ಇಳಕಲ್ ಶಾಲೆಯಲ್ಲಿ ಗಂಭೀರ ಘಟನೆ: ಸ್ವಾತಂತ್ರ್ಯ ದಿನಾಚರಣೆ ನಾಟಕ ವಿಷಯಕ್ಕೆ ಶಿಕ್ಷಕಿಗೆ ಚಪ್ಪಲಿಯಿಂದ ಹಲ್ಲೆ!

ಇಳಕಲ್: ಇಲ್ಲಿನ ಆಲಂಪೂರ ಪೇಟೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನಾಟಕ ಮಾಡಿಸುವ ವಿಷಯಕ್ಕೆ ಶಿಕ್ಷಕ ಹಾಗೂ ಶಿಕ್ಷಕಿ ನಡುವೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಶಿಕ್ಷಕಿಯೊಬ್ಬರು ಶಿಕ್ಷಕನಿಗೆ ಚಪ್ಪಲಿ ಏಟು ನೀಡಿದ ಘಟನೆ ನಡೆದಿದೆ.

ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿಕ್ಷಕ ಅಂದಾನಯ್ಯ ಎಂಬುವರು ನೃತ್ಯ, ನಾಟಕಗಳನ್ನು ಮಾಡಿಸುತ್ತೇನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಇದೇ ವಿಷಯವನ್ನು ಶಿಕ್ಷಕಿ ಕೋಳೂರ ಎಂಬುವರ ಮುಂದೆ ಹೇಳಿದ್ದಾರೆ. ಆದರೆ ಶಿಕ್ಷಕಿ ನೃತ್ಯವೂ ಇಲ್ಲ, ನಾಟಕವೂ ಇಲ್ಲ, ಯಾರು ಮಾಡಿಸುತ್ತೇನೆ ಎಂದು ಹೇಳಿದ್ದಾರೋ ಅವರಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದಿದ್ದಾರೆ.
ಈ ವಿಷಯವನ್ನು ತೆಗೆದುಕೊಂಡು ಹೋದ ವಿದ್ಯಾರ್ಥಿಗಳು ಅಂದಾನಯ್ಯ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಅಂದಾನಯ್ಯ ಆ ಶಿಕ್ಷಕಿ ಬಳಿ ಹೋಗಿ ಏಕೆ ಹೀಗೆ ಮಾತನಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಶಿಕ್ಷಕಿ ಅದನ್ನು ಹೇಳೋದೇನು ಚಪ್ಪಲಿ ತಗೊಂಡು ಹೊಡೆಯುತ್ತೇನೆ ನೋಡು ಎಂದು ಎಲ್ಲರ ಎದುರಿಗೆ ಚಪ್ಪಲಿಯಿಂದ ಶಿಕ್ಷಕನ ಮೇಲೆ ಕೈ ಮಾಡಿದ್ದಾಗಿ ಆರೋಪಿಸಿರುವ ನೊಂದ ಶಿಕ್ಷಕ ಪೊಲೀಸ್ ಮೆಟ್ಟಿಲು ಏರಿದ್ದಾರೆ. ಪಿಎಸ್‌ಐ ಷಹಜಹಾನ ನಾಯಕ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.