ಯುಪಿಐ ಮೂಲಕ ವ್ಯವಹಾರ ಮಾಡಿದ ಅಂಗಡಿಗಳಿಗೆ ತೆರಿಗೆ ನೋಟಿಸ್ ಶಾಕ್

ಬೆಂಗಳೂರು:ರಾಜ್ಯದ ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ ಮಾಲೀಕರು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದರೇ ಈಗ ಎಚ್ಚರಿಕೆ ವಹಿಸೋದು ಮುಖ್ಯವಾಗಿದೆ. ಯುಪಿಐ ಮೂಲಕ ಹಣ ಸ್ವೀಕರಿಸಿದಂತ ಮಾಲೀಕರಿಗೆ ಬಿಗ್ ಶಾಕ್ ಎನ್ನುವಂತೆ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ನೀಡಲಾಗಿದೆ.
ಹೌದು 2021ರಿಂದ ಟ್ಯಾಕ್ಸ್ ಕಟ್ಟಿಲ್ಲವೆಂದು ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯ ಮಾಲೀಕರಿಗೆ ವಾಣಿಜ್ಯ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ನೋಟೀಸ್ ನಲ್ಲಿ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುವಂತೆ ಮಾಲೀಕರಿಗೆ ಸೂಚಿಸಲಾಗಿದೆ.

ವಾಣಿಜ್ಯ ಆದಾಯ ತೆರಿಗೆ ಇಲಾಖೆಯಿಂದ ಸಣ್ಣ ಸಣ್ಣ ಅಂಗಡಿ ಮಾಲೀಕರಿಗೆ ನೀಡಿರುವಂತ ನೋಟಿಸ್ ನಲ್ಲಿ 54 ಲಕ್ಷ, 37 ಲಕ್ಷ, 32 ಲಕ್ಷ ಕಟ್ಟುವಂತೆ ತಿಳಿಸಲಾಗಿದೆ. ರಾಜ್ಯದ ಸಾವಿರಾರು ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಗೊಳಿಸಲಾಗಿರುವಂತ ನೋಟಿಸ್ ನಿಂದಾಗಿ ಕಂಗಾಲಾಗಿದ್ದಾರೆ.
ಒಟ್ಟಾರೆಯಾಗಿ ಸಾರ್ವಜನಿಕರು ಯುಪಿಐ ಮೂಲಕ ಹಣ ಪಾವತಿ ಮಾಡುತ್ತಾರೆ ಎಂಬುದಾಗಿ ಸಣ್ಣ ಪುಟ್ಟ ಅಂಗಡಿಯ ಮಾಲೀಕರು ತಾವು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹರಿಸೋದಕ್ಕೆ ಹೋಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ವರ್ಷಗಳಿಂದ ನೀವು ವಾಣಿಜ್ಯ ತೆರಿಗೆ ಕಟ್ಟಿಲ್ಲ. ಕಟ್ಟುವಂತೆ ಐದಾರು ವರ್ಷಗಳ ನಂತ್ರ ನೋಟಿಸ್ ನೀಡಿ ಸೂಚಿಸಲಾಗಿದೆ.
