Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಘಾತಕಾರಿ ಘಟನೆ: ದಂತ ಪರೀಕ್ಷೆಗೆ ಹೋದ ಬಾಲಕಿ; ಎಕ್ಸ್‌-ರೇನಲ್ಲಿ ಸೈನಸ್‌ನಲ್ಲಿ ಸಿಲುಕಿದ ಕಿವಿಯೋಲೆ ಪತ್ತೆ

Spread the love

ದಿನನಿತ್ಯದ ದಂತ ಪರೀಕ್ಷೆಗೆಂದು ತಾಯಿ ಮತ್ತು ಮಗಳು ದಂತವೈದ್ಯರ ಬಳಿಗೆ ಹೋದಾಗ ಎಲ್ಲರನ್ನೂ ಬೆಚ್ಚಿಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. 13 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಬ್ರೇಸ್‌ ಹಾಕಿಸಿಕೊಳ್ಳಲು ಹೋಗಿದ್ದಳು. ಪರೀಕ್ಷೆಯ ನಂತರ, ವೈದ್ಯರು ಅವಳ ಎಕ್ಸ್-ರೇ ತೋರಿಸಿದಾಗ ಎಲ್ಲರೂ ಶಾಕ್ ಆದರು. ಹೌದು, ಎಕ್ಸ್-ರೇನಲ್ಲಿ ಅವಳ ಮೂಗಿನ ಬಳಿಯ ಸೈನಸ್‌ನಲ್ಲಿ ಕಿವಿಯೋಲೆಯ ಸಣ್ಣ ತುಂಡೊಂದು ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಆದರೆ ಅದು ಅಲ್ಲಿಗೆ ಹೇಗೆ ಹೋಯ್ತು, ಅಲ್ಲಿ ಸಿಲುಕಿಕೊಳ್ಳಲು ಕಾರಣವೇನು? ಎಂಬುದೇ ಇಂಟ್ರೆಸ್ಟಿಂಗ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಡಿಎಚ್‌ಡಿ ಸಮಸ್ಯೆ ಇರುವವರು ಇದನ್ನು ತಿಳಿದುಕೊಳ್ಳಲೇಬೇಕಾಗಿದೆ.

ಅಲ್ಲಿಗೆ ಹೇಗೆ ಹೋಯ್ತು ಅಂದ್ರೆ…
ಕಿವಿಯೋಲೆಯ ತುಂಡು ಅಲ್ಲಿಗೆ ಹೇಗೆ ತಲುಪಿತು ಎಂಬುದರ ಬಗ್ಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ವರದಿಯ ಪ್ರಕಾರ ( ref.) ಅಮೆರಿಕದ ವಾಷಿಂಗ್ಟನ್ ಸ್ಟೇಟ್‌ನಲ್ಲಿ ಕೆಲವು ತಿಂಗಳ ಹಿಂದೆ ಬಾಲಕಿ ತನ್ನ ಮೂಗು ಚುಚ್ಚಿಕೊಳ್ಳಲು ತನ್ನ ತಾಯಿಯಿಂದ ಅನುಮತಿ ಕೇಳಿದ್ದಳು. ಆದರೆ ಆಕೆಯ ತಾಯಿ ನಿರಾಕರಿಸಿದ್ದಳು. ಬಾಲಕಿಗೆ ಎಡಿಎಚ್‌ಡಿ(ADHD)ಎಂಬ ಮಾನಸಿಕ ಸಮಸ್ಯೆ ಇತ್ತು. ಈ ಸಮಸ್ಯೆಯಿರುವವರು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತನ್ನ ಮೇಲೆ ಕಡಿಮೆ ನಿಯಂತ್ರಣ ಹೊಂದಿರುತ್ತಾರೆ. ಇದೇ ಸಮಸ್ಯೆಯಿಂದಾಗಿ ಆಕೆ ಕಿವಿ ಚುಚ್ಚುವ ಕಿವಿಯೋಲೆ ತೆಗೆದುಕೊಂಡು ತನ್ನ ಮೂಗನ್ನು ತಾನೇ ಚುಚ್ಚಿಕೊಳ್ಳಲು ಪ್ರಯತ್ನಿಸಿದಳು. ಮೂಗಿನ ಒಳಭಾಗವನ್ನು ಚುಚ್ಚಲು ಪ್ರಯತ್ನಿಸುವಾಗ, ಅವಳು ಬಹುಶಃ ಸೀನಿರಬಹುದು ಅಥವಾ ಆಳವಾದ ಉಸಿರನ್ನು ತೆಗೆದುಕೊಂಡಿರಬಹುದು. ಈ ಪ್ರಕ್ರಿಯೆಯಲ್ಲಿ ಕಿವಿಯೋಲೆಯ ತುಂಡು ಒಳಗೆ ಎಳೆದುಕೊಂಡು ಅವಳ ಸೈನಸ್‌ಗಳಲ್ಲಿ ಸಿಲುಕಿಕೊಂಡಿತು. ಅವಳು ಭಯಭೀತಳಾಗಿ ಮುಜುಗರಕ್ಕೊಳಗಾಗಿದ್ದಳು. ಅದಕ್ಕಾಗಿಯೇ ತನ್ನ ತಾಯಿಗೆ ಏನನ್ನೂ ಹೇಳಲಿಲ್ಲ. ಅವಳಿಗೆ ಯಾವುದೇ ನೋವು ಅನಿಸದ ಕಾರಣ ಲೋಹವನ್ನು ಯಾರಾದರೂ ನುಂಗಿರಬಹುದು ಎಂದು ಭಾವಿಸಿದಳು.

ಬಾಲಕಿಗಿತ್ತು ಆ ಸಮಸ್ಯೆ..
ತಿಂಗಳುಗಟ್ಟಲೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ದಂತ ವೈದ್ಯರು ಎಕ್ಸ್-ರೇ ಮಾಡಿದಾಗ ಸಂಪೂರ್ಣ ಸತ್ಯ ಹೊರಬಂದಿದೆ. ವೈದ್ಯರು ಉದ್ದವಾದ ವೈದ್ಯಕೀಯ ಚಿಮಟ ಬಳಸಿ ಅದನ್ನು ಹೊರತೆಗೆದರು. ಸಂತಸದ ಸಂಗತಿಯೆಂದರೆ ಈ ಸಮಯದಲ್ಲಿ ಹುಡುಗಿಗೆ ಯಾವುದೇ ನೋವು ಅಥವಾ ಅಸ್ವಸ್ಥತೆ ಕಾಣಿಸಲಿಲ್ಲ. ಈ ಮೊದಲೇ ಹೇಳಿದ ಹಾಗೆ ಎಡಿಎಚ್‌ಡಿಯಿಂದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗಮನ ಕೇಂದ್ರೀಕರಿಸಲು, ಸದ್ದಿಲ್ಲದೆ ಕುಳಿತುಕೊಳ್ಳಲು ಮತ್ತು ಚಿಂತನಶೀಲವಾಗಿ ಕೆಲಸ ಮಾಡಲು ಕಷ್ಟವಾಗುತ್ತದೆ. ತಾಯಿಯ ನಿರಾಕರಣೆಯ ಹೊರತಾಗಿಯೂ ಅವಳು ಲೋಹದ ವಸ್ತುವನ್ನು ತೆಗೆದುಕೊಂಡು ಮೂಗಿನಲ್ಲಿ ಹಾಕಿಕೊಳ್ಳಲು ಇದೇ ಕಾರಣ.

ಎಡಿಎಚ್‌ಡಿ ಸಮಸ್ಯೆ ಇದ್ದಾಗ
ಇಂತಹ ಸಮಸ್ಯೆ ಇರುವ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಮುಖ್ಯ ಎಂದು ಹುಡುಗಿಯ ತಾಯಿ ಹೇಳಿದ್ದಾರೆ. “ಮೂಗು ಅಥವಾ ದೇಹದ ಯಾವುದೇ ಭಾಗವನ್ನು ಚುಚ್ಚಿಕೊಳ್ಳುವುದನ್ನು ಯಾವಾಗಲೂ ತಜ್ಞರಿಂದ ಮಾಡಿಸಿಕೊಳ್ಳಬೇಕು. ನೀವೇ ಚುಚ್ಚಿಕೊಳ್ಳಲು ಪ್ರಯತ್ನಿಸುವುದು ತುಂಬಾ ಅಪಾಯಕಾರಿ” ಎಂದು ಸಲಹೆ ನೀಡಿದ್ದಾರೆ. ಇದಲ್ಲದೆ, ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಚುಚ್ಚುವುದು ಅಥವಾ ಹಚ್ಚೆ ಹಾಕಿಸಿಕೊಳ್ಳುವಂತಹ ವಿಷಯಗಳ ಬಗ್ಗೆ ವಿವರಿಸಬೇಕು. ಇಂತಹ ಸಮಯದಲ್ಲಿ ಯಾವುದೇ ಕೆಲಸ ಅಥವಾ ಅಧ್ಯಯನದಲ್ಲಿ ಗಮನವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ.

ಎಡಿಎಚ್‌ಡಿ ಇರುವವರಂತೂ ಅಗತ್ಯಕ್ಕಿಂತ ಹೆಚ್ಚು ಓಡಾಡುವುದು, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಥವಾ ಯೋಚಿಸದೆ ಇದ್ದಕ್ಕಿದ್ದಂತೆ ವರ್ತಿಸುವುದು, ಕೆಲಸದ ಮೇಲೆ ಗಮನಹರಿಸುವುದಿಲ್ಲ, ಪದೇ ಪದೇ ವಿಷಯಗಳನ್ನು ಮರೆತುಬಿಡುತ್ತಾರೆ, ಕೆಲಸವನ್ನು ಅಪೂರ್ಣ ಮಾಡುತ್ತಾರೆ. ವಿಷಯಗಳನ್ನು ಮರೆಯುತ್ತಾರೆ ಇತ್ಯಾದಿ. ಆದ್ದರಿಂದ ಈ ರೋಗಲಕ್ಷಣಗಳ ಮೇಲೆ ನಿಗಾ ಇರಿಸಿ. ವಿಜ್ಞಾನಿಗಳು ಇನ್ನೂ ADHD ಗೆ ನಿಖರವಾದ ಕಾರಣವನ್ನು ಕಂಡುಕೊಂಡಿಲ್ಲ. ಆದರೆ ಕುಟುಂಬದಲ್ಲಿ ಯಾರಿಗಾದರೂ ಇದು ಇದ್ದರೆ, ಮಕ್ಕಳು ಸಹ ಇದರಿಂದ ಬಳಲಬಹುದು. ಅಕಾಲಿಕ ಜನನ, ಕಡಿಮೆ ತೂಕದ ಜನನ, ಗರ್ಭಾವಸ್ಥೆಯಲ್ಲಿ ಧೂಮಪಾನ-ಮದ್ಯಪಾನ ಅಥವಾ ಗರ್ಭಾವಸ್ಥೆಯಲ್ಲಿ ಅತಿಯಾದ ಒತ್ತಡ ಇದಕ್ಕೆ ಕಾರಣಗಳಾಗಿರಬಹುದು.


Spread the love
Share:

administrator

Leave a Reply

Your email address will not be published. Required fields are marked *