ಭೀಮೆ ಭೋರ್ಗರೆತ: ಯಾದಗಿರಿ ಜಿಲ್ಲೆ ಮುಳುಗಡೆ!

ಯಾದಗಿರಿ: ಭೀಮಾ ನದಿ ಉಕ್ಕಿಹರಿದ ಪರಿಣಾಮ ಯಾದಗಿರಿ ನಗರದ ಗ್ರೀನ್ ಸಿಟಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಗೆ ಬರಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳ ಮೇಲೆಯೇ ಮೂರ್ನಾಲ್ಕು ಅಡಿಯಷ್ಟು ನೀರು ಆವರಿಸಿಕೊಂಡಿದೆ. ಖಾಸಗಿ ಶಾಲೆ, ಬಿಜೆಪಿ ಜಿಲ್ಲಾ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸೇರಿದಂತೆ ಹತ್ತಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಸಮಸ್ಯೆಯಾಗಿದೆ. ಮನೆಯಲ್ಲಿನ ದಿನ ಬಳಕೆ ವಸ್ತುಗಳು, ದವಸ ಧಾನ್ಯಗಳು ನೀರಲ್ಲಿ ಕೊಚ್ಚಿ ಹೋಗಿವೆ.

