ಬೈಂದೂರಿಗೆ ಶಿವಕುಮಾರ್ ಬಿ, ಮಂಗಳೂರು ಐಜಿಪಿ ಕಚೇರಿಗೆ ಸವಿತೃತೇಜ: ಕರಾವಳಿಯ ಪೊಲೀಸ್ ವೃತ್ತ ನಿರೀಕ್ಷಕರು ವರ್ಗಾವಣೆ

ಕುಂದಾಪುರ: ರಾಜ್ಯದ 131 ಸಿವಿಲ್ ಪೊಲೀಸ್ ಇನ್ಸೆಕ್ಟರ್ (ವೃತ್ತ ನಿರೀಕ್ಷಕರು) ಗಳಿಗೆ ತಕ್ಷಣದಿಂದ ಜ್ಯಾರಿಯಾಗುವಂತೆ ವರ್ಗಾವಣೆ ಆದೇಶ ನೀಡಲಾಗಿದೆ.

ಅದರಂತೆ ಕುಂದಾಪುರದಲ್ಲಿ ಖಾಲಿಯಿದ್ದ ವೃತ್ತ ನಿರೀಕ್ಷಕರ ಸ್ಥಾನಕ್ಕೆ ಮುರ್ಡೇಶ್ವರದಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಆನಂದ ಕಾಯ್ಕಿಣಿ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಬೈಂದೂರಿನಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸವಿತೃತೇಜ ಅವರನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಹಾವಣೆ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ ಬಿ ಅವರನ್ನು ಬೈಂದೂರು ವೃತ್ತ ನಿರೀಕ್ಷಕರಾಗಿ ನಿಯೋಜಿಸಲಾಗಿದೆ.
ಅಕ್ಟೋಬರ್ ಆರರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ನಿಯುಕ್ತಿ ಪ್ರಕ್ರಿಯೆ ಜ್ಯಾರಿಗೊಂಡಿದ್ದು, ಡೈರೆಕ್ಟರ್ ಜನರಲ್ ಮತ್ತು ಇನ್ ಸ್ಪೆಕ್ಟರ್ ಜನರಲ್ ಬೆಂಗಳೂರು ಇದರ ಕಚೇರಿಯಿಂದ ಸೌಮೇಂದು ಮುಖರ್ಜಿ ಐಪಿಎಸ್ ಆದೇಶ ಹೊರಡಿಸಿದ್ದಾರೆ.
ನಾಳೆಯಿಂದ ಎಲ್ಲಾ 131 ವೃತ್ತ ನಿರೀಕ್ಷಕರು ನೂತನವಾಗಿ ನಿಯೋಜಿಸಲ್ಪಟ್ಟ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಪೈಕಿ ಸಂತೋಷ್ ಕಾಯ್ಕಿಣಿ ಈ ಹಿಂದೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಹಲವಾರು ಕಡೆ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ಬೈಂದೂರು ವೃತ್ತ ನಿರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.