Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಹೋದರ-ಸಹೋದರಿಯ ಆತ್ಮಹತ್ಯೆ ಪ್ರಕರಣದಲ್ಲಿ ಪ್ರೇಮ ಕಥೆ ಸಂಶಯದ ನಡುವೆ ಕುಟುಂಬದ ನಿರಾಕರಣೆ

Spread the love

ಲಖನೌ: 20 ವರ್ಷದ ಸಹೋದರ ಸಂಬಂಧಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಯೊಳಗೆ 18 ವರ್ಷದ ಹುಡುಗಿಯೊಬ್ಬಳು ಸಾವಿಗೆ ಶರಣಾಗಿದ ಘಟನೆ (Self Harming) ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಸ್ಥಳೀಯರು ಈ ಸಹೋದರ-ಸಹೋದರಿಯ ಸಾವಿನ ಹಿಂದೆ ಪ್ರೇಮ ಕಹಾನಿ ಇತ್ತು ಎಂದು ಅಭಿಪ್ರಾಯಪಟ್ಟಿದ್ದರು.

ಅದಾಗ್ಯೂ ಕುಟುಂಬಸ್ಥರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಸೂಕ್ಷ್ಮ ಮನಸ್ಸಿನ ಹುಡುಗಿ ಸಹೋದರ ಸಾವಿನ ಆಘಾತದಿಂದ ಆತ್ಮಗತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನರ್ವಾಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ದೀಪಾಪುರದಲ್ಲಿ ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಸತ್ಯಜಿತ್‌ ಗುಪ್ತಾ ಮತ್ತು ಎಸಿಡಿಸಿಪಿ ತನಿಖೆ ಕೈಗೆತ್ತಿಕೊಂಡಿದ್ದಾರೆ. 20 ವರ್ಷದ ಯುವಕ ಮತ್ತು ಆತನ 18 ವರ್ಷದ ಸೋದರ ಸಂಬಂಧಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹರಡಿದಾಗ, ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು ಎನ್ನುವ ವದಂತಿ ಹರಡಿದ್ದವು. ಹುಡುಗಿ ಇಂಟರ್ಮೀಡಿಯೇಟ್ ವಿದ್ಯಾರ್ಥಿನಿಯಾಗಿದ್ದಳು. ಅಲ್ಲೇ ಹತ್ತಿರದಲ್ಲಿ ವಾಸಿಸುತ್ತಿದ್ದ ಯುವಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.

ಪೋಲಿಸರ ಮಾಹಿತಿಯ ಪ್ರಕಾರ ಆ ಯುವಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲವು ಗಂಟೆಗಳ ನಂತರ ಸಾವಿನ ಸುದ್ದಿ ತಿಳಿದ ಆತನ ಸಹೋದರ ಸಂಬಂಧಿಯಾದ ಈ ಯುವತಿ ಕೂಡ ಕೂಡ ನೇಣು ಬಿಗಿದುಕೊಂಡನು ಸಾವೀಗೀಡಾಗಿದ್ದಾಳೆ. ಹುಡುಗಿಯ ಪೋಷಕರು ತಮ್ಮ ಮಗಳು ತುಂಬಾ ಭಾವನಾತ್ಮಕ ಜೀವಿ ಮತ್ತು ಅಮಾಯಕಿ ಎಂದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎಡಿಸಿಪಿ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದು, ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು

ಇದೇ ರೀತಿಯ ಘಟನೆ ಈ ಹಿಂದೆ ಕೂಡ ನಡೆದಿತ್ತು. ದಿಲ್ಲಿಯ ಗಾಜಿಪುರದ ಸಮೀಪ ಜನವರಿಯಲ್ಲಿ ಸೂಟ್‌ಕೇಸ್‌ನಲ್ಲಿ ಸುಟ್ಟ ಶವ ಎಸೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೋಲಿಸರು ಅಮಿತ್‌ ಕುಮಾರ್‌ ಎನ್ನುವ 22 ವರ್ಷದ ಯುವಕನೊಬ್ಬನ್ನು ವಶಕ್ಕೆ ತೆಗೆದುಕೊಂಡಿದ್ದರು. ಆಗ ಅಮಿತ್‌ ಕುಮಾರ್‌ ತನ್ನ ಸಹೋದರಿ ಶಿಲ್ಪಾ ಪಾಂಡೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದ.

ಶಿಲ್ಪಾ ಜತೆ ತನಗೆ ಸಂಬಂದವಿತ್ತು. ಆಕೆಯೊಂದಿಗೆ ಮದುವೆಯಾಗಬೇಕೆಂಬ ಬಯಕೆ ಇತ್ತು.‌ ಆದರೆ ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾಗಿ ಅಮಿತ್‌ ಹೇಳಿದ್ದ. ಒಂದು ದಿನ ರಾತ್ರಿ ಕುಡಿದ ಅಮಲಿನಲ್ಲಿ ಅಮಿತ್‌ ಶಿಲ್ಪಾ ಜೊತೆ ವಾಗ್ವಾದಕ್ಕಿಳಿದಿದ್ದ. ನಂತರ ಸಿಟ್ಟಿಗೆದ್ದು ಆಕೆಯನ್ನು ಕತ್ತು ಹಿಸುಕಿದ್ದ. ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದಳು ಎನ್ನಲಾಗಿದೆ.

ಮತ್ತೊಂದು ಪ್ರಕರದಲ್ಲಿ ಸಹೋದರನ ಜತೆಗೆ ಇದ್ದ ಪ್ರೇಮದ ನಂಟಿಗಾಗಿ ಮದುವೆಯಾದ ನಾಲ್ಕೇ ದಿನಗಳಲ್ಲಿ ತನ್ನ ಪತಿಯನ್ನೇ ನವವಿವಾಹಿತೆಯೊಬ್ಬಳು ಕೊಲೆ ಮಾಡಿರುವ ಘಟನೆ ನಡೆದಿತ್ತು. ವಿಚಾರಣೆ ವೇಳೆ ಆಕೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಳು. ʼʼಸಹೋದರ ಸಂಬಂಧಿಯೊಬ್ಬನ್ನು ಪ್ರೀತಿಸುತ್ತಿದ್ದೆ. ಆದರೆ ಪೋಷಕರು ಬೇರೆ ಹುಡುಗನ ಜತೆ ನನ್ನ ಮದುವೆ ಮಾಡಿದ್ದರು. ಹಾಗಾಗಿ ಈ ಕೃತ್ಯ ಎಸಗಿದ್ದೇನೆʼʼ ಎಂದು ತಪ್ಪೊಪ್ಪಿಕೊಂಡಿದ್ದಳು.


Spread the love
Share:

administrator

Leave a Reply

Your email address will not be published. Required fields are marked *