ಆರ್‌ಬಿಐ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ಉಪಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು ಅವರನ್ನು ನೇಮಕ ಮಾಡಲಾಗಿದೆ.

ಸದ್ಯ ಆರ್‌ಬಿಐ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅ.8ರಂದು ಕೊನೆಗೊಳ್ಳಲಿದ್ದು, ಅದಾದ ಬಳಿಕ ಅ.9ರಿಂದ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ.ಪ್ರಸ್ತುತ ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
