ಶಾಕಿಂಗ್! ತಾಜಾ ಮಾವಿನ ಹಣ್ಣಿನೊಳಗೆ ಹುಳುಗಳು: ಖರೀದಿಸುವ ಮುನ್ನ ಎಚ್ಚರ!

ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ ಎಲ್ಲರೂ ಈ ಸಿಹಿಯಾದ ಹಣ್ಣನ್ನು ಸವಿಯಲು ಇಷ್ಟಪಡುತ್ತಾರೆ. ಮಾವಿನ ಹಣ್ಣುಗಳು ಪೌಷ್ಟಿಕಾಂಶದ ಮೌಲ್ಯದಲ್ಲಿಯೂ ಸಮೃದ್ಧವಾಗಿವೆ.

ಆದರೆ, ಮಾವಿನ ಹಣ್ಣನ್ನು ಖರೀದಿಸುವಾಗ ತುಂಬಾ ಎಚ್ಚರಿಕೆಯಿಂದ ಖರೀದಿ ಮಾಡಬೇಕು. ಏಕೆಂದರೆ, ಅದರಲ್ಲಿ ಹುಳಗಳಿರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ, ಉತ್ತಮ ಮಾವಿನ ಹಣ್ಣನ್ನು ಆಯ್ಕೆ ಮಾಡುವುದಾದರೂ ಹೇಗೆ ಅನ್ನೋ ಗೊಂದಲ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ 32 ವರ್ಷದ ರಾಧಿಕಾ ದೇವಿ ಎಲ್ಲರಂತೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿ ಮನೆಗೆ ತಂದರು. ನೋಡಲು ಮಾವಿನ ಹಣ್ಣುಗಳು ತುಂಬಾ ತಾಜಾವಾಗಿ ಕಾಣುತ್ತಿದ್ದರಿಂದ ಅದನ್ನು ಖರೀದಿಸಿದರು. ಹಣ್ಣು ನೋಡುತ್ತಿದ್ದಂತೆ ರಾಧಿಕಾ ಅವರ ಪತಿ ಸಂತೋಷ್ ಯಾದವ್ ಬಾಯಲ್ಲಿ ನೀರೂರಿತು. ತಕ್ಷಣ ಒಂದು ಮಾವಿನ ಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತಿನ್ನಲು ಪ್ರಾರಂಭಿಸಿದರು.
ತುಂಬಾ ರುಚಿಯಾಗಿದ್ದ ಹಣ್ಣನ್ನು ಸಂತೋಷ್ ಸವಿಯುತ್ತಿದ್ದರು. ಸುಮಾರು ಅರ್ಧ ಹಣ್ಣನ್ನು ತಿಂದಿದ್ದರು. ಈ ವೇಳೆ ಹಣ್ಣಿನ ರುಚಿಯಲ್ಲಿ ಕೊಂಚ ವ್ಯತ್ಯಾಸವನ್ನು ಗಮನಿಸಿದರು. ಏಕೆ ಈ ರೀತಿ ಆಯಿತು ಅಂತ ಮಾವಿನ ಹಣ್ಣನ್ನು ತುಂಬಾ ಹತ್ತಿರದಿಂದ ನೋಡಿದಾಗ, ಹಣ್ಣಿನೊಳಗೆ ಬಿಳಿ ಹುಳುಗಳು ತೆವಳುತ್ತಿರುವುದನ್ನು ನೋಡಿ ಒಂದು ಕ್ಷಣ ಶಾಕ್ ಆದರು.
ಇಷ್ಟು ತಾಜಾ ಮಾವಿನ ಹಣ್ಣಿನೊಳಗೆ ಹುಳುಗಳು ಇರುತ್ತವೆ ಎಂದು ದಂಪತಿ ಕನಸಿನಲ್ಲೂ ಯೋಚಿಸಿರಲಿಲ್ಲ. ಹುಳ ನೋಡುತ್ತಿದ್ದಂತೆ ಸಂತೋಷ್ ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ತಕ್ಷಣ ಮಾವಿನ ಹಣ್ಣನ್ನು ಉಗುಳಿದರು. ಬಳಿಕ ರಾಧಿಕಾ ಅವರು ಮಾವಿನ ಹಣ್ಣಿನ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ನೋಡಿದಾಗ ಮಾವು ತುಂಬಾ ತಾಜಾವಾಗಿ ಕಾಣುತ್ತಿತ್ತು. ಒಳಗೆ ಹೀಗಿರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ತುಂಬಾ ಭಯಾನಕವಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಜನರು ಈ ವೀಕ್ಷಿಸಿದ್ದಾರೆ. ಹಣ್ಣನ್ನು ತಿನ್ನುವ ಮೊದಲು ಎಚ್ಚರಿಕೆಯಿಂದ ಪರಿಶೀಲಿಸಬೇಕೆಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಉತ್ತಮ ಹಣ್ಣನ್ನು ಖರೀದಿಸುವುದು ಹೇಗೆ ಎಂಬ ಗೊಂದಲ ಮೂಡಿರುವುದಾಗಿಯೂ ಕಾಮೆಂಟ್ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಮಾವಿನ ಹಣ್ಣು ತಿನ್ನುವಾಗ ನೂರು ಪಟ್ಟು ಹೆಚ್ಚು ಗಮನ ಹರಿಸುವುದಾಗಿಯೂ ಹೇಳಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (