾಬಿನ ಅಮೃತ್‌ಸರ್‌ಗೆ (12203/Saharsa – Amritsar Garib Rath Express) ಹೋಗುವ ರೈಲು ಇದು. ಬಲ್ಲಿಯಾ, ವಾರಣಾಸಿ, ಲಕ್ನೋ, ಮೊಘಲ್ ಸರೈ, ಕಾನ್ಪುರ್, ಡೆಲ್ಲಿ, ಅಂಬಾಲಾ ಮುಂತಾದ ನಗರಗಳಿಗೆ ಹೋಗುತ್ತದೆ. ಆದರೆ ಈ ರೈಲು ತುಂಬಾ ಕೊಳಕು. ಜನ ಎಲ್ಲೆಂದರಲ್ಲಿ ಕಸ ಹಾಕ್ತಾರೆ. ಕ್ಲೀನ್ ಮಾಡೋಕೆ ಟೈಮ್ ಇರಲ್ಲ. ಟಾಯ್ಲೆಟ್‌ಗಳ ಪರಿಸ್ಥಿತಿ ಹೇಳತೀರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜಸ್ಥಾನದ ಅಜ್ಮೀರ್‌ನಿಂದ ಜಮ್ಮು ಕಾಶ್ಮೀರದ ತಾವಿಗೆ (Galta Dham Pooja SF Express) ಹೋಗುವ ರೈಲು. ಮೂರು-ನಾಲ್ಕು ರಾಜ್ಯಗಳ ಮೂಲಕ 1000 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣ. ಅಜ್ಮೀರ್, ಜೈಪುರ್, ನ್ಯೂ ಡೆಲ್ಲಿ, ಲುಧಿಯಾನ ಮೂಲಕ ಜಮ್ಮು ತಲುಪುತ್ತದೆ. ಈ ರೈಲು ಕೂಡ ತುಂಬಾ ಕೊಳಕು. ಜನರ ನಿರ್ಲಕ್ಷ್ಯ, ರೈಲ್ವೆ ನಿರ್ವಹಣೆ ಕೊರತೆ ಕಾರಣ.

ಡೆಲ್ಲಿಯ ಆನಂದ್ ವಿಹಾರ್‌ನಿಂದ ಬಿಹಾರದ ಜೋಗ್ಬಾನಿಗೆ (12488/Seemanchal Express) ಹೋಗುವ ರೈಲು. ಈ ರೈಲಿನ ಬಗ್ಗೆ ತುಂಬಾ ಕಂಪ್ಲೇಂಟ್‌ಗಳು ಬರುತ್ತಲೇ ಇರುತ್ತವೆ. ಜನರ ವರ್ತನೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೈಲು ತುಂಬಾ ಕೊಳಕಾಗಿದೆ. ಇಲ್ಲಿಯ ಜನರ ನಡೆಯಿಂದಾಗಿ ಈ ರೈಲಿನಲ್ಲಿ ಪ್ರಯಾಣ ಮಾಡೋಕೆ ಹೆದರಿಕೆ ಅನ್ನಿಸುತ್ತದೆ.

ಮುಂಬೈನಿಂದ ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ (12471/Swaraj Express) ಹೋಗುವ ರೈಲು. ಯಾತ್ರಿಕರ ಜೊತೆ ಬೇರೆ ಬೇರೆ ರಾಜ್ಯಗಳ ಮೂಲಕ ಹೋಗುತ್ತೆ. ಈ ರೈಲು ಕೂಡ ಕೊಳಕಾಗಿದೆ. ಈ ರೈಲಿನ ಸ್ವಚ್ಛತೆ ಬಗ್ಗೆ ತುಂಬಾ ಕಂಪ್ಲೇಂಟ್‌ಗಳು ಬರುತ್ತವೆ. ಇಲ್ಲಿನ ಜನರು ಸ್ವಚ್ಛತೆ ಬಗ್ಗೆ ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ದೀರ್ಘವಾದ ರೈಲು ಪ್ರಯಾಣದ ಕಾರಣ, ಅಲ್ಲಲ್ಲಿ ಇಳಿದು ಹೋಗುವ ಪ್ರಯಾಣಿಕರು ಈ ರೈಲನ್ನು ಅತ್ಯಂತ ಕೊಳಕಾಗಿ ಮಾಡುತ್ತಾರೆ ಎಂಬ ಆರೋಪವೂ ಇದೆ.

ಪಂಜಾಬಿನ ಫಿರೋಜ್‌ಪುರದಿಂದ ತ್ರಿಪುರದ ಅಗರ್ತಲಾಗೆ (Tripura Sundari Express/14620) ಹೋಗುವ ರೈಲು. ಪಂಜಾಬ್, ಹರಿಯಾಣ, ಡೆಲ್ಲಿ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮೂಲಕ ಅಗರ್ತಲಾ ತಲುಪುತ್ತದೆ. ಈ ರೈಲು ಕೂಡ ತುಂಬಾ ಕೊಳಕು. ಕಸದ ಸಮಸ್ಯೆ ಬಗ್ಗೆ ಕಂಪ್ಲೇಂಟ್‌ಗಳು ಬಂದರೂ ರೈಲ್ವೆ ಸಿಬ್ಬಂದಿ ಕ್ಲೀನ್ ಮಾಡಲ್ಲ ಎಂಬ ದೂರುಗಳಿವೆ.

ಕರ್ನಾಟಕದಲ್ಲಿ ಕೊಳಕಾದ ರೈಲುಗಳು ಯಾವುದು ಎಂದು ನೋಡುವುದಾದರೆ ಯಶವಂತಪುರ – ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಸುವಿಧಾ ಎಕ್ಸ್‌ಪ್ರೆಸ್ (Yesvantpur – Shri Mata Vaishno Devi Katra Suvidha Express/82651) ಕೊಳಕಾದ ರೈಲು ಎಂದು ಹೇಳಲಾಗುತ್ತದೆ. ಕಾರಣ ಈ ರೈಲು ನಿರಂತರವಾಗಿ 2.5 ದಿನಗಳ ಪ್ರಯಾಣ ಮಾಡುವುದರಿಂದ ರೈಲಿನಲ್ಲಿರುವ ಪ್ರಯಾಣಿಕರು ಇದನ್ನು ಮನೆಯಂತೆಯೇ ಭಾವಿಸಿರುತ್ತಾರೆ. ಇಲ್ಲಿ ಊಟ, ತಿಂಡಿ-ತಿನಿಸು ಸೇವನೆ, ನಿದ್ದೆ, ಶೌಚಾಲಯ ಬಳಕೆ ಸೇರಿದಂತೆ ಎಲ್ಲವನ್ನೂ ಮಾಡುತ್ತಾರೆ. ಹೀಗಾಗಿ, ಈ ರೈಲು ಕೊಳಕಾಗಿ ಕಾಣಿಸುತ್ತದೆ.

ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ಆರಂಭವಾಗಿ ಮೈಸೂರು ನಿಲ್ದಾಣಕ್ಕೆ ಈ ಹಂಪಿ ಎಕ್ಸ್‌ಪ್ರೆಸ್ ರೈಲು (16592/Hampi Express – Mysore to Hubli) ಪ್ರಯಾಣಿಸುತ್ತದೆ. ಇದು 15 ಗಂಟೆ ಪ್ರಯಾಣ ಮಾಡಲಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ಹಾದು ಹೋಗುತ್ತದೆ. ಈ ರೈಲಿನಲ್ಲಿ ಗುಟ್ಕಾ ಸೇವನೆ, ಧೂಮಪಾನ ಸೇರಿ ಇತ್ಯಾದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರೈಲಿನಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಹೀಗಾಗಿ, ಈ ರೈಲನ್ನು ಜನಾಭಿಪ್ರಾಯದ ಮೂಲಕ ಕೊಳಕಾದ ರೈಲು ಎಂದು ಹೇಳಲಾಗುತ್ತದೆ


Spread the love
Share:

administrator

Leave a Reply

Your email address will not be published. Required fields are marked *