ಹಾವಿನೊಂದಿಗೆ ಪೋಸ್ ಕೊಡಲು ಹೋಗಿ ಜೀವ ಕಳೆದುಕೊಂಡ ಹಾವು ರಕ್ಷಕ!

ಮಧ್ಯಪ್ರದೇಶ : ನೀನೇ ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ… ನಿನ್ನ ಹದ್ದಾಗಿ ಕುಕ್ಕಿತಲ್ಲೋ… ಈ ಹಾಡನ್ನು ಒಂದಲ್ಲ ಒಂದು ಸಾಲ ಕೇಳಿಯೇ ಇರುತ್ತೀರಿ. ಇದೀಗ ಇಂತಹದ್ದೇ ವೊಂದು ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಗುನಾ ಜಿಲ್ಲೆಯ ಜೆಪಿ ಕಾಲೇಜುವೊಂದರಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಮಹಾವರ್ ಎಂಬುವವರಿಗೆ ಹಾವು ಹಿಡಿದು ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡುವುದು ಎಂದರೆ ಬಹಳ ಇಷ್ಟದ ಕೆಲಸ.. ಅದಷ್ಟೇ ಬ್ಯುಸಿಯಾಗಿ ಇರಲಿ ಹಾವು ಬಂದಿದೆ ಎಂದರೆ ಸಾಕು ಇರುವ ಕೆಲಸ ಬಿಟ್ಟು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಿಸಿ ಮನುಷ್ಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇದೀಗ ನಾಗರ ಹಾವನ್ನು ಹಿಡಿದು ಪೋಸ್ ಕೊಡಲೆಂದು ಕುತ್ತಿಗೆಗೆ ಹಾಕಿಕೊಂಡಿದ್ದಾಗ ಹಾವು ಕಾಡಿದು ದೀಪಕ್ ಮಹಾವರ್ ಸಾವನ್ನಪ್ಪಿದ್ದಾರೆ.
ದೀಪಕ್ ಅವರು ಈ ಹಿಂದೆ ನಾಗರ ಹಾವನ್ನು ರಕ್ಷಣೆ ಮಾಡಿ ಗಾಜಿನ ಪಾತ್ರೆಯೊಂದರಲ್ಲಿ ಇಟ್ಟಿದ್ದರು. ಮುಂಬರುವ ಶ್ರಾವಣ ಮಾಸದ ಮೆರವಣಿಗೆಯಲ್ಲಿ ಅದನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದ್ದರಿಂದ ಹಾವನ್ನು ಮನೆಯಲ್ಲೇ ಇಟ್ಟುಕೊಂಡು ಸಾಕುಟ್ಟಿದ್ದರು..
ಆದರೆ ಅದೇನು ಆಯಿತೋ ಗೊತ್ತಿಲ್ಲ.. ಎಂದಿನಂತೆ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ವಾಪಸ್ ಆಗುವಾಗ ನಾಗರ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಪೋಸ್ ಕೊಡಲು ಮುಂದಾಗಿದ್ದಾರೆ. ಈ ವೇಳೆ ಹಾವು ಕಚ್ಚಿದ್ದು, ಕೂಡಲೇ ಸ್ಥಳೀಯರು ಹಾವನ್ನು ಗಾಜಿನ ಬಾಕ್ಸ್ ಗೆ ಹಾಕಿ ದೀಪಕ್ ರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ವೇಳೆ ಆಸ್ಪತ್ರೆಯಲ್ಲಿ ದೀಪಕ್ ಮಹಾವರ್ ಅವರಿಗೆ ಆಂಟಿವೆನಮ್ ನೀಡಲಾಗಿದೆ. ಆದರೆ ಅಷ್ಟರಲ್ಲಿ ವಿಷವೆಲ್ಲ ದೇಹ ಪೂರ್ತಿ ಹರಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸದ್ಯ ದೀಪಕ್ ಅವರಿಗೆ ರೌನಕ್ (12) ಮತ್ತು ಚಿರಾಗ್ (14) ಎಂಬ ಇಬ್ಬರು ಗಂಡು ಮಕ್ಕಳಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಪತ್ನಿ ನಿಧನರಾಗಿದ್ದರು. ಇದೀಗ ತಂದೆ ಕೂಡ ಸಾವನ್ನಪ್ಪಿದ್ದು, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.