ಪಾಕಿಸ್ತಾನದಿಂದ ಪ್ರೀತಿಗಾಗಿ ಬಂದ ಸೀಮಾ, ಯೂಟ್ಯೂಬ್ ಮೂಲಕ ಲಕ್ಷಾಧಿಪತಿ

ಪಬ್‌ಜಿ ಆಡುತ್ತಾ.. ಆನ್‌ಲೈನ್‌ನಲ್ಲಿ ಪ್ರೀತಿಸಿ.. ನೆರೆ ರಾಷ್ಟ್ರ ಪಾಕ್‌ನಿಂದ.. ಓಡಿ ಬಂದು ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದ ಮಹಿಳೆ ಸೀಮಾ ಹೈದರ್ ಇದೀಗ ಯೂಟ್ಯೂಬ್‌ನಲ್ಲಿ ಸ್ಟಾರ್ ಆಗಿದ್ದಾರೆ. ಕೂಲಿಕಾರನ ಹೆಂಡತಿಯಾಗಲು ಬಂದ ಈಕೆಯ ಯೂಟ್ಯೂಬ್ ಆದಾಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪಾಕಿಸ್ತಾನದಲ್ಲಿ ನಾಲ್ಕು ಮಕ್ಕಳ ತಾಯಿಯಾಗಿದ್ದ ಸೀಮಾ ಹೈದರ್ ಪ್ರೇಮಿ ಸಚಿನ್ ನನ್ನು ಅರಸಿ ಭಾರತಕ್ಕೆ ಬಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ರು. ಆದರೆ ಇದರಿಂದ ದೃತಿಗೆಡದ ಸೀಮಾ ಇದನ್ನೇ ಬಂಡವಾಳವಾಗಿಸಿಕೊಂಡು ಯೂಟ್ಯೂಬ್ ಚಾನಲ್ ಆರಂಭಿಸಿದ್ರು.
ಒಂದಲ್ಲ ಎರಡಲ್ಲ 6 ಯೂಟ್ಯೂಬ್ ಅಕೌಂಟ್ ಹೊಂದಿರುವ ಈಕೆ ಪ್ರಾರಂಭದಲ್ಲಿ 45 ಸಾವಿರ ಗಳಿಸಿದ್ರು. ಕ್ರಮೇಣ ಇವರ ಜನಪ್ರಿಯತೆ ಹೆಚ್ಚಾಗಿ ಇದೀಗ ತಿಂಗಳಿಗೆ ಸೀಮಾ ಬರೋಬ್ಬರಿ 80 ಸಾವಿರದಿಂದ 1 ಲಕ್ಷದವರೆಗೂ ಹಣ ಗಳಿಸ್ತಿದ್ದಾರೆ.
ಡಿಜಿಟಲ್ ಕಂಟೆಂಟ್ ಸೃಷ್ಠಿಕರ್ತೆಯಾಗಿ ಬದಲಾಗಿರೋ ಸೀಮಾ ಯೂಟ್ಯೂಬ್ ಪ್ರಾರಂಭಿಸೋರಿಗೆ ಕೆಲವಷ್ಟು ಸಲಹೆ ನೀಡೋ ಜೊತೆಗೆ ಹಣ ಗಳಿಕೆ ವಿಧಾನವನ್ನು ಕೂಡ ತಿಳಿಸಿದ್ದಾರೆ.
ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು ಡೈಲಿ ವ್ಲಾಗ್ ಜೊತೆಗೆ ಪ್ರಾಯೋಜಿತ, ಬ್ರ್ಯಾಂಡ್ ಪ್ರಮೋಷನ್ ಕೂಡಾ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ. ಇದೀಗ ಐದನೇ ಮಗುವಿಗೆ ತಾಯಿಯಾಗಿರೋ ಸೀಮಾ ಅದೃಷ್ಟ ಯೂಟ್ಯೂಬ್ ನಿಂದ ಖುಲಾಯಿಸಿದೆ. ಈಕೆಯ ಅದೃಷ್ಟ ಮಾತ್ರವಲ್ಲ.. ಸೀಮಾಂತರ ಪ್ರೇಮವನ್ನು ಒಪ್ಪಿ ಆಕೆಯನ್ನು ಮದುವೆಯಾದ ಆತನ ಪತಿ ಸಚಿನ್ ಹಣೆಬರಹ ಕೂಡಾ ಬದಲಾಗಿದೆ