ಫೋನ್ ಬಳಕೆದಾರರಿಗೆ ಶಾಕ್: ಮೆಟಾ ಆಪ್‌ಗಳಲ್ಲಿ AI ಟೂಲ್ಸ್ ನಿಷೇಧ

ಬಹುತೇಕರಿಗೆ ಐಫೋನ್ ಹುಚ್ಚು. ಭಾರತದಲ್ಲಿ ಬಡವರು ಕೂಡ ಐಫೋನ್ ತಗೊಂಡ ಉದಾಹರಣೆ ಇದೆ. ಈಗ ಐಫೋನ್ ಬಳಕೆದಾರರಿಗೆ ಬೇಸರ ಮೂಡಿಸುವ ಸುದ್ದಿ ಹೊರಬಂದಿದೆ. ಐಫೋನ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರ ಮೆಟಾ, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್, ಫೇಸ್‌ಬುಕ್, ಥ್ರೆಡ್ಸ್ ಎನ್ನುವ ತನ್ನ ನಾಲ್ಕು ಆಪ್‌ಗಳಲ್ಲಿ ಆಪಲ್ ಇಂಟೆಲಿಜೆನ್ಸ್ ರೈಟಿಂಗ್ ಟೂಲ್ಸ್ ಬಳಕೆಯನ್ನು ನಿರ್ಬಂಧಿಸಿದೆ. ಆರಂಭದಲ್ಲಿ ಈ ಟೂಲ್ಸ್ ಲಭ್ಯವಿತ್ತು, ಈಗ ಎಲ್ಲ ಐಫೋನ್ ಬಳಕೆದಾರರಿಗೆ ತೆಗೆದುಹಾಕಲಾಗಿದೆ.

ಮೆಟಾ ಆಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ!
ಆಪಲ್‌ನ ರೈಟಿಂಗ್ ಟೂಲ್ಸ್ iOS 18 ರಲ್ಲಿ ಎಲ್ಲೆಲ್ಲಿ ಟೈಪ್ ಮಾಡಬಹುದೋ, ಅಲ್ಲಲ್ಲಿ ಪ್ರೂಫ್‌ರೀಡ್, ರಿರೈಟ್, ಸಮರಿ ಮಾಡುವ ವೈಶಿಷ್ಟ್ಯ ಇದೆ. ಸಾಮಾನ್ಯವಾಗಿ, ಟೆಕ್ಸ್ಟ್ Input ಫೀಲ್ಡ್‌ನಲ್ಲಿ ದೀರ್ಘವಾಗಿ ಒತ್ತಿದರೆ ಈ ಆಯ್ಕೆಗಳು ಕಾಣಿಸುವುದು, ಆದರೆ ಇದೀಗ ಮೆಟಾ ಆಪ್‌ಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿಲ್ಲ.
ಏನೇನು ಸೌಲಭ್ಯ ಇಲ್ಲ?
ಬ್ರೆಜಿಲಿಯನ್ ಟೆಕ್ ಬ್ಲಾಗ್ ಸೋರ್ಸರ್ ಹ್ಯಾಟ್ ಟೆಕ್, ಮೆಟಾ ಆಪ್‌ಗಳಲ್ಲಿ ರೈಟಿಂಗ್ ಟೂಲ್ಸ್ ಕಾಣೆ ಆಗಿರೋದನ್ನು ಗುರುತಿಸಿದೆ. ಸಾಮಾನ್ಯವಾಗಿ ಐಫೋನ್, ಐಪ್ಯಾಡ್ ಬಳಕೆದಾರರು ಟೆಕ್ಸ್ಟ್ ಫೀಲ್ಡ್‌ನ ಮೇಲೆ ಟ್ಯಾಪ್ ಮಾಡುವ ಮೂಲಕ ರೈಟಿಂಗ್ ಟೂಲ್ಸ್ ಸಕ್ರಿಯ ಮಾಡಬಹುದು. ಆದರೆ ಮೆಟಾದ iOS ಆಪ್‌ಗಳಲ್ಲಿ ಈ ಒಂದು ಕಾರ್ಯವೈಶಿಷ್ಟ್ಯ ಕಾಣೆಯಾಗಿದೆ. ಮೆಟಾ ಆಪ್‌ಗಳು ಪ್ರಸ್ತುತ ಆಪಲ್‌ನ AI-ಜನರೇಟೆಡ್ ಕಸ್ಟಮ್ ಎಮೋಜಿಗಳಾದ ಜೆನ್‌ಮೋಜಿ ಸಪೋರ್ಟ್ ಮಾಡೋದಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಕೀಬೋರ್ಡ್ ಸ್ಟಿಕ್ಕರ್‌ಗಳು, ಇಮೋಜಿಯನ್ನು ಸ್ಟೋರೀಸ್‌ನಲ್ಲಿ ಸೇರಿಸುವ ಆಪ್ಶನ್ ಕೂಡ ತೆಗೆದುಹಾಕಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ, ಇದು ಈ ಹಿಂದೆ ಲಭ್ಯವಿತ್ತು.
ಇದರ ಹಿಂದಿನ ಕಾರಣ ಏನು?
ಮೆಟಾ ತನ್ನ iOS ಆಪ್‌ಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಲಭ್ಯವಿಲ್ಲದಿರುವ ಕಾರಣ ಏನು ಎಂದು ವಿವರಿಸಿಲ್ಲ. ಆದರೆ ಕಂಪನಿಯು ಬಳಕೆದಾರರನ್ನು ಮೆಟಾ AIಗೆ ಸೀಮಿತಗೊಳಿಸಲು ಬಯಸುತ್ತದೆ. ಮೆಟಾ AI ಇದರ ಹೆಚ್ಚಿನ ಆಪ್‌ಗಳಲ್ಲಿ ಡಿಫಾಲ್ಟ್ ಇದ್ದು, ಬರವಣಿಗೆಗೆ ಸಹಾಯ ಮಾಡುವುದು, ಫೋಟೋ ಕ್ರಿಯೇಟ್‌ಮಾಡುವ ವೈಶಿಷ್ಟ್ಯಗಳನ್ನು ನೀಡುತ್ತದೆ.
AI ಒಪ್ಪಂದಕ್ಕೆ ಸಹಿ ಹಾಕಲಾಗಿದೆ!
ವಾಲ್ ಸ್ಟ್ರೀಟ್ ಜರ್ನಲ್‌ನ ಜೂನ್ 2024ರ ವರದಿ ಪ್ರಕಾರ, ಆಪಲ್ ತನ್ನ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯ ಸೆಟ್‌ನ ಭಾಗವಾಗಿ ಫೇಸ್‌ಬುಕ್ ಮಾಲೀಕರ AI ಮಾಡೆಲ್ ಅನ್ನು iOS 18 ರಲ್ಲಿ ನೀಡುವ ಬಗ್ಗೆ ಮೆಟಾದೊಂದಿಗೆ ಚರ್ಚೆಗಳನ್ನು ನಡೆಸಿತ್ತು. ಗೌಪ್ಯತೆ ದೃಷ್ಟಿಯಿಂದ ಆಪಲ್ AI ಪಾಲುದಾರಿಕೆಯನ್ನು ತಿರಸ್ಕರಿಸಿತು. ಐಫೋನ್ ತಯಾರಕರು ಬದಲಿಗೆ ಓಪನ್AI ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿ, ಸಿರಿ ರೆಸ್ಪಾನ್ಸ್‌ನಲ್ಲಿ ಆಪ್ಶನಲ್ ಚಾಟ್‌ಜಿಪಿಟಿ ಬಳಕೆ ಆಗುವಂತೆ ಮಾಡಿದರು.
ತನ್ನ ನಿರ್ಧಾರ ಬದಲಾಯಿಸಿದಳು!
ಮೆಟಾ ಮುಂದೆ ತನ್ನ ನಿರ್ಧಾರವನ್ನು ಬದಲಾಯಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಫೋನ್ ಬಳಕೆದಾರರು ಮೆಟಾದ ಆಪ್‌ಗಳೊಳಗೆ ಮೆಟಾದ ಸ್ವಂತ AI ವೈಶಿಷ್ಟ್ಯಗಳನ್ನು ಬಳಸಬೇಕಾಗುತ್ತದೆ. ಮೆಟಾದ ಪ್ಲಾಟ್‌ಫಾರ್ಮ್‌ಗಳ ಹೊರಗಿನ ಇತರ ಸಪೋರ್ಟೆಡ್ ಆಪ್‌ಗಳ ಮೂಲಕ ಮಾತ್ರ ಆಪಲ್ ಇಂಟೆಲಿಜೆನ್ಸ್ ಪ್ರವೇಶಿಸಬಹುದು.
ಐಫೋನ್ ಹೊಸ ಸಿರೀಸ್ ಲಾಂಚ್!
ಜನವರಿ 1, 2024 ರ ಹೊತ್ತಿಗೆ 2.3 ಶತಕೋಟಿಗೂ ಹೆಚ್ಚು ಐಫೋನ್‌ಗಳು ಮಾರಾಟವಾಗಿದ್ದು, ಆಪಲ್ ಮೊಬೈಲ್ ಫೋನ್‌ಗಳ ಅತಿದೊಡ್ಡ ಮಾರಾಟಗಾರನಾಗಿದೆ. ಐಫೋನ್‌ಗಳು ಫೇಸ್ ಐಡಿ, ಟಚ್ ಐಡಿ, ಗೆಸ್ಚರ್ ಆಧಾರಿತ ನ್ಯಾವಿಗೇಷನ್‌ನಂತಹ ವೈಶಿಷ್ಟ್ಯಗಳೊಂದಿಗೆ iOS ನಲ್ಲಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಐಫೋನ್ 14, 15, 16 ಸಿರೀಸ್‌ಗಳನ್ನು ಲಾಂಚ್ ಮಾಡಲಾಗಿದೆ.