Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ಯಾಚುಲರ್‌ಗಳಿಗೆ ಶಾಕ್: ಮಾರತ್‌ಹಳ್ಳಿ-ಸರ್ಜಾಪುರದಲ್ಲಿ ಸಾವಿರಾರು PG ಮುಚ್ಚುಮುಲುವ ಸ್ಥಿತಿಗೆ

Spread the love

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಯುವಕ-ಯುವತಿಯರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅದೇರೀತಿ ಇದರಲ್ಲಿ ಅರ್ಧಕ್ಕೂ ಹೆಚ್ಚಿನವರು ಬ್ಯಾಚುಲರ್‌ಗಳಾಗಿರುತ್ತಾರೆ. ಹೀಗಾಗಿ ಇವರುಗಳು ಹೆಚ್ಚಾಗಿ ಇಲ್ಲಿನ ಪಿಜಿ ಗಳನ್ನೇ ನಂಬಿರುತ್ತಾರೆ.

ಹೌದು, ಪೇಯಿಂಗ್ ಗೆಸ್ಟ್ (PG) ವಸತಿ ಸೌಕರ್ಯಗಳು ಒಂದು ಕಾಲದಲ್ಲಿ ಸಾವಿರಾರು ಯುವಕರಿಗೆ ವಸತಿ ಸೌಕರ್ಯ ಒದಗಿಸುತ್ತಿತ್ತು. ಆದರೆ ಇದೀಗ ಇದೇ ಪಿಜಿಗಳು ಸಾಲು ಸಾಲಾಗಿ ಮುಚ್ಚುತ್ತಿದೆ. ಇದು ಬೆಂಗಳೂರಿನಲ್ಲಿರುವ ಲಕ್ಷಾಂತರ ಯುವಕ-ಯುವತಯರಿಗೆ ದೊಡ್ಡ ತಲೆನೋವಾಗಿದೆ.

ಮುಚ್ಚುತ್ತಿರುವ ಬೆಂಗಳೂರಿನ ಪಿಜಿಗಳು:

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಬೆಂಗಳೂರಿನ ಪಿಜಿ ಮಾಲೀಕರು ಸಾಂಕ್ರಾಮಿಕ ರೋಗದ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದರು. ಕ್ರಮೇಣ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಲ್ಲಿದ್ದರು. ಆದಾಗ್ಯೂ, ಐಟಿ ವಲಯದ ಉದ್ಯೋಗದಲ್ಲಿ ನಷ್ಟಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜಾರಿಗೊಳಿಸಿದ ಕಟ್ಟುನಿಟ್ಟಾದ ಹೊಸ ನಿಯಮಗಳು ಇದೀಗ ಅದೆಷ್ಟೋ ಪಿಜಿಗಳು ಮುಚ್ಚುವ ಸ್ಥಿತಿಗೆ ಬಂದಿದ್ದು, ಕೋವಿಡ್ ಬಳಿಕ ಪೊಲೀಸರು ಹಾಗೂ BBMP ಕಠಿಣ ಕ್ರಮಗಳಿಂದ ಬೆಂಗಳೂರಿನ ಪಿಜಿಗಳಲ್ಲಿ ಶೇ.25ರಷ್ಟು ನಷ್ಟ ಎದುರಾಗಿದೆ ಎಂದು ವರದಿಯಾಗಿದೆ.

ಪಿಜಿ ಮುಚ್ಚಲು ಕಾರಣವೇನು?

ಇನ್ನು, ಪಿಜಿಗಳ ಮೇಲೆ ಹೇರಲಾಗುತ್ತಿರುವ ಹೊಸ ನಿಯಮಗಳು, ಐಟಿ ಟೆಕ್‌ ಉದ್ಯೋಗ ಕಡಿತ, ದಿನೇ ದಿನೇ ಹೆಚ್ಚುತ್ತಿರುವ ನೀರು ಮತ್ತು ವಿದ್ಯುತ್ ದರ ಏರಿಕೆಯಿಂದ ಅನೇಕ ಪಿಜಿಗಳು ನಷ್ಟಕ್ಕೆ ಸಿಲುಕಿ ಮುಚ್ಚುತ್ತಿದೆ ಎಂದು ಹೇಳಲಾಗಿದೆ. ಇನ್ನು, ಕಳೆದ ವರ್ಷವೇ ಬೆಂಗಳೂರಲ್ಲಿ ಅನೇಕ ಪಿಜಿಗಳು ಬಂದ್‌ ಆಗಿವೆ. ಅದರಲ್ಲುಯೂ ಐಟಿ ಉದ್ಯೋಗಿಗಳಿಂದಲೇ ತುಂಬಿರುವ ಮಾರತ್‌ಹಳ್ಳಿ ಮತ್ತು ಸರ್ಜಾಪುರದಂತಹ ಸ್ಥಳಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಪಿಜಿಗಳು ಮುಚ್ಚಲ್ಪಡುತ್ತಿವೆ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಮಧ್ಯಾಹ್ನ ವಿಚಾರಣೆ ಅದರಲ್ಲಿಯೂ ಮಹದೇವಪುರದಲ್ಲಿ ಸುಮಾರು 100 ಪಿಜಿಗಳು ಮುಚ್ಚಿವೆ ಎಂದು ಹೇಳಲಾಗಿದೆ. ಇದರ ನಡುವೆ ಹೌದು. ಬಿಬಿಎಂಪಿ ಈಗ 40 ಅಡಿ ರಸ್ತೆ ನಿಯಮ ಸೇರಿದಂತೆ ತನ್ನ ಕೆಲವು ಕಠಿಣ ನಿಯಮಗಳನ್ನು ಸಡಿಲಿಸುವ ಬಗ್ಗೆ ಯೋಚಿಸುತ್ತಿದೆ. ಇದು ಸಂಭವಿಸಿದಲ್ಲಿ, ಹೆಚ್ಚಿನ ಪಿಜಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅಥವಾ ಪುನರಾರಂಭಿಸಲು ಸಾಧ್ಯವಾಗಬಹುದು ಎಂದು ಮಾಧ್ಯಮ ವರದಿ ತಿಳಿಸಿದೆ.

ಬೆಂಗಳೂರಲ್ಲಿ PG ಗಳು ಏಕೆ ಮುಖ್ಯ?

ಇನ್ನು, ಬೆಂಗಳೂರಿಗೆ ಬರುವ ಹೊಸಬರಿಗೆ ಪಿಜಿ ಕೇಂದ್ರಗಳು ದೊಡ್ಡಮಟ್ಟದಲ್ಲಿಯೇ ಮುಖ್ಯವಾಗಿದೆ. ವಿಶೇಷವಾಗಿ ಹೆಚ್ಚಿನ ಬಾಡಿಗೆಯನ್ನು ನೀಡಲು ಸಾಧ್ಯವಾಗದ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಪಿಜಿ ಕೇಂದ್ರಗಳೇ ಆಸರೆಯಾಗಿದೆ. ಏಕೆಂದರೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯ ಬಾಡಿಗೆ ಹಾಗೂ ಅದರ ಅಡ್ವಾನ್ಸ್‌ ನೀಡುವುದೇ ದೊಡ್ಡ ಸಮಸ್ಯೆ. ಅಲ್ಲದೇ ಬ್ಯಾಚುಲರ್‌ಗಳಿಗೆ ಬಾಡಿಗೆ ಮನೆ ಆರಂಭದಲ್ಲಿಯೇ ಸಮಸ್ಯೆ ಆಗುವ ಕಾರಣ ಬೆಂಗಳೂರಿನಂತಹ ಸ್ಥಳಗಳಲ್ಲಿ ಪಿಜಿ ಬಹಳ ಮುಖ್ಯವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *