Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಂದೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಆರು ನರ್ಸ್‌ಗಳಿಗೆ ಬ್ರೈನ್ ಟ್ಯೂಮರ್

Spread the love

ಮ್ಯಾಸಚೂಸೆಟ್ಸ್​: ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್​ಗಳಿಗೆ ಬ್ರೈನ್​ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್​ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿತು ಮತ್ತು ಪ್ರಕರಣಗಳ ಹಿಂದೆ ಯಾವುದೇ ಆ ಫ್ಲೋರ್​ನಲ್ಲಿ ಯಾವುದೇ ರೀತಿಯ ಅಪಾಯವಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿತ್ತು. ಈ ಎಲ್ಲಾ ನರ್ಸ್​ಗಳು ಆಸ್ಪತ್ರೆಯ ಐದನೇ ಮಹಡಿಯ ಹೆರಿಗೆ ವಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ನರ್ಸ್​ಗಳ ಮೆದುಳಿನಲ್ಲಿ ಸಣ್ಣ ಪ್ರಮಾದ ಗಡ್ಡೆಗಳು ಕಾಣಿಸಿಕೊಂಡಿವೆ. ಐದನೇ ಮಹಡಿಯಲ್ಲಿ ವಿವಿಧ ಅವಧಿಗಳಿಗೆ ಕೆಲಸ ಮಾಡಿದ ಆರು ಸಿಬ್ಬಂದಿಯನ್ನು ಒಎಚ್​ಎಸ್ ಗುರುತಿಸಿದೆ ಮತ್ತು ಅವರಿಗೆ ಹಾನಿಕರವಲ್ಲದ (ಕ್ಯಾನ್ಸರ್ ಅಲ್ಲದ) ಮೆದುಳಿನ ಗಡ್ಡೆಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *