ಪುಣೆಯಲ್ಲಿ ಆಘಾತಕಾರಿ ಘಟನೆ: ಡೆಲಿವರಿ ಸಿಬ್ಬಂದಿಯಿಂದ ಯುವತಿ ಮೇಲೆ ಅತ್ಯಾಚಾರ!

ಪುಣೆ: ಡೆಲಿವರಿಗೆಂದು ಬಂದಿದ್ದ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರವೆಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಐಷಾರಾಮಿ ಫ್ಲಾಟ್ನಲ್ಲಿ ವಾಸಿಸುತ್ತಿರುವ ಯುವತಿ ಮನೆಗೆ ಕೊರಿಯರ್ ನೀಡಲು ಬಂದಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಮೊಬೈಲ್ನಲ್ಲಿ ಒಟಿಪಿ ನೋಡಲು ಒಳಗೆ ಹೋದಾಗ ವ್ಯಕ್ತಿ ಬಾಗಿಲು ಲಾಕ್ ಮಾಡಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದಾನೆ.

ಕೆಲವು ವರದಿಗಳ ಪ್ರಕಾರ, ಆರೋಪಿ ಯುವತಿ ಮುಖಕ್ಕೆ ಏನನ್ನೋ ಸ್ಪ್ರೇ ಮಾಡಿದ್ದಾನೆ, ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು, ಕೂಡಲೇ ಆತ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಹೊರಡುವ ಮೊದಲು ಆಕೆಯ ಮೊಬೈಲ್ನಿಂದ ಸೆಲ್ಫಿ ತೆಗೆದು, ನಾನು ಮತ್ತೆ ಬರ್ತೀನಿ ಎಂದು ನೋಟ್ ಬರೆದಿಟ್ಟು ಹೋಗಿದ್ದಾನೆ.
ಪೊಲೀಸರು ಈ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅತ್ಯಾಚಾರ, ಮಹಿಳೆಯ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.ಸಂಜೆ 7.30ರ ಸುಮಾರಿಗೆ ಫ್ಲಾಟ್ಗೆ ಡೆಲಿವರಿ ಬಾಯ್ ಹೋಗಿದ್ದಾನೆ. ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಡಗಳು ಸೇರಿದಂತೆ ಹತ್ತು ತಂಡಗಳು ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ.
ಮಹಿಳೆ ಸಂಜೆ 7.30 ರಿಂದ ಪ್ರಜ್ಞಾಹೀನಳಾಗಿದ್ದಳು. ಪರಿಶೀಲಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಯಿತು.ಆಕೆಯ ಮೇಲೆ ಏನಾದರೂ ಸಿಂಪಡಿಸಲಾಗಿತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮಹಿಳೆಯ ಫೋನ್‌ನಲ್ಲಿ ಸೆಲ್ಫಿ ಕಂಡುಬಂದಿದೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ ಎಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
