ಯುವತಿಯ ಖಾಸಗಿ ವಿಡಿಯೋಗಳು ಲೀಕ್; ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಅನಾಮಿಕ ವ್ಯಕ್ತಿ

ಬೆಂಗಳೂರು: ಬೆಂಗಳೂರಿನಲ್ಲಿ ಹೈಫೈ ಬಡಾವಣೆಯೊಂದರಲ್ಲಿ ವಾಸವಾಗಿರುವ ಯುವತಿಯೊಬ್ಬಳು ತನ್ನ ಪರಿಚಯಸ್ಥ ಹುಡುಗನಿಗೆ ತನ್ನ ಖಾಸಗಿ ವಿಡಿಯೋಗಳನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಳು. ಆದರೆ, ಆ ವಿಡಿಯೋಗಳು, ಆನ್ ಲೈನ್ ನಲ್ಲಿ ಲೀಕ್ ಆಗಿವೆ. ಸುಮಾರು 22 ಅಶ್ಲೀಲ ವೆಬ್ ಸೈಟ್ ಗಳಲ್ಲಿ ಆಕೆಯ ಖಾಸಗಿ ಫೋಟೋಗಳು ಕಾಣಿಸಿಕೊಂಡಿವೆ.

ಇದರಿಂದ ಗಾಬರಿಗೊಂಡಿರುವ ಆಕೆ ಪೊಲೀಸರಿಗೆ ದೂರು ಸಲ್ಲಿಸಿ, ಅವುಗಳನ್ನು ಅಲ್ಲಿಂದ ತೆಗೆದುಹಾಕುವಂತೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾಳೆ. ಇದರ ನಡುವೆಯೇ, ಅನಾಮಧೇಯ ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ, ಇನ್ ಸ್ಟಾಗ್ರಾಂನಲ್ಲಿರುವ ಆಕೆಯ ವಿಡಿಯೋಗಳನ್ನು ಡಿಲೀಟ್ ಮಾಡಿದರೆ 5 ಸಾವಿರ ರೂ. ಕಳುಹಿಸಬೇಕು. ಇಲ್ಲವಾದರೆ, ಮತ್ತಷ್ಟು ವೆಬ್ ಸೈಟ್ ಗಳಿಗೆ ಆ ವಿಡಿಯೋಗಳನ್ನು ಹರಡುವುದಾಗಿ ಬೆದರಿಸಿರುವ ಘಟನೆ ನಡೆದಿದೆ. ಮುಂದೇನಾಯ್ತು… ? ಇಲ್ಲಿದೆ ಮಾಹಿತಿ.
ಆಕೆಯ ಹೆಸರು ಕ್ಲಾರಾ (ಹೆಸರು ಬದಲಿಸಲಾಗಿದೆ). ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಇತ್ತೀಚೆಗೆ ತನ್ನ ಕೆಲವು ಖಾಸಗಿ ವಿಡಿಯೋಗಳನ್ನು ತನಗೆ ಆಪ್ತನಾಗಿರುವ ಅನೂಪ್ (ಹೆಸರು ಬದಲಿಸಲಾಗಿದೆ) ಎಂಬಾತನಿಗೆ ಕಳುಹಿಸಿದ್ದಾಳೆ. ಆತ ದೂರದ ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ಕೇಂಬ್ರಿಡ್ಜ್ ನಲ್ಲಿದ್ದಾನೆ. ಅಂದಹಾಗೆ, ಈಕೆ ಆ ವಿಡಿಯೋಗಳನ್ನು ಕಳುಹಿಸಿದ್ದು ಈಗಲ್ಲ, 2023ರಲ್ಲಿ!
ಹೌದು. 2023ರ ಆ. 18ರಂದು ಆಕೆ ಅನೂಪ್ ಗೆ (ಹೆಸರು ಬದಲಿಸಲಾಗಿದೆ) ತನ್ನ ಖಾಸಗಿ ಫೋಟೋ, ವಿಡಿಯೋಗಳನ್ನು ಕಳಿಸಿದ್ದಳು. ಆದರೆ, ಅವು ಈಗ ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ. ಸೋಷಿಯಲ್ ಮೀಡಿಯಾ ಆಯಪ್ ಮೂಲಕ ಆಕೆ ಕಳುಹಿಸಿದ್ದಾಳೆ. ಆದರೆ, ಆಕೆಯ ಆ ಖಾಸಗಿ ವಿಡಿಯೋಗಳು, ಫೋಟೋಗಳು 22 ಪೋರ್ನ್ ಪೋರ್ಟಲ್ ಗಳಲ್ಲಿ ಅವು ಕಾಣತೊಡಗಿವೆ.
ಇದು ಗೊತ್ತಾಗಿ ಗಲಿಬಿಲಿಯಾದ ಆಕೆ ನೇರವಾಗಿ ಇದೇ ಏಪ್ರಿಲ್ ನಲ್ಲಿ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಳು. ಅನೂಪ್ ಎಂಬಾತನಿಗೆ ತಾನು ವಿಡಿಯೋ ಕಳಿಸಿದ್ದು, ಅದನ್ನು ಕೇಳಿದ್ದಕ್ಕೆ ಅನೂಪ್ ತನಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾನೆ. ಹಾಗಾಗಿ, ನನ್ನ ವಿಡಿಯೋಗಳು ಆನ್ ಲೈನ್ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಳು. ಅತ್ತ, ಪೊಲೀಸರು ದೂರು ದಾಖಲಿಸಿಕೊಂಡು ಆಕೆಯ ಪರವಾಗಿ ವೆಬ್ ಸೈಟ್ ಗಳಿಗೆ ಮನವಿ ಮಾಡಿದ್ದರು. ಆದರೆ, ಆ ವಿಡಿಯೋಗಳು ಡಿಲೀಟ್ ಆಗಿಲ್ಲ.
ಇತ್ತೀಚೆಗೆ, ಆಕೆಗೊಮ್ಮ ಅನಾಮಿಕನು ಇನ್ ಸ್ಟಾ ಗ್ರಾಂ ಮೂಲಕ ಮೆಸೇಜ್ ಮಾಡಿ, ತಾನು ಈಗಾಗಲೇ ಇನ್ ಸ್ಟಾ ಗ್ರಾಂನಲ್ಲಿ ಆಕೆಯ ವಿಡಿಯೋಗಳನ್ನು ಹಾಕಿದ್ದು ಅವುಗಳನ್ನು ಡಿಲೀಟ್ ಮಾಡಲು ತನಗೆ 5 ಸಾವಿರ ರೂ. ನೀಡಬೇಕು ಎಂದು ಬೇಡಿಕೆಯಿಟ್ಟಿದ್ದಾನೆ. ಅಲ್ಲದೆ, ಯುಪಿಐ ಮೂಲಕ ಹಣ ಪಾವತಿಸುವಂತೆ ಒಂದು ನಂಬರನ್ನೂ ನೀಡಿದ್ದಾನೆ. ಹಣ ನೀಡದಿದ್ದರೆ, ಆಕೆಯ ಫೋಟೋ, ವಿಡಿಯೋಗಳು ಮತ್ತಷ್ಟು ಪೋರ್ನ್ ವೆಬ್ ಸೈಟ್ ಗಳಿಗೆ ಕಳಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಹಣ ಕಳುಹಿಸಲು ಕ್ಲಾರಾ ಒಪ್ಪಿಲ್ಲ. ಅದರಿಂದಾಗಿ, ಆಕೆಯ ಫೋಟೋ, ವಿಡಿಯೋಗಳು ಮತ್ತಷ್ಟು ವೆಬ್ ಸೈಟ್ ಗಳಲ್ಲಿ ಪ್ರದರ್ಶನವಾಗಲಾರಂಭಿಸಿವೆ.
ಮೊನ್ನೆ ಮಂಗಳವಾರ (ಆ. 5) ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಆಕೆ, ಆ ಅನಾಮಿಕ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿದ್ದಾಳೆ. ವಿಷಯ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಕ್ಲಾರಾಳ ಗೆಳೆಯ ಅನೂಪ್, ಅನಾಮಿಕ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಆರೋಪಿಗೆ ಪಲಾಯನದ ಐಡಿಯಾ ನೀಡಿ, ಹಣ ಕೊಟ್ಟಿದ್ದ ಪ್ರೇಯಸಿಗೂ ಸಂಕಷ್ಟ!
ಸುದ್ದಗುಂಟೆಪಾಳ್ಯದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಸಂತೋಷ್ ಕುಮಾರ್‌ಗೆ ಆತನ ಪ್ರೇಯಸಿಯೇ ಪರಾರಿಯಾಗಲು ಸಹಾಯ ಮಾಡಿದ್ದಾಳೆ. ಹೊಸಕೋಟೆಯ ನಿವಾಸಿಯಾಗಿರುವ ಈಕೆ, ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿಗೆ ಹಣ ನೀಡಿ ಕೇರಳಕ್ಕೆ ಪರಾರಿಯಾಗಲು ನೆರವು ನೀಡಿದ್ದಳು ಎಂದು ತಿಳಿದುಬಂದಿದೆ.
