Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕದನ ವಿರಾಮ ಮಾತುಕತೆಗೆ ಹಿನ್ನಡೆ: ಅಮೆರಿಕ ಅಧಿಕಾರಿಗಳ ಭೇಟಿಗೆ ಇರಾನ್ ನಕಾರ

Spread the love

ಟೆಹರಾನ್: ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನವಾಗಿ ನಡೆಯುತ್ತಿರುವ ಪ್ರಾದೇಶಿಕ ಮಧ್ಯಸ್ಥಿಕೆ ಪ್ರಯತ್ನಗಳು ಕೊನೆಗೊಂಡಿವೆ ಎಂದು ಸಂಧಾನಕಾರರು ಶುಕ್ರವಾರ ಪ್ರಕಟಿಸಿದ್ದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಸಂಘರ್ಷನಿರತ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮುಂದಾಳುತ್ವದಲ್ಲಿ ನಡೆದ ಪ್ರಯತ್ನ ಫಲ ನೀಡಿಲ್ಲ ಎಂದು ಟೆಹರಾನ್ ಅಧಿಕೃತವಾಗಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಇಸ್ಲಾಮಾಬಾದ್ ಗೆ ಮಾತುಕತೆಗಾಗಿ ಯಾವುದೇ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಅಮೆರಿಕದ ಬೇಡಿಕೆಗಳು ಸ್ವೀಕಾರಾರ್ಹವಲ್ಲ; ಆದ್ದರಿಂದ ಪ್ರಸ್ತುತ ಸಂಧಾನ ಮಾತುಕತೆ ಚೌಕಟ್ಟನ್ನು ರದ್ದುಪಡಿಸಲಾಗುವುದು ಎಂದು ಹೇಳಿದೆ.
ಈ ಮಾತುಕತೆ ಯತ್ನ ವಿಫಲವಾಗಿರುವುದರಿಂದ ಟರ್ಕಿ ಹಾಗೂ ಈಜಿಪ್ಟ್ ಸಮಸ್ಯೆ ನಿವಾರಣೆಯ ಪ್ರಯತ್ನ ಆರಂಭಿಸಿವೆ. ಉಭಯ ದೇಶಗಳ ನಡುವೆ ಮಾತುಕತೆಯ ಪ್ರಕ್ರಿಯೆ ಆರಂಭಿಸಲು ಆತಿಥ್ಯ ವಹಿಸಲು ಹೊಸ ತಾಣಗಳನ್ನು ಪ್ರಸ್ತಾಪಿಸಲು ಈ ದೇಶಗಳು ಮುಂದಾಗಿವೆ. ಕದನ ವಿರಾಮ ಮಾತುಕತೆಗೆ ವೇದಿಕೆಯಾಗಲು ಖತ‌ರ್ ಹಾಗೂ ಇಸ್ತಾಂಬುಲ್ ಉತ್ಸುಕತೆ ತೋರಿವೆ.


Spread the love
Share:

administrator

Leave a Reply

Your email address will not be published. Required fields are marked *