ನಾಯಿ ದಾಳಿಯಿಂದ ತಪ್ಪಲು ಮನೆ ಕಾಂಪೌಂಡ್ ಹಾರಿದ ಸಾಫ್ಟ್‌ವೇರ್ ಇಂಜಿನಿಯರ್- ಕಳ್ಳ ಎಂದ ಮನೆಯವರು

ಬೆಂಗಳೂರು :ಬೆಂಗಳೂರಿನಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಇತ್ತ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ನಾಯಿ ಕಡಿತ ಪ್ರಕರಣ ಹೆಚ್ಚಾಗಿದೆ. ಇದೀಗ ಇಲ್ಲೊಂದು ಘಟನೆಯ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ಒಂದು ಭಯಾನಕ ಘಟನೆಯೂ ಇದಾಗಿದ್ದು, ಬೀದಿ ನಾಯಿಗಳ ಗುಂಪೊಂದು ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮನೆಯೊಂದರ ಕಾಂಪೌಂಡ್ ಹಾರಿದ್ದಾರೆ. ಇದೀಗ ಆ ಮನೆಯ ಮಾಲೀಕರು ಇವರನ್ನು ಕಳ್ಳ ಎಂದು ದೂರಿದ್ದಾರೆ.
ಉತ್ತರ ಭಾರತದ ಈ ವ್ಯಕ್ತಿ ಪ್ರಸ್ತುತ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬರಬೇಕಾದರೆ ನಾಯಿಗಳು ಇವರನ್ನು ಬೆನ್ನಟ್ಟಿದೆ. ನಿಲ್ಲಿಸಿದ ಕಾರಿನ ಬಳಿ ಇದ್ದ ನಾಯಿಗಳ ಗುಂಪು ದಾಳಿ ಮಾಡಲು ಮುಂದಾಗಿತ್ತು. ಈ ವೇಳೆ ಓಡಲು ಶುರು ಮಾಡಿ, ಅವುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅದೇ ಬೀದಿಯಲ್ಲಿದ್ದ ಮನೆಯೊಂದರ ಕಾಂಪೌಂಡ್ ಹಾರಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದು ನನಗೆ ಅನಿವಾರ್ಯವಾಗಿತ್ತು. ಈ ವೇಳೆ ಮೂವರು ನಿವಾಸಿಗಳು, 60ರ ಹರೆಯದ ಒಬ್ಬ ವ್ಯಕ್ತಿ ಮನೆಯಿಂದ ಹೊರಗೆ ಬಂದರು. ನನ್ನನ್ನೂ ಕಳ್ಳ ಎಂದು ಹೇಳಿದ್ದಾರೆ. ಈ ವೇಳೆ ನಾನು ಕ್ಷಮೆಯಾಚಿಸಿ, ನಾನು ಕಳ್ಳ ಅಲ್ಲ, ನಾಯಿಗಳು ಓಡಿಸಿಕೊಂಡು ಬಂದಿದೆ ಎಂದು ಎಷ್ಟೇ ಹೇಳಿದ್ರೂ ನಂಬುವ ಸ್ಥಿತಿಯಲ್ಲಿ ಅವರು ಇರಲಿಲ್ಲ.
ನಿನ್ನನ್ನು ಯಾಕೆ ನಾಯಿಗಳು ಅಟ್ಟಿಸಿಕೊಂಡು ಬಂತು, ಅದಕ್ಕೆ ನಮ್ಮ ಮನೆಯ ಕಾಂಪೌಂಡ್ ಹಾರುವುದಾ? ಇದನ್ನು ನಾವು ನಂಬುವುದಿಲ್ಲ ಎಂದು ಗದರಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ವಿವರಿಸಿದ್ದಾರೆ. ನಾನು ಯಾರು, ನಿಜಾಂಶ ಏನು ಎಂಬುದನ್ನು ಅವರಿಗೆ ವಿವರಿಸಿದೆ. ಸಾಕ್ಷಿಗಾಗಿ ಪ್ಯಾನ್, ಆಧಾರ್ ನಂಬರ್, ವಿಳಾಸ ಮತನ್ನ ಕಂಪನಿಯ ಪ್ರೊಫೈಲ್ ನೀಡಿದ್ರು ಅವರ ನಂಬಲಿಲ್ಲ. ಕೊನೆಗೆ ನನ್ನ ಫೋನ್ ಕಿತ್ತುಎಲ್ಲವನ್ನೂ ಪರಿಶೀಲನೆ ಮಾಡಿದ ನಂತರ ಮರುದಿನ ಬೆಳಿಗ್ಗೆ ಫೋನ್ ವಾಪಸ್ಸು ನೀಡಿದ್ದಾರೆ. ಒಮ್ಮೆ ನಿಮ್ಮ ಮನೆಯ ಸಿಸಿಟಿವಿ ನೋಡಿ, ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ಎಂದರು, ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಹೇಳಿದ್ದಾರೆ.

ಕೊನೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ನೆರೆಹೊರೆಯವರಿಗೆ ಹೇಳಲಾಯಿತು. ನಂತರ ನಿಜಾಂಶ ತಿಳಿದು, ಫೋನ್ ವಾಪಸ್ಸು ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎಂದಿಗೂ ನಾನು ಎದುರಿಸಿಲ್ಲ. ಜೀವ ರಕ್ಷಣೆ ಮಾಡಲು ಹೀಗೆ ಮಾಡಿದ್ರೆ, ಒಂದು ಸ್ವಲ್ಪವೂ ಕರುಣೆ ತೋರದೆ, ನನ್ನ ಜತೆಗೆ ಹೀಗೆ ನಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ರೆಡ್ಡಿಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರ ಅಪಾಯವನ್ನು ತಪ್ಪಿಸಲು ಖಾಸಗಿ ಆಸ್ತಿಗೆ ಪ್ರವೇಶಿಸಲು ಅನುಮತಿ ನೀಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 81 ಮತ್ತು 97 ಅನ್ನು ಉಲ್ಲೇಖಿಸಿ, ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ.