ಡಿಜಿಟಲ್ ಕೆವೈಸಿ ಪ್ರಕ್ರಿಯೆ ಸರಳಗೊಳಿಸಿ: ಅಂಗವಿಕಲರ ಹಕ್ಕು ಕಾಯ್ದುಕೊಳ್ಳಲು ಸುಪ್ರೀಂ ನಿರ್ದೇಶನ

ನವದೆಹಲಿ:ಡಿಜಿಟಲ್ ಸೌಲಭ್ಯಗಳ ಲಭ್ಯತೆಯೂ ಮೂಲಭೂತ ಹಕ್ಕು ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಅಂಗವಿಕಲರು, ಅಂಧರು, ಆಯಸಿಡ್ ದಾಳಿಯ ಸಂತ್ರಸ್ತರಿಗೆ ಡಿಜಿಟಲ್ ಕೆವೈಸಿ ಸರಾಗವಾಗು ವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಇದಕ್ಕಾಗಿ ಡಿಜಿಟಲ್ ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ತರುವಂತೆಯೂ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಅಂಗವಿಕಲರು ಮತ್ತು ದೃಷ್ಟಿ ನ್ಯೂನತೆ ಇರುವವರಿಗೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಾಗೂ ಬ್ಯಾಂಕ್ ಖಾತೆ ತೆರೆಯಲು, ಕ್ಷೇಮಾಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಕೆವೈಸಿಯಂತಹ ಡಿಜಿಟಲ್ ಪ್ರಕ್ರಿಯೆ ಸರಳವಾಗಬೇಕು. ಡಿಜಿಟಲ್ ಸೌಲಭ್ಯ ಲಭ್ಯತೆಯ ಹಕ್ಕು ಎನ್ನುವುದು ಸಂವಿಧಾನದ 21ನೇ ವಿಧಿಯಡಿ ಬರುವ ಜೀವಿಸುವ ಹಕ್ಕು ಎಂದಿದೆ.
