ಬೆಂಗಳೂರು ಆಟೋ ಚಾಲಕನ ಐಷಾರಾಮಿ ಲೈಫ್‌ಸ್ಟೈಲ್‌ಗೆ ಶಾಕ್: ತಿಂಗಳಿಗೆ ಲಕ್ಷ ಗಳಿಕೆ, ಕೋಟಿ ಬೆಲೆಯ 2 ಮನೆ!

ಬೆಂಗಳೂರು: ಮಾಯಾನಗರಿ ಬೆಂಗಳೂರಿನಲ್ಲಿ (Bengaluru) ತಿಂಗಳಿಗೆ ಲಕ್ಷಾನುಗಟ್ಟಲೇ ಸಂಬಳವಿದ್ರೂ ಜೀವನ ನಡೆಸೋದು, ಲೈಫ್‌ನಲ್ಲಿ ಸೆಟ್ಲ್ ಆಗೋದು ತುಂಬಾನೇ ಕಷ್ಟ. ಆದರೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡವರು ಐಷಾರಾಮಿ ಮನೆ ಹೊಂದುವುದು ಅಂದ್ರೆ ಕನಸಿನ ಮಾತು. ಆದರೆ ಬೆಂಗಳೂರಿನ ಆಟೋ ಚಾಲಕನು ತಿಂಗಳಿಗೆ ಲಕ್ಷಾನುಗಟ್ಟಲೇ ಆದಾಯ ಹಾಗೂ ಐಷಾರಾಮಿ ಮನೆ ಹೊಂದಿದ್ದಾರೆ. ಇಂಜಿನಿಯರ್ ಆಗಿರುವ ಆಕಾಶ್ ಆನಂದಿನಿ (Akash Anandini) ಅವರು ಆಟೋ ಚಾಲಕನನ್ನು ಗಮನಿಸಿದ್ದು, ಈ ವೇಳೆಯಲ್ಲಿ ಆತನ ಬಳಿಯಿದ್ದ ಆಪಲ್ ವಾಚ್ ಹಾಗೂ ಏರ್‌ಪಾಡ್‌ಗಳನ್ನು ನೋಡಿದ್ದಾರೆ. ಹೀಗಿರುವಾಗ ಕುತೂಹಲದಿಂದ ಆಟೋ ಚಾಲಕನ ಜೊತೆಗೆ ಮಾತಿಗಿಳಿದ ವೇಳೆ ಅಸಲಿ ವಿಚಾರ ಹೊರಬಿದ್ದಿದೆ. ಈ ಚಾಲಕನ ತಿಂಗಳ ಆದಾಯ, ಕೋಟಿಗಟ್ಟಲೇ ಬೆಲೆಬಾಳುವ ಮನೆಯ ಬಗ್ಗೆ ಕೇಳಿ ಶಾಕ್ ಆಗಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಬದುಕಿನ ಚಿತ್ರಣ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ..

ಆಟೋ ಚಾಲಕನ ಐಷಾರಾಮಿ ಜೀವನ ಹೇಗಿದೆ ನೋಡಿ
Akash Anandani ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಆಟೋ ಚಾಲಕನ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಟೋ ಓಡಿಸುವ ವ್ಯಕ್ತಿಯ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಬೆಂಗಳೂರು ಹುಚ್ಚು ಹಿಡಿಸಿದೆ. ಆಟೋ ಚಾಲಕನು ತನಗೆ 4-5 ಕೋಟಿ ಬೆಲೆಬಾಳುವ 2 ಮನೆ ಹಾಗೂ ಬಾಡಿಗೆ ರೂಪದಲ್ಲಿ ತಿಂಗಳಿಗೆ ಸುಮಾರು 2-3 ಲಕ್ಷ ಗಳಿಸುತ್ತಾರೆ. ಎಐ ಆಧಾರಿತ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಕೂಡ ಹೊಂದಿದ್ದಾರೆ ಎಂದಿದ್ದಾರೆ.
ಅಕ್ಟೋಬರ್ 4 ರಂದು ಶೇರ್ ಮಾಡಲಾದ ಈ ಪೋಸ್ಟ್ ಎಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರರು, ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಬೆಂಗಳೂರು ಸ್ಟಾರ್ಟ್‌ಅಪ್ ರಾಜಧಾನಿಯಾಗಲು ಇದೇ ಕಾರಣ, ಆಟೋ ಚಾಲಕರು ಸಹ ಹೂಡಿಕೆದಾರರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಇಂತಹ ಬದಲಾವಣೆಗಳು ಕಂಡು ಬಂದರೆ ನಿಜಕ್ಕೂ ಖುಷಿಯ ವಿಚಾರ. ಆದರೆ ಈ ಕೆಲವು ವಿಚಾರಗಳನ್ನು ನಂಬಲು ಅಸಾಧ್ಯವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.