Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀಟಾಗಿ ಹೇರ್ ಕಟ್ ಮಾಡಯ್ಯ ಹೇಳಿದ್ದಕ್ಕೆ ಪ್ರಾಂಶುಪಾಲರಿಗೆ ಇರಿದೇ ಬಿಟ್ಟ ಚೂ*ರಿ

Spread the love

ಹರಿಯಾಣ:ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರ ದಾಸರ ಪದಗಳಿವೆ. ಗುರು ವಿದ್ಯಾರ್ಥಿಯನ್ನು ತಿದ್ದಿ ತೀಡಿ ಉದ್ಧರಿಸುತ್ತಾನೆ. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯದನ್ನು ಬಯಸಲು ಹೇಳುವ ಯಾವುದೇ ಮಾತು ಸರಿಯಿರುತ್ತದೆ. ಆದರೆ, ಹಿಸಾರ್‌ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹೇರ್‌ ಕಟ್‌ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಸಿಟ್ಟಾಗಿ ಪ್ರಾಂಶುಪಾಲರನ್ನು ಕೊಂದ ಘಟನೆ ನಡೆದಿದೆ.
ಕೂದಲು ಕತ್ತರಿಸಿ ಎಂದಿದ್ದಕ್ಕೆ ಕೊಲೆ

ಹಿಸಾರ್‌ನ ಬಾಸ್ ಬಾದ್‌ಶಾಹ್‌ಪುರ ಗ್ರಾಮದ ಕರ್ತಾರ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಜಗಬೀರ್ ಸಿಂಗ್ (50) ಕೊಲೆಯಾದವರು. ಇಬ್ಬರು 12ನೇ ತರಗತಿ ವಿದ್ಯಾರ್ಥಿಗಳಿಗೆ ಹೇರ್‌ ಕಟ್‌ ಮಾಡಿಸಿ, ಮತ್ತು ಶಿಸ್ತು ಪಾಲಿಸಲು ಹೇಳಿದರು. ಆದರೆ, ಇದಕ್ಕೆ ಕೋಪಗೊಂಡ ಅವರು ಬೆಳಿಗ್ಗೆ 10.30ರ ಸುಮಾರಿಗೆ ಪ್ರಾಂಶುಪಾಲರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ಘಟನೆ ಗುರು ಪೂರ್ಣಿಮೆಯ ದಿನದಂದು ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ʻಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕೂದಲು ಕತ್ತರಿಸಿ, ಸರಿಯಾಗಿ ಬಟ್ಟೆ ಧರಿಸಲು ಮತ್ತು ಶಾಲೆಯ ನಿಯಮಗಳನ್ನು ಪಾಲಿಸಲು ಹೇಳಿದ್ದರು. ಜೊತೆಗೆ ಆ ಹುಡುಗರ ನಡವಳಿಕೆ ಸರಿಪಡಿಸಿಕೊಳ್ಳಲು ಮತ್ತು ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಕೋಪಗೊಂಡ 12ನೇ ತರಗತಿ ವಿದ್ಯಾರ್ಥಿಗಳು ಫೋಲ್ಡಿಂಗ್ ಚಾಕುವನ್ನು ತೆಗೆದು ಸಿಂಗ್ ಅವರಿಗೆ ಹಲವು ಬಾರಿ ಇರಿದಿದ್ದಾರೆ ಎಂದು ಹನ್ಸಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಯಶ್ವರ್ಧನ್ ಮಾಹಿತಿ ನೀಡಿದ್ದಾರೆ.

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವು
ಚಾಕುವಿನಿಂದ ಇರಿದ ಕಾರಣ ತೀವ್ರ ರಕ್ತಸ್ರಾವದಿಂದ ಪ್ರಾಂಶುಪಾಲರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಶಾಲೆಯ ಆವರಣದಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕರು ಪ್ರಾಂಶುಪಾಲರಿಗೆ ಚಾಕುವಿನಿಂದ ಇರಿದು ಓಡಿಹೋಗುವುದು ಕಂಡುಬಂದಿದೆ. ಅವರಲ್ಲಿ ಒಬ್ಬನು ಫೋಲ್ಡಿಂಗ್ ಚಾಕುವನ್ನು ಎಸೆಯುತ್ತಿರುವುದು ಸಹ ಕಾಣಿಸುತ್ತದೆ. ನಂತರ ಇತರ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಪ್ರಾಂಶುಪಾಲರನ್ನು ಆಸ್ಪತ್ರೆಗೆ ಸಾಗಿಸಲು ಕಾರಿನಲ್ಲಿ ಕರೆದೊಯ್ಯುವುದು ಕಾಲೇಜಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡುಬರುತ್ತದೆ.

ಪ್ರಾಂಶುಪಾಲರನ್ನು ಇರಿದ ಇಬ್ಬರೂ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಸಿನವರು. ಹೀಗಾಗಿ ಅವರನ್ನಿನ್ನೂ ವಶಕ್ಕೆ ತೆಗೆದುಕೊಳ್ಳಲಾಗಿಲ್ಲಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಜೊತೆಗೆ ಕಾಲೇಜಿನಲ್ಲಿ ಕೊಲೆ ಕಂಡ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಕೊಲೆಗೆ ನಿಖರವಾದ ಕಾರಣಗಳು ಮರಣೋತ್ತರ ಪರೀಕ್ಷೆ ಮತ್ತು ವಿವರವಾದ ತನಿಖೆಯ ನಂತರವೇ ತಿಳಿಯುತ್ತದೆ ಎಂದು ಯಶ್ವರ್ಧನ್ ಮಾಹಿತಿ ನೀಡಿದರು.

ಗುರು ಪೂರ್ಣಿಮೆಯ ದಿನದಂದು ಈ ಘಟನೆ ನಡೆದಿದೆ. ಗುರು ಪೂರ್ಣಿಮೆಯು ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಇಂತಹ ಪವಿತ್ರ ದಿನದಂದು ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು,ವಿದ್ಯಾರ್ಥಿಗಳ ಹಿನ್ನೆಲೆ, ಅವರ ಕುಟುಂಬದ ಪರಿಸ್ಥಿತಿ ಮತ್ತು ಶಾಲೆಯಲ್ಲಿ ಅವರ ನಡವಳಿಕೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *