ಸಮಾಜದಲ್ಲಿ ಮರ್ಯಾದೆಗಾಗಿ ತಮ್ಮನನ್ನೇ ಹ*ತ್ಯೆಗೈದ ಸಹೋದರಿ

ಚಿತ್ರದುರ್ಗ:ಮಾನಕ್ಕೆ ಅಂಜಿ ಕುಟುಂಬದ ಸದಸ್ಯರೇ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಚಿತ್ರದುರ್ಗದಲ್ಲಿ (Chitradurga crime) ಕೇಳಿಬಂದಿದೆ. ಇಲ್ಲಿನ ಹೊಳಲ್ಕೆರೆ (Holalkere) ಪೊಲೀಸ್ (police) ಠಾಣಾ ವ್ಯಾಪ್ತಿಯಲ್ಲಿ ಹೀಗೆ ಮರ್ಯಾದೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಹೌದು ಮಲ್ಲಿಕಾರ್ಜುನ ಎಂಬ ವ್ಯಕ್ತಿಯನ್ನು ಸ್ವತಃ ಆತನ ಸಹೋದರಿ (Sister) ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಚಿತ್ರದುರ್ಗದ ದುಮ್ಮಿ ಗ್ರಾಮದ 23 ವರ್ಷದ ಮಲ್ಲಿಕಾರ್ಜುನ ಎಂಬ ಯುವಕ ವಿಚಿತ್ರವಾದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಕಾರಣಕ್ಕೆ, ಮರ್ಯಾದೆಗೆ ಅಂಜಿದ ಆತನ ಸಹೋದರಿ, ತನ್ನ ಒಡ ಹುಟ್ಟಿದ ತಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೌದು ಆರೋಗ್ಯ ತಪಾಸಣೆ ವೇಳೆ ದುಮ್ಮಿ ಗ್ರಾಮದ ಮಲ್ಲಿಕಾರ್ಜುನನಿಗೆ ಮಾರಣಾಂತಿಕ ಖಾಯಿಲೆ ಪತ್ತೆಯಾಗಿದೆ. ಈ ವಿಷಯ ತಿಳಿದು ಮರ್ಯಾದೆಗೆ ಅಂಜಿದ ಅಕ್ಕ ಪ್ಲಾನ್ ಮಾಡಿ ತಮ್ಮನನ್ನು ಕೊಂದಿದ್ದಾಳೆ ಎನ್ನಲಾಗಿದೆ.
ಹೀಗೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಮಲ್ಲುಕಾರ್ಜುನನ್ನನು ಹೆಚ್ಚಿನ ಚಿಕಿತ್ಸೆಗೆ ಅಂತ ಆಂಬ್ಯುಲೆನ್ಸ್ ನಲ್ಲಿ ಕರೆತರುವ ನೆಪದಲ್ಲಿ ಆತನ ಕತ್ತು ಹಿಸುಕಿ ಉಸಿರುಗಟ್ಟಿಸಿ ಆತನ ಸಹೋದರಿ ಮತ್ತು ಆಕೆಯ ಗಂಡ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಈ ಬಗ್ಗೆ ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.
ಜುಲೈ 23ರಂದು ಚಿತ್ರದುರ್ಗದ ಹಿರಿಯೂರಿನ ಐಮಂಗಲದ ಬಳಿ 23 ವರ್ಷದ ಮಲ್ಲಿಕಾರ್ಜುನನಿಗೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಕಾಲಿಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇದಕ್ಕಾಗಿ ತಪಾಸಣೆಗೆ ಒಳಪಡಿಸಿದಾಗ ಮಲ್ಲಿಕಾರ್ಜುನನಿಗೆ ಮಾರಣಾಂತಿಕ ಕಾಯಿಲೆ ಇರುವುದು ವೈದ್ಯರಿಗೆ ತಿಳಿದಿದೆ. ಹೀಗಾಗಿ ಈ ವಿಚಾರದ ಕುರಿತು ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದರು.ಆದ್ರೆ ತನ್ನ ತಮ್ಮನಿಗೆ ಮಾರಣಾಂತಿಕ ಖಾಯಿಲೆ ಇರುವುದನ್ನು ಸಹಿಸದ ಅಕ್ಕ, ಇನ್ನೆಲ್ಲಿ ಈ ವಿಚಾರದಿಂದ ತಮ್ಮ ಮನೆಯ ಮರ್ಯಾದೆ ಬೀದಿ ಪಾಲಾಗಲಿದ್ಯೋ ಎಂದು ಯೋಚಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ಕ-ಭಾವ ಸೇರಿ ಮಲ್ಲಿಕಾರ್ಜುನನಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆ ಬಳಿಕ ಮಲ್ಲಿಕಾರ್ಜುನ ಚಿಕಿತ್ಸೆಗೂ ಮುನ್ನವೇ ಮೃತಪಟ್ಟಿದ್ದಾನೆ ಎಂಬಂತೆ ಆತನ ಮೃತದೇಹವನ್ನು ಚಿತ್ರದುರ್ಗದ ದುಮ್ಮಿ ಗ್ರಾಮಕ್ಕೆ ತಂದಿದ್ದಾರೆ. ಆದ್ರೆ ಮೃತದೇಹದ ಕುತ್ತಿಗೆಯಲ್ಲಿ ಗಾಯ ಆಗಿರುವುದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡಿದ್ದು ಈ ಬಗ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೊನೆಗೆ ಮಲ್ಲಿಕಾರ್ಜುನನ್ನ ತಂದೆಯೇ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಬೆನ್ನಲ್ಲೇ ಅಸಲಿ ಸತ್ಯ ಗೊತ್ತಾಗಿದೆ.
