ಹೆದ್ದಾರಿ ಹೊಂಡಕ್ಕೆ ಬಿದ್ದ ಸ್ಕೂಟರ್; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಮಂಗಳೂರು : ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಇತ್ತೀಚೆಗೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು, ಇದೀಗ ಮತ್ತೆ ಹೆದ್ದಾರಿ ಹೊಂಡಕ್ಕೆ ಸ್ಕೂಟರ್ ಒಂದು ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂತೂರು ಜಂಕ್ಷನ್‌ನಿಂದ ಕೆಪಿಟಿ ಕಡೆಗೆ ರಸ್ತೆಯ ಬಲ ಬದಿಯಲ್ಲಿ ಸಾಗುತ್ತಿದ್ದ ಸ್ಕೂಟರ್‌ನ ಚಕ್ರಗಳು ರಸ್ತೆಯಲ್ಲಿದ್ದ ಗುಂಡಿಗೆ ಇಳಿದಿದ್ದು, ಇದರಿಂದ ಸ್ಕೂಟರ್ ಏಕಾಏಕಿ ತಿರುಗಿ ನಿಂತಿದೆ. ಹಿಂದೆ ಯಾವುದೇ ವಾಹನಗಳು ಇಲ್ಲದಿದ್ದ ಕಾರಣ ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಜತೆಗೆ ಸವಾರನೂ ಚಾಕಚಕ್ಯತೆಯಿಂದ ಸ್ಕೂಟರ್ ರಸ್ತೆಗೆ ಬೀಳದಂತೆ ತಡೆದು ನಿಲ್ಲಿಸಿದ್ದಾರೆ. ಸ್ಕೂಟರ್‌ನ ಹಿಂದೆ ಮಹಿಳೆಯೊಬ್ಬರು ಕುಳಿತಿದ್ದರು. ಈ ದೃಶ್ಯ ಕಾರೊಂದರ ಡ್ಯಾಶ್ ಕೆಮರಾದಲ್ಲಿ ಸೆರೆಯಾಗಿದೆ.
