Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇಬಲ್ ಟಿವಿ ಉದ್ಯಮದಲ್ಲಿ ಗಣನೀಯ ಕುಸಿತ, 5.57 ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟ

Spread the love

ಮುಂಬೈ: ಭಾರತದಲ್ಲಿ ಕೇಬಲ್ ಟಿವಿ ಉದ್ಯಮ ಕಳೆದ ಏಳೆಂದು ವರ್ಷಗಳಿಂದ ಗಣನೀಯವಾಗಿ ಇಳಿಕೆ ಆಗುತ್ತಿರುವುದು ಕಂಡು ಬಂದಿದೆ. 2018ರಿಂದ 2024ರವರೆಗೂ ಡಿಟಿಎಚ್, ಕೇಬಲ್ ಸಬ್​​ಸ್ಕ್ರೈಬರ್​​ಗಳ ಸಂಖ್ಯೆ ಬರೋಬ್ಬರಿ 4 ಕೋಟಿಯಷ್ಟು ಕಡಿಮೆ ಆಗಿದೆ. ಈ ಉದ್ಯಮದ ಆದಾಯವೂ ಗಣನೀಯವಾಗಿ ತಗ್ಗಿದೆ. ಇದರ ಪರಿಣಾಮವಾಗಿ ಈ ಏಳು ವರ್ಷದಲ್ಲಿ ಒಟ್ಟಾರೆ 5,57,000 ಉದ್ಯೋಗನಷ್ಟವಾಗಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟ (ಎಐಡಿಸಿಎಫ್) ಮತ್ತು ಇವೈ ಇಂಡಿಯಾ ಜಂಟಿಯಾಗಿ ಸಿದ್ಧಪಡಿಸಿರುವ ‘ಭಾರತದಲ್ಲಿ ಕೇಬಲ್ ಟಿವಿ ವಿತರಣೆಯ ಸ್ಥಿತಿ’ ಎನ್ನುವ ಈ ವರದಿ ಪ್ರಕಾರ, 2018ರಲ್ಲಿ ಪೇ ಟಿವಿ (ಡಿಶ್, ಕೇಬಲ್ ಇತ್ಯಾದಿ) ಚಂದಾದಾರರ ಸಂಖ್ಯೆ 151 ಮಿಲಿಯನ್ (15.1 ಕೋಟಿ) ಇತ್ತು. 2024ರಲ್ಲಿ ಅದು 111 ಮಿಲಿಯನ್​ಗೆ ಇಳಿದಿದೆ. 2030ರಲ್ಲಿ ಈ ಸಂಖ್ಯೆ 71-81 ಮಿಲಿಯನ್​​ಗೆ ಇಳಿಯಬಹುದು.

ಕೇಬಲ್ ಟಿವಿ ಉದ್ಯಮದ ಆದಾಯವೂ ಕುಸಿತ

ನಾಲ್ಕು ಡಿಟಿಎಚ್​ಗಳು ಮತ್ತು ಹತ್ತು ಪ್ರಮುಖ ಕೇಬಲ್ ಟಿವಿ ಕಂಪನಿಗಳ ಒಟ್ಟಾರೆ ಆದಾಯವು 2018ರಿಂದ ಈಚೆಗೆ ಶೇ. 16ರಷ್ಟು ಕಡಿಮೆ ಆಗಿದೆ. ಲಾಭ ಕೂಡ ಶೇ. 29ರಷ್ಟು ಕಡಿಮೆ ಆಗಿದೆ. 2018-19ರಲ್ಲಿ ಈ ಉದ್ಯಮದ ಒಟ್ಟಾರೆ ಆದಾಯವು 25,700 ಕೋಟಿ ರೂ ಇತ್ತು. 2023-24ರಲ್ಲಿ ಅದು 21,500 ಕೋಟಿ ರೂಗೆ ಇಳಿದಿದೆ.

ಕೇಬಲ್ ಟಿವಿ ಉದ್ಯಮ ಕುಸಿಯಲು ಕಾರಣಗಳೇನು?

  • ಚಾನಲ್ ಸಬ್​​ಸ್ಕ್ರಿಪ್ಷನ್ ವೆಚ್ಚ ಹೆಚ್ಚುತ್ತಿರುವುದು
  • ಒಟಿಟಿ ಪ್ಲಾಟ್​​ಫಾರ್ಮ್​​ಗಳಿಂದ ಸ್ಪರ್ಧೆ ಹೆಚ್ಚಳಗೊಂಡಿರುವುದು
  • ಡಿಡಿ ಫ್ರೀ ಡಿಶ್ ಇತ್ಯಾದಿ ಉಚಿತವಾಗಿ ಡಿಶ್ ಸರ್ವಿಸ್ ನೀಡುತ್ತಿರುವುದು.

5.57 ಲಕ್ಷ ಉದ್ಯೋಗ ನಷ್ಟ

ದೇಶಾದ್ಯಂತ 28,181 ಲೋಕಲ್ ಕೇಬಲ್ ಆಪರೇಟರುಗಳನ್ನು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಕೇಬಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಶೇ. 31ರಷ್ಟು ಉದ್ಯೋಗನಷ್ಟ ಆಗಿದೆ. 2018ರಿಂದ ಈಚೆಗೆ 900 ಎಂಎಸ್​​ಒ (ಮಲ್ಟಿ ಸಿಸ್ಟಂ ಆಪರೇಟರ್ಸ್) ಮತ್ತು 72,000 ಲೋಕಲ್ ಕೇಬಲ್ ಆಪರೇಟರ್​​ಗಳು ಬಂದ್ ಆಗಿವೆ. ಇವೆಲ್ಲವುಗಳಿಂದ ಆಗಿರುವ ಉದ್ಯೋಗನಷ್ಟ ಸುಮಾರು 5,77,000 ಎಂದು ಅಂದಾಜಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *