ಬೆದ್ರಾಳದಲ್ಲಿ ಅಂಗಡಿಗೆ ಬೆಂಕಿ – ಶಾರ್ಟ್ ಸರ್ಕ್ಯೂಟ್ ಶಂಕೆ, ಅಪಾರ ನಷ್ಟ

ಪುತ್ತೂರು: ವಾಣಿಜ್ಯ ಸಂಕೀರ್ಣವೊಂದರ ಪ್ರಥಮ ಮಹಡಿಯಲ್ಲಿರುವ ಸರ್ವಿಸ್ ವಿಭಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ದರ್ಬೆ ವೃತ್ತದ ಬಳಿ ಸಂಭವಿಸಿದೆ.
ಬೆದ್ರಾಳ ನಿವಾಸಿ ಕೇಶವ ಎಂಬವರ ಮಾಲಕತ್ವದ ಅಂಗಡಿಯಲ್ಲಿ ಜೂನ್ 17ರಂದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗಮನಿಸಿದ ಸಿಬ್ಬಂದಿ ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತತ್ಕ್ಷಣವೇ ಸ್ಥಳಕ್ಕೆ ಧಾವಿಸಿದ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಅಪಾರ ನಷ್ಟ ಸಂಭವಿಸಿದೆ.