ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್’ ಮಾಫಿಯಾ ಆರೋಪ: ರಾಜ್ ಬಿ. ಶೆಟ್ಟಿ ಖಡಕ್ ಉತ್ತರ

ಕನ್ನಡದಲ್ಲಿ ರಿಷಬ್ ಶೆಟ್ಟ, ರಾಜ್ ಬಿ. ಶೆಟ್ಟಿ (Raj B Shetty), ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಂದಮೇಲೆ ಚಿತ್ರರಂಗಕ್ಕೆ ಹೊಸ ಹೊಸ ರೀತಿಯ ಸಿನಿಮಾಗಳು ಸಿಕ್ಕಿವೆ. ‘ಒಂದು ಮೊಟ್ಟೆಯ ಕಥೆ’, ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಸು ಫ್ರಮ್ ಸೋ’ ಹೀಗೆ ಪಟ್ಟಿ ಬೆಳೆಯುತ್ತೇ ಹೋಗುತ್ತದೆ.

ಅನೇಕರು ಈ ಗ್ಯಾಂಗ್ನ ಮಾಫಿಯಾ ಎಂದು ಕರೆದಿದ್ದಾರಂತೆ. ಈ ಬಗ್ಗೆ ರಾಜ್ ಬಿ. ಶೆಟ್ಟಿಗೆ ಅಸಮಾಧಾನ ಇದೆ. ಅನುಪಮಾ ಚೋಪ್ರಾ ಅವರ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ರಿಷಬ್, ರಕ್ಷಿತ್, ರಾಜ್ ಹಾಗೂ ಇತರರು ಒಳ್ಳೆಯ ಸಿನಿಮಾ ನೀಡುವ ಪ್ರಯತ್ನದಲ್ಲಿ ಇದ್ದಾರೆ. ಕೆಲವೊಮ್ಮೆ ಇವರು ಸೋತಿದ್ದಾರೆ, ಇನ್ನೂ ಕೆಲವೊಮ್ಮೆ ದೊಡ್ಡ ಗೆಲುವು ಕಂಡಿದ್ದಾರೆ. ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಬೆಲ್ ಬಾಟಂ’, ‘ಸು ಫ್ರಮ್ ಸೋ’, ‘ಟೋಬಿ’ ಸಿನಿಮಾಗಳು ಯಶಸ್ಸು ಕಂಡಿವೆ. ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದಿವೆ. ‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ರಾಜ್ ಬಿ ಶೆಟ್ಟಿ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆಗ ಅವರು ಶೆಟ್ಟಿ ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಎನ್ನುತ್ತಾರೆ. ನೀವು ಕೂಡ ಗ್ಯಾಂಗ್ ಮಾಡಿ ಬ್ರದರ್. ನಿಮಗೆ ಒಂಟಿಯಾಗಿ ಓಡಾಡಿ ಎಂದು ಹೇಳಿದವರು ಯಾರು? ನೀವು ಕೂಡ ಗ್ಯಾಂಗ್ ಮಾಡಿ. ನಿಮಗೆ ಎಲ್ಲಾ ಗ್ಲೋರಿ, ಜನಪ್ರಿಯತೆ ಬೇಕು. ನೀವು ಬೇರೆಯವರ ಜೊತೆ ಕೊಲ್ಯಾಬರೇಟ್ ಆಗುತ್ತಿಲ್ಲ ಎಂಬುದು ನಮ್ಮ ಸಮಸ್ಯೆ ಅಲ್ಲ. ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ’ ಎಂದು ರಾಜ್ ಬಿ. ಶೆಟ್ಟಿ ಸಲಹೆ ನೀಡಿದ್ದಾರೆ.
ರಾಜ್ ಬಿ. ಶೆಟ್ಟಿ, ರಿಷಬ್, ರಕ್ಷಿತ್ ಒಬ್ಬರ ಸಿನಿಮಾಗೆ ಮತ್ತೊಬ್ಬರು ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ‘ಕಾಂತಾರ’ ಸಿನಿಮಾನ ರಿಷಬ್ ಮಾಡಿದಾಗ ಅದನ್ನು ನೋಡಿ ರಕ್ಷಿತ್ ತುಂಬಾನೇ ಖುಷಿ ಆಗಿದ್ದರು. ಅವರು ಹೋಗಿ ರಿಷಬ್ನ ತಬ್ಬಿಕೊಂಡಿದ್ದರು. ಈ ರೀತಿಯ ಅನೇಕ ಘಟನೆಗಳು ನಡೆದಿವೆ.
