Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ಮಾರ್ಟ್‌ ಇಟಿಎಂ ಗಳು ಬರುತ್ತಿವೆ – ಬಿಎಂಟಿಸಿ ಬಸ್‌ನಲ್ಲಿ ಕ್ಯಾಶ್ ಇಲ್ಲದ ಪ್ರಯಾಣ ಸಾಧ್ಯ

Spread the love

ಬೆಂಗಳೂರು: ಎಲ್ಲವೂ ಅಂದುಕೊಂಡಂತಾದರೆ ಮುಂದಿನ 5 ತಿಂಗಳಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳು ಮಾತ್ರವಲ್ಲ; “ನಮ್ಮ ಮೆಟ್ರೋ’ ಕಾರ್ಡ್‌ಗಳನ್ನೂ ತೋರಿಸಿ “ನಮ್ಮ ಬಿಎಂಟಿಸಿ’ ಬಸ್‌ಗಳಲ್ಲಿ ಪ್ರಯಾಣಿಸಬಹುದು.
ನಗದು ರಹಿತ ಟಿಕೆಟ್‌ ವ್ಯವಸ್ಥೆ ಜಾರಿಯ ಭಾಗವಾಗಿ ಸುಮಾರು 10 ಸಾವಿರ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರ (ಇಟಿಎಂ) ಗಳನ್ನು ಅಳವಡಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಈ ಸಂಬಂಧ ಟೆಂಡರ್‌ ಆಹ್ವಾ ನಿಸಿದೆ.

ಹಲವು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ಮಂಗಳವಾರ (ಮೇ 13) ಟೆಂಡರ್‌ ಕೊನೆಗೊಳ್ಳಲಿದೆ. ಟೆಂಡರ್‌ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಟಿಎಂಗಳ ತಯಾರಿಕೆ ಮತ್ತು ಪೂರೈಕೆ ಪ್ರಕ್ರಿಯೆ ಶುರುವಾಗಲಿದೆ. ಬರುವ ಅಕ್ಟೋಬರ್‌-ನವೆಂಬರ್‌ ವೇಳೆಗೆ ಈ ಯಂತ್ರಗಳು ಬಸ್‌ ನಿರ್ವಾಹಕರ ಕೈಸೇರಲಿವೆ. ಈಗಾಗಲೇ ಈ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಜಾರಿಗೊಳಿಸಿದೆ.

ಬಿಎಂಟಿಸಿಯಲ್ಲಿ ಕೂಡ ಈಗಾ ಗಲೇ ಸ್ಟಾಟಿಕ್‌ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಟಿಕೆಟ್‌ ಪಾವತಿಸಿ ಪ್ರಯಾಣಿ ಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆ ಯಲ್ಲಿ ಯಾವುದೇ ಕೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳನ್ನು ಬಳಸಿ ಟಿಕೆಟ್‌ ನೀಡುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿ ಆಯಂಡ್ರಾಯ್ಡ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ನಂತಹ ಯುಪಿಐ ಡೈನಮಿಕ್‌ ಕ್ಯೂ ಆರ್‌ ಕೋಡ್‌ ವ್ಯವಸ್ಥೆ ಜತೆಗೆ ಮೆಟ್ರೋ ಕಾರ್ಡ್‌, ಡೆಬಿಟ್‌, ಕ್ರೆಡಿಟ್‌, ವೀಸಾ, ಕೇಂದ್ರ ಸರ್ಕಾರದ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಸೇರಿದಂತೆ ಎಲ್ಲ ಬಗೆಯ ಕಾರ್ಡ್‌ಗಳಿಂದ ಟಿಕೆಟ್‌ ಪಡೆಯಬಹುದು. ವಿಶೇಷ ವೆಂದರೆ ಟಿಕೆಟ್‌ ವೇಗವಾಗಿ ಮುದ್ರಣ ವಾಗುತ್ತದೆ. ಟಚ್‌ ಸ್ಕ್ರೀನ್‌ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್‌ ಇಟಿಎಂ ಹೊಂದಿರಲಿದ್ದು, ಡೈನಮಿಕ್‌ ಕ್ಯೂ ಆರ್‌ ಕೋಡ್‌ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್‌ ನೀಡುವುದಕ್ಕೆ ಅನುಕೂಲವಾಗಲಿದೆ. ಈ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಯಾರು ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗುವ ಕಂಪನಿ ಬಳಿ ಸ್ಮಾರ್ಟ್‌ ಇಟಿಎಂ ಯಂತ್ರವನ್ನು ಪಡೆಯಲಾಗುವುದು. ಬಾಡಿಗೆ ಆಧಾರದಲ್ಲಿ ಈ ಯಂತ್ರಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಸ್‌ ಭರ್ತಿಯಾದಾಗ ಎಲ್ಲರಿಗೂ ಟಿಕೆಟ್‌ ಹಾಗೂ ಚಿಲ್ಲರೆ ಕೊಡುವುದು ನಿರ್ವಾಹಕರಿಗೆ ಹೆಚ್ಚಿನ ಸಮಯ ಹಿಡಿಯುವುದಲ್ಲದೆ, ತ್ರಾಸದಾಯಕವಾಗಿದೆ. ಕೆಲವು ಬಾರಿ ಚಿಲ್ಲರೆ ವಿಷಯಕ್ಕೆ ಪ್ರಯಾಣಿಕರು ನಿರ್ವಾಹಕರೊಂದಿಗೆ ಜಗಳ ನಡೆದ ಘಟನೆಗಳೂ ಇವೆ. ಹಿಂದೆ ಇಟಿಎಂ ಪರಿಚಯಿಸುವ ಮೂಲಕ ಟಿಕೆಟ್‌ ನೀಡುವ ಪದ್ಧತಿಯನ್ನು ಕೊನೆಗೊಳಿಸಿತ್ತು. ಈಗ ಹಳೆಯ ಮಷಿನ್‌ಗಳ ಬದಲಾಗಿ ಆಧುನಿಕ ತಂತ್ರಜ್ಞಾನ ಇರುವ ಸುಧಾರಿತ ಮಷಿನ್‌ಗಳು ಜಾರಿಗೊಳಿಸಲು ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದ್ದು, ಅಕ್ಟೋಬರ್‌ ಅಥವಾ ನವೆಂಬರ್‌ ಒಳಗೆ ಸುಧಾರಿತ ಇಟಿಎಂ ಯಂತ್ರ ನಿರ್ವಾಹಕರ ಕೈ ಸೇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ “ಉದಯವಾಣಿ’ಗೆ ತಿಳಿಸಿದರು.

ಸ್ಮಾರ್ಟ್‌ ಇಟಿಎಂನಿಂದ ಟಿಕೆಟ್‌ ಬೇಗ ಮುದ್ರಣ: ನಗದು ರಹಿತ ಟಿಕೆಟ್‌ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ 10 ಸಾವಿರ ಸುಧಾರಿತ ಆಧುನಿಕ ತಂತ್ರಜ್ಞಾನ ಇರುವ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರ (ಇಟಿಎಂ) ಗಳನ್ನು ಬಿಎಂಟಿಸಿಯಲ್ಲಿ ಅನುಷ್ಠಾನಗೊಳಿಸಲು ಈಗಾಗಲೇ ಟೆಂಟರ್‌ ಕರೆಯಲಾಗಿದೆ. ಈ ಟೆಂಡರ್‌ನಲ್ಲಿ ಯಾರು ಕಡಿಮೆ ದರದಲ್ಲಿ ಯಂತ್ರ ನೀಡಲು ಮುಂದಾಗುತ್ತರೋ ಆ ಕಂಪನಿಯಿಂದ ಹಂತ ಹಂತವಾಗಿ ಇಟಿಎಂಗಳನ್ನು ಖರೀದಿಸಿ ಅಕ್ಟೋಬರ್‌ ಅಥವಾ ನವೆಂಬರ್‌ ಒಳಗೆ ನಿರ್ವಾಹಕರಿಗೆ ನೀಡುತ್ತೇವೆ. ಹಿಂದೆ ಟಿಕೆಟ್‌ ಮುದ್ರಣವಾಗಲು ತಡವಾಗುತ್ತಿತ್ತು. ಆದರೆ, ಈ ಹೊಸ ಸ್ಮಾರ್ಟ್‌ ಇಟಿಎಂ ಯಂತ್ರದಲ್ಲಿ ಟಿಕೆಟ್‌ ಬೇಗ ಮುದ್ರಣವಾಗುತ್ತದೆ. ಇದರಿಂದ ನಿರ್ವಾಹಕರಿಗೆ ಕಿರಿಕಿರಿ ಉಂಟಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *