Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶುಭ್‌ಮನ್ ಗಿಲ್ ಬರ್ಮಿಂಗ್ಹ್ಯಾಮ್ ಟೆಸ್ಟ್‌ನಲ್ಲಿ ಹೊಸ ವಿವಾದ ಸೃಷ್ಟಿ

Spread the love

ಬೆಂಗಳೂರು :ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಶುಭ್​ಮನ್ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಸೇರಿ 430 ರನ್ ಗಳಿಸಿದರು. ಆದರೆ ಆ 430 ರನ್ ಗಳಿಸಿದ ನಂತರ, ಬರ್ಮಿಂಗ್ಹ್ಯಾಮ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ತಪ್ಪಿತಸ್ಥರೆಂದು ಹೇಳಲಾಗುತ್ತಿದೆ. ಹಾಗಾದರೆ ಶುಭ್​ಮನ್ ಗಿಲ್ ನಿಜಕ್ಕೂ ನಿಯಮಗಳನ್ನು ಮುರಿದಿದ್ದಾರೆಯೇ? ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆಯೇ?.

ಕಿಟ್ ಪ್ರಾಯೋಜಕರು ADDIDAS ಆಗಿದ್ದಾಗ ಗಿಲ್ ನೈಕ್ ಧರಿಸಿದ್ದೇಕೆ?

ವಾಸ್ತವವಾಗಿ, ಶುಭ್‌ಮನ್ ಗಿಲ್ ಬಗ್ಗೆ ಕೇಳಿಬರುತ್ತಿರುವ ನಿಯಮ ಉಲ್ಲಂಘನೆ ಕಿಟ್‌ಗೆ ಸಂಬಂಧಿಸಿದೆ. ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಅಡಿಡಾಸ್. ಆದರೆ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್​ ಅನ್ನು ಡಿಕ್ಲೇರ್ ಘೋಷಿಸುವ ಸಮಯದಲ್ಲಿ ಗಿಲ್ ಧರಿಸಿದ್ದ ಕಿಟ್ ನೈಕ್‌ನದ್ದಾಗಿತ್ತು. ಇದರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಗಿಲ್ ಅಡಿಡಾಸ್ ಬದಲಿಗೆ ನೈಕ್‌ನ ಕಿಟ್ ಧರಿಸುವುದು ಸರಿಯೇ ಎಂಬ ಪ್ರಶ್ನೆಗಳು ಎದ್ದಿವೆ.

ಗಿಲ್ ಮಾಡಿರುವುದು ತಪ್ಪೇ?

ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಅಡಿಡಾಸ್ ಆಗಿದ್ದರೆ, ಶುಭ್‌ಮನ್ ಗಿಲ್ ನೈಕ್ ಧರಿಸಿದ್ದೇಕೆ? ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಬ್ಬರೂ ಇದರ ಬಗ್ಗೆ ತಮ್ಮದೇ ಆದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದಾಗ್ಯೂ, ಮಾಧ್ಯಮ ವರದಿಗಳ ಪ್ರಕಾರ, ಶುಭ್​ಮನ್ ಗಿಲ್ NIKE ನ ಬ್ರಾಂಡ್ ರಾಯಭಾರಿಯಾಗಿರುವುದರಿಂದ, ಅವರು ಅದರ ಕಿಟ್ ಧರಿಸುವುದರಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ ಎಂದು ಹೇಳಲಾಗಿದೆ. ಯಾವುದೇ ಆಟಗಾರನು ಈರೀತಿ ಮಾಡಿದರೆ, ಅದರಿಂದ ಯಾವುದೇ ವಿವಾದ ಆಗುವುದಿಲ್ಲ.

ಬರ್ಮಿಂಗ್ಹ್ಯಾಮ್ ಟೆಸ್ಟ್‌ನಲ್ಲಿ 430 ರನ್ ಗಳಿಸಿದ ಗಿಲ್

ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್‌ಗಳಿಗೆ 427 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಈ ಮೂಲಕ ಇಂಗ್ಲೆಂಡ್ ಮುಂದೆ 608 ರನ್‌ಗಳ ಬೆಟ್ಟದಷ್ಟು ಗುರಿಯನ್ನು ನಿಗದಿಪಡಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ 1000 ರನ್‌ಗಳ ಗಡಿಯನ್ನು ದಾಟಿದೆ, ಇದರಲ್ಲಿ ಶುಭ್​ಮನ್ ಗಿಲ್ ಅವರ ಬ್ಯಾಟ್‌ನಿಂದ 430 ರನ್‌ಗಳು ದೊಡ್ಡ ಪಾತ್ರ ವಹಿಸಿವೆ. ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ 269 ರನ್ ಗಳಿಸಿದರು ಮತ್ತು ಭಾರತದ ಸ್ಕೋರ್ 587ಕ್ಕೆ ಕೊಂಡೊಯ್ಯಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ 161 ರನ್ ಗಳಿಸಿದರು.

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶುಭ್​ಮನ್ ಗಿಲ್ ಒಟ್ಟು 430 ರನ್ ಗಳಿಸಿದರು. ಜೊತೆಗೆ ಅವರ ಬ್ಯಾಟ್‌ನಿಂದ 11 ಸಿಕ್ಸರ್‌ಗಳು ಬಂದವು. ಇದರೊಂದಿಗೆ, ಶುಭ್​ಮನ್ ಗಿಲ್ ಈಗ ಭಾರತೀಯ ನಾಯಕನಾಗಿ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ 2009 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಒಟ್ಟು 6 ಸಿಕ್ಸರ್‌ಗಳನ್ನು ಬಾರಿಸಿದ ಎಂಎಸ್ ಧೋನಿ ಹೆಸರಿನಲ್ಲಿತ್ತು


Spread the love
Share:

administrator

Leave a Reply

Your email address will not be published. Required fields are marked *