ಬೆಂಗಳೂರಿನಲ್ಲಿ ಚಪ್ಪಲಿ, ಶೂಗಳಲ್ಲಿ ಹಾವುಗಳು ಪತ್ತೆ: ಮೂರು ದಿನಗಳಲ್ಲಿ ಇಬ್ಬರು ಸಾವು

ಬೆಂಗಳೂರು: ನಿಮ್ಮ ನಿಮ್ಮ ಚಪ್ಪಲಿ & ಶೂಗಳನ್ನು (Footwears) ಬಿಡುವವರು ಹುಷಾರಾಗಿರಿ..ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ (Bengaluru) ಇತ್ತೀಚೆಗಂತೂ ಉರಗಗಳ (Snakes) ಕಾಟ ತುಂಬಾನೆ ಜಾಸ್ತಿಯಾಗಿದೆ. ಹೀಗಾಗಿ ಆತುರದಲ್ಲಿ ಮನೆಯಿಂದ ಹೊರಡುವ ಗಡಿಬಿಡಿಯಲ್ಲಿ ನೀವೇನಾದರೂ ಶೂ ನೋಡದೇ ಕಾಲು ಒಳಹಾಕಿದ್ರೆ ಒಳಗೆ ಬಸ್ ನಾಗಪ್ಪ ಇರ್ತಾನೆ..ಹುಷಾರ್..!

ನಿಮ್ಮ ಕಥೆ ಗೋವಿಂದ.
ಹೌದು ಬೆಂಗಳೂರಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಮೂರೇ ದಿನದಲ್ಲಿ ಹಾವು ಕಡಿತದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.ಶೂ ಹಾಗೂ ಚಪ್ಪಲಿಗಳಲ್ಲಿ ಹಾವುಗಳು ಸೇರಿಕೊಳ್ಳುತ್ತಿರುವ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸರಿಯಾಗಿ ಗಮನಿಸದೇ ಶೂ ಧರಿಸಿದ ಇಬ್ಬರು ಹಾವಿಗೆ ಬಲಿಯಾಗಿದ್ದು ಈ ಪ್ರಕರಣಗಳು ಆತಂಕ ಹೆಚ್ಚು ಮಾಡಿದೆ.
ನಿನ್ನೆ (ಸೆ.2) ಬೆಂಗಳೂರಿನ ಮಾರತ್‌ಹಳ್ಳಿ ಬಳಿ ಶೂ ಪರೀಕ್ಷಿಸದೆ ಕಾಲು ಹಾಕಿದ ಓರ್ವ ವ್ಯಕ್ತಿ ತಮ್ಮ ಶೂನಲ್ಲಿ ಹಾವನ್ನು ಕಂಡು ಗಾಬರಿಯಾಗಿದ್ದಾರೆ. ಶೂ ಒಳಗೆ ಮಲಗಿದ್ದ ನಾಗರಹಾವು ಎತ್ತಿ ಬುಸುಗುಡುತ್ತಿತ್ತು. ಈ ಘಟನೆ ಕಂಡ ವ್ಯಕ್ತಿ ಬೆಚ್ಚಿಬಿದ್ದಿದ್ದಾರೆ. ಮಳೆಗಾಳದ ಕಾರಣ, ಹಾವುಗಳು ಬೆಚ್ಚಗಿನ ಜಾಗವನ್ನು ಹುಡುಕುತ್ತವೆ. ಹೀಗಾಗಿ ಶೂ, ಚಪ್ಪಲಿಗಳು ಅವುಗಳಿಗೆ ಬೆಚ್ಚಗಿರುವುದರಿಂದ ಹೀಗೆ ಬಂದು ಇವುಗಳಲ್ಲಿ ಸೇರಿಕೊಲ್ಲುತ್ತವೆ ಎಂದು ತಜ್ಞರು ಹೇಳಿದ್ದಾರೆ.